6.7 C
Munich
Wednesday, March 22, 2023

India vs Australia 2nd ODI Live Score IND vs AUS One Day International Cricket Match Updates in Kannada | IND vs AUS 2nd ODI Live Score: ಭಾರತದ 5ನೇ ವಿಕೆಟ್ ಪತನ; ರಾಹುಲ್- ಹಾರ್ದಿಕ್ ಔಟ್

ಓದಲೇಬೇಕು

  • 19 Mar 2023 02:30 PM (IST)

    ಹಾರ್ದಿಕ್ ಕೂಡ ಔಟ್

    ಬಂದ ತಕ್ಷಣ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಒಪ್ಪಿಸಿದ್ದಾರೆ. 10ನೇ ಓವರ್‌ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಸೀನ್ ಅಬಾಟ್ ಔಟ್ ಮಾಡಿದರು. ಅದ್ಭುತ ಕ್ಯಾಚ್ ಹಿಡಿದ ಸ್ಟೀವ್ ಸ್ಮಿತ್‌ಗೆ ಈ ವಿಕೆಟ್‌ನ ಹೆಚ್ಚಿನ ಕ್ರೆಡಿಟ್ ಸಲ್ಲುತ್ತದೆ. ಓವರ್‌ನ ಎರಡನೇ ಎಸೆತ ಹಾರ್ದಿಕ್ ಬ್ಯಾಟ್‌ನ ಹೊರಗಿನ ಅಂಚಿಗೆ ಬಡಿಯಿತು. ಸ್ಟೀವ್ ಸ್ಮಿತ್ ಮೊದಲ ಸ್ಲಿಪ್‌ನಲ್ಲಿ ಅದ್ಭುತ ಡೈವ್ ಮಾಡಿ ಕ್ಯಾಚ್ ಪಡೆದರು.

  • 19 Mar 2023 02:24 PM (IST)

    ಕೆಎಲ್ ರಾಹುಲ್ ಔಟ್

    ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ 9ನೇ ಓವರ್ ಮೂರನೇ ಎಸೆತದಲ್ಲಿ ಭಾರತದ ಖಾತೆಗೆ 1 ರನ್ ಬಂದಿತ್ತು. ನಾಲ್ಕನೇ ಎಸೆತದಲ್ಲಿ ಕೆಎಲ್ ರಾಹುಲ್ ಎಲ್ಬಿಡಬ್ಲ್ಯೂ ಆಗಿ ಔಟಾದರು.

  • 19 Mar 2023 02:24 PM (IST)

    ಭಾರತ 50 ರನ್‌ಗಳ ಸಮೀಪದಲ್ಲಿದೆ

    ಭಾರತದ ಸ್ಕೋರ್ 8 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 47 ರನ್ ಆಗಿದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರೀಸ್‌ನಲ್ಲಿದ್ದಾರೆ. ಕೆಎಲ್ ರಾಹುಲ್ 9 ಮತ್ತು ವಿರಾಟ್ ಕೊಹ್ಲಿ 21 ರನ್ ಗಳಿಸಿ ಆಡುತ್ತಿದ್ದಾರೆ.

  • 19 Mar 2023 02:23 PM (IST)

    ಭಾರತ 7 ಓವರ್‌ಗಳ ನಂತರ ಮೂರು ವಿಕೆಟ್‌ಗೆ 42 ರನ್

    ಮೊದಲ ಐದು ಓವರ್‌ಗಳಲ್ಲಿ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತದ ಸ್ಕೋರ್ 7 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 42 ರನ್ ಆಗಿದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರೀಸ್‌ನಲ್ಲಿದ್ದಾರೆ. 7ನೇ ಓವರ್‌ನಲ್ಲಿ ಭಾರತ ಒಟ್ಟು 8 ರನ್ ಗಳಿಸಿತು.

  • 19 Mar 2023 01:59 PM (IST)

    ರೋಹಿತ್- ಸೂರ್ಯ ಔಟ್

    4ನೇ ಓವರ್​ವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಭಾರತದ ಇನ್ನಿಂಗ್ಸ್​ 5ನೇ ಓವರ್​ನಲ್ಲಿ ಹಳಿ ತಪ್ಪಿದೆ. 5ನೇ ಓವರ್ 4ನೇ ಎಸೆತದಲ್ಲಿ ರೋಹಿತ್, ಸ್ಮಿತ್​ಗೆ ಕ್ಯಾಚಿತ್ತು ಔಟಾದರೆ, ಆ ಬಳಿಕ ಬಂದ ಸೂರ್ಯಕುಮಾರ್ 5ನೇ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 19 Mar 2023 01:48 PM (IST)

    ಕೊಹ್ಲಿ- ರೋಹಿತ್ ಬೊಂಬಾಟ್ ಬ್ಯಾಟಿಂಗ್

    ಗಿಲ್ ವಿಕೆಟ್ ಬಳಿಕ ಜೊತೆಯಾಗಿರುವ ಕೊಹ್ಲಿ ಹಾಗೂ ರೋಹಿತ್ ಬೌಂಡರಿಗಳ ಸುರಿಮಳೆಗೈಯುತ್ತಿದ್ದಾರೆ. ಈಗಾಗಲೇ ಭಾರತದ ಇನ್ನಿಂಗ್ಸ್​ನ 3 ಓವರ್​ ಮುಗಿದಿದ್ದು, ಇದರಲ್ಲಿ ಈ ಜೋಡಿ  29 ರನ್ ಕಲೆಹಾಕಿದೆ

  • 19 Mar 2023 01:38 PM (IST)

    ಗಿಲ್ ಔಟ್

    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಹಿನ್ನಡೆಯುಂಟಾಗಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್ ಶೂನ್ಯಕೆ ವಿಕಟ್ ಒಪ್ಪಿಸಿದ್ದಾರೆ.

  • 19 Mar 2023 01:15 PM (IST)

    ಆಸ್ಟ್ರೇಲಿಯಾ ತಂಡ

    ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಎಲಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ

  • 19 Mar 2023 01:13 PM (IST)

    ಭಾರತ ತಂಡ

    ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಮಿ.

  • 19 Mar 2023 01:05 PM (IST)

    ಟಾಸ್ ಗೆದ್ದ ಆಸೀಸ್

    ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ.

  • Source link

    ಇನ್ನಷ್ಟು ಲೇಖನಗಳು

    LEAVE A REPLY

    Please enter your comment!
    Please enter your name here

    ಇತ್ತೀಚಿನ ಲೇಖನ

    error: Content is protected !!