IND vs AUS: ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ರಾಹುಲ್ ಹಾಗೂ ಜಡೇಜಾ ಅವರ ಶತಕದ ಜೊತೆಯಾಟದಿಂದ ಗೆದ್ದು ಬೀಗಿದ್ದ ಭಾರತ, ವಿಶಾಖಪಟ್ಟಣದಲ್ಲಿ ಹೀನಾಯ ಸೋಲು ಅನುಭವಿಸಿದೆ.

ಆಸ್ಟ್ರೇಲಿಯಾ ತಂಡ
ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ರಾಹುಲ್ ಹಾಗೂ ಜಡೇಜಾ ಅವರ ಶತಕದ ಜೊತೆಯಾಟದಿಂದ ಗೆದ್ದು ಬೀಗಿದ್ದ ಭಾರತ, ವಿಶಾಖಪಟ್ಟಣದಲ್ಲಿ ಹೀನಾಯ ಸೋಲು ಅನುಭವಿಸಿದೆ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ 55 ನಿಮಿಷ ಮತ್ತು 66 ಎಸೆತಗಳಲ್ಲಿ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. ಮೊದಲಿಗೆ ಬೌಲಿಂಗ್ನಲ್ಲಿ ಮಾರಕ ದಾಳಿ ನಡೆಸಿ, ಮಿಚೆಲ್ ಸ್ಟಾರ್ಕ್ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕೇವಲ 117 ರನ್‌ಗಳಿಗೆ ಪೆವಿಲಿಯನ್ ಸೇರುವಂತೆ ಮಾಡಿದರೆ, ಆ ನಂತರ ಬ್ಯಾಟಿಂಗ್ನಲ್ಲಿ ಸುನಾಮಿ ಸೃಷ್ಟಿಸಿದ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಕೇವಲ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಪಂದ್ಯ ಮುಗಿಸಿದರು.