India vs Australia 3rd Test: 88 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರೋಹಿತ್ ಶರ್ಮಾ (12) ಹಾಗೂ ಶುಭ್ಮನ್ ಗಿಲ್ (5) ಬೇಗನೆ ನಿರ್ಗಮಿಸಿ ನಿರಾಸೆ ಮೂಡಿಸಿದರು.
India vs Australia 3rd Test: ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ (IND vs AUS) ನಡುವಣ 3ನೇ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ (Team India) ಕೇವಲ 109 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ ಅನ್ನು 197 ರನ್ಗಳಿಗೆ ಅಂತ್ಯಗೊಳಿಸಿತ್ತು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ.
88 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರೋಹಿತ್ ಶರ್ಮಾ (12) ಹಾಗೂ ಶುಭ್ಮನ್ ಗಿಲ್ (5) ಬೇಗನೆ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನು 13 ರನ್ಗಳಿಸಿ ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು. ಆ ಬಳಿಕ ಬಂದ ರವೀಂದ್ರ ಜಡೇಜಾ 7 ರನ್ಗಳಿಸಲಷ್ಟೇ ಶಕ್ತರಾದರು.
ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಕ್ರೀಸ್ ಕಚ್ಚಿ ನಿಲ್ಲುವ ಸೂಚನೆ ನೀಡಿದರು. ರಕ್ಷಣಾತ್ಮಕ ಆಟದೊಂದಿಗೆ 26 ರನ್ ಬಾರಿಸಿದ ಅಯ್ಯರ್ ಅವರು ಉಸ್ಮಾನ್ ಖ್ವಾಜಾ ಅವರ ಅದ್ಭುತ ಫೀಲ್ಡಿಂಗ್ ಕಾರಣ
ಮಿಚೆಲ್ ಸ್ಟಾರ್ಕ್ ಎಸೆದ 38ನೇ ಓವರ್ನ 2ನೇ ಎಸೆತವನ್ನು ಶ್ರೇಯಸ್ ಅಯ್ಯರ್ ಲೆಗ್ ಸೈಡ್ನತ್ತ ಫ್ಲಿಕ್ ಮಾಡಲು ಯತ್ನಿಸಿದ್ದರು. ಆದರೆ ಮುಂಭಾಗದಲ್ಲಿ ಫೀಲ್ಡಿಂಗ್ನಲ್ಲಿ ಉಸ್ಮಾನ್ ಖ್ವಾಜಾ ತಕ್ಷಣವೇ ಎಡಭಾಗಕ್ಕೆ ಜಿಗಿದು ಕೆಳ ಹಂತದಲ್ಲಿದ್ದ ಚೆಂಡನ್ನು ಒಂದೇ ಕೈಯಲ್ಲಿ ಅದ್ಭುತವಾಗಿ ಹಿಡಿದರು. ಈ ಅದ್ಭುತ ಫೀಲ್ಡಿಂಗ್ ಕಾರಣ ಶ್ರೇಯಸ್ ಅಯ್ಯರ್ (26) ಹೊರ ನಡೆಯಬೇಕಾಯಿತು.
ಇದೀಗ ಉಸ್ಮಾನ್ ಖ್ವಾಜಾ ಅವರ ಈ ಅತ್ಯಾದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಆಸೀಸ್ ಕ್ರಿಕೆಟಿಗನ ಅತ್ಯುತ್ತಮ ಡೈವಿಂಗ್ ಕ್ಯಾಚ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
— IPLT20 Fan (@FanIplt20) March 2, 2023
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭ್ಮನ್ ಗಿಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ , ಶ್ರೀಕರ್ ಭರತ್ ( ವಿಕೆಟ್ ಕೀಪರ್ ) , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಉಮೇಶ್ ಯಾದವ್ , ಮೊಹಮ್ಮದ್ ಸಿರಾಜ್
ಇದನ್ನೂ ಓದಿ: Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಟ್ರಾವಿಸ್ ಹೆಡ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ (ನಾಯಕ) , ಪೀಟರ್ ಹ್ಯಾಂಡ್ಸ್ಕ್ಯಾಂಬ್ , ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಟಾಡ್ ಮರ್ಫಿ , ಮ್ಯಾಥ್ಯೂ ಕುಹ್ನೆಮನ್.