5.5 C
Munich
Friday, March 3, 2023

Ipl 2023 ms dhoni reaches chennai for csk training camp starts from march 3rd friday | IPL 2023: ತಿಂಗಳಿಗೂ ಮುಂಚೆಯೇ ಸಮರಾಭ್ಯಾಸ ಶುರು ಮಾಡಿದ ಸಿಎಸ್​ಕೆ; ಚೆನ್ನೈಗೆ ಧೋನಿ ಎಂಟ್ರಿ

ಓದಲೇಬೇಕು

pruthvi Shankar |

Updated on: Mar 03, 2023 | 5:04 PM

IPL 2023: ಧೋನಿ ಹೊರತಾಗಿ, ಅಂಬಟಿ ರಾಯುಡು ಮತ್ತು ಭಾರತದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಸೇರಿದಂತೆ ಅನೇಕ ಕ್ರಿಕೆಟಿಗರು ಸಹ ಶಿಬಿರಕ್ಕಾಗಿ ಚೆನ್ನೈ ತಲುಪಿದ್ದು, ಶುಕ್ರವಾರದಿಂದ ಹೊಸ ಸೀಸನ್​ನ ತಯಾರಿಯನ್ನು ಪ್ರಾರಂಭಿಸಲಿದ್ದಾರೆ.

Mar 03, 2023 | 5:04 PM

16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳ ತಯಾರಿ ನಿಧಾನವಾಗಿ ಆರಂಭವಾಗಿದೆ. ಒಂದೆಡೆ, ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಫ್ರಾಂಚೈಸಿಗಳು ಪ್ರಸ್ತುತ WPL ಗೆ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 16 ನೇ ಸೀಸನ್‌ನಲ್ಲಿ ಮತ್ತೊಮ್ಮೆ ಟ್ರೋಫಿಯನ್ನು ಎತ್ತಿಹಿಡಿಯುವ ಸಲುವಾಗಿ ತಯಾರಿ ಆರಂಭಿಸಿದೆ.

2021 ರ ಸೀಸನ್ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್‌ಕೆ, ಮಾರ್ಚ್ 2 ಶುಕ್ರವಾರದಿಂದ ಹೊಸ ಸೀಸನ್ ತಯಾರಿ ಶಿಬಿರವನ್ನು ಪ್ರಾರಂಭಿಸುತ್ತಿದೆ. ತಂಡದ ಈ ತರಬೇತಿ ಶಿಬಿರವು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (ಚೆಪಾಕ್) ಪ್ರಾರಂಭವಾಗಲಿದೆ. ಹೀಗಾಗಿ ಹೆಚ್ಚಿನ ಭಾರತೀಯರು ಆಟಗಾರರು ಶಿಭಿರದಲ್ಲಿ ಭಾಗವಹಿಸುತ್ತಿದ್ದಾರೆ.

ತಂಡದ ನಾಯಕ ಧೋನಿ ಶುಕ್ರವಾರ ಈ ಶಿಬಿರಕ್ಕೆ ಆಗಮಿಸಲಿದ್ದಾರೆ ಎಂದು ತಂಡದ ಸಿಇಒ ಕಾಶಿ ವಿಶ್ವನಾಥ್ ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ ಧೋನಿ ಗುರುವಾರವೇ ಚೆನ್ನೈಗೆ ತಲುಪಿದ್ದು, ಅಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ಧೋನಿ ಅಭಿಮಾನಿಯೊಬ್ಬನ ಜೊತೆ ಫೋಟೋ ಕೂಡ ತೆಗೆಸಿಕೊಂಡರು.

ಧೋನಿ ಹೊರತಾಗಿ, ಅಂಬಟಿ ರಾಯುಡು ಮತ್ತು ಭಾರತದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಸೇರಿದಂತೆ ಅನೇಕ ಕ್ರಿಕೆಟಿಗರು ಸಹ ಶಿಬಿರಕ್ಕಾಗಿ ಚೆನ್ನೈ ತಲುಪಿದ್ದು, ಶುಕ್ರವಾರದಿಂದ ಹೊಸ ಸೀಸನ್​ನ ತಯಾರಿಯನ್ನು ಪ್ರಾರಂಭಿಸಲಿದ್ದಾರೆ.

4 ವರ್ಷಗಳ ಕಾಯುವಿಕೆಯ ನಂತರ, ಮತ್ತೊಮ್ಮೆ ಸಿಎಸ್​ಕೆ ತಂಡ ಚೆನ್ನೈನಲ್ಲಿ ತನ್ನ ಅಭಿಮಾನಿಗಳ ಮುಂದೆ ಪಂದ್ಯವನ್ನಾಡಲಿದೆ. ಕೊರೊನಾದಿಂದಾಗಿ ಸತತ ಮೂರು ಸೀಸನ್‌ಗಳ ನಂತರ ಐಪಿಎಲ್ ತನ್ನ ಹಳೆಯ ಹೋಮ್-ಅವೇ ಸ್ವರೂಪಕ್ಕೆ ಮರಳಿದೆ. ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಜೊತೆಗೆ ಸಿಎಸ್‌ಕೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೊಸ ಸೀಸನ್ ಮಾರ್ಚ್ 31 ರಂದು ಚೆನ್ನೈ ಮತ್ತು ಗುಜರಾತ್ ನಡುವಿನ ಮುಖಾಮುಖಿಯೊಂದಿಗೆ ಪ್ರಾರಂಭವಾಗಲಿದೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!