James Anderson Records: ಇದಾಗ್ಯೂ ಟೆಸ್ಟ್ ಕ್ರಿಕೆಟ್ನಲ್ಲಿನ ಐತಿಹಾಸಿಕ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್ಗೆ 116 ವಿಕೆಟ್ಗಳ ಅವಶ್ಯಕತೆಯಿದೆ.
Feb 25, 2023 | 7:25 PM







ತಾಜಾ ಸುದ್ದಿ
TV9kannada Web Team | Edited By: Zahir PY
Updated on: Feb 25, 2023 | 7:25 PM
Feb 25, 2023 | 7:25 PM
ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಮಾರಕ ದಾಳಿ ಮುಂದುವರೆಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಜಿಮ್ಮಿ, ಕಿವೀಸ್ ತಂಡದ ಅಗ್ರ ಕ್ರಮಾಂಕದ ಮೂವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಜೇಮ್ಸ್ ಅ್ಯಂಡರ್ಸನ್ ಅವರ ವಿಕೆಟ್ ಸಂಖ್ಯೆ 685 ಕ್ಕೇರಿದೆ.
ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ಕ್ಕೂ ಅಧಿಕ ವಿಕೆಟ್ ಪಡೆದಿರುವುದು ಕೇವಲ ಇಬ್ಬರು ಬೌಲರ್ಗಳು. ಅವರಿಬ್ಬರಲ್ಲಿ ಒಬ್ಬರ ದಾಖಲೆಯನ್ನು ಮುರಿಯಲು ಇದೀಗ ಜೇಮ್ಸ್ ಅ್ಯಂಡರ್ಸನ್ ದಾಪುಗಾಲಿಟ್ಟಿದ್ದಾರೆ.
ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎಂಬ ವಿಶ್ವ ದಾಖಲೆ ಆಸ್ಟ್ರೇಲಿಯಾದ ಶೇನ್ ವಾರ್ನ್ ಹೆಸರಿನಲ್ಲಿದೆ. ಆಸೀಸ್ ಸ್ಪಿನ್ ಮಾಂತ್ರಿಕ 273 ಇನಿಂಗ್ಸ್ ಮೂಲಕ ಒಟ್ಟು 708 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.
ಇದೀಗ 332 ಇನಿಂಗ್ಸ್ ಮೂಲಕ 685 ವಿಕೆಟ್ ಕಬಳಿಸಿರುವ ಜೇಮ್ಸ್ ಅ್ಯಂಡರ್ಸನ್ಗೆ ಶೇನ್ ವಾರ್ನ್ ದಾಖಲೆ ಮುರಿಯಲು ಬೇಕಿರುವುದು ಕೇವಲ 24 ವಿಕೆಟ್ಗಳು ಮಾತ್ರ. ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿರುವ ಅ್ಯಂಡರ್ಸನ್ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಜೂನ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಬಹುದು.
ಇದಾಗ್ಯೂ ಟೆಸ್ಟ್ ಕ್ರಿಕೆಟ್ನಲ್ಲಿನ ಐತಿಹಾಸಿಕ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್ಗೆ 116 ವಿಕೆಟ್ಗಳ ಅವಶ್ಯಕತೆಯಿದೆ. ಅಂದರೆ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ.
230 ಟೆಸ್ಟ್ ಇನಿಂಗ್ಸ್ನಲ್ಲಿ 44039 ಚೆಂಡೆಸೆದಿರುವ ಮುತ್ತಯ್ಯ ಮುರಳೀಧರನ್ ಒಟ್ಟು 800 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಎಂಟು ನೂರು ವಿಕೆಟ್ ಉರುಳಿಸಿದ ಏಕೈಕ ಬೌಲರ್ ಆಗಿ ಅಗ್ರಸ್ಥಾನದಲ್ಲಿದ್ದಾರೆ.
ಇದೀಗ 332 ಇನಿಂಗ್ಸ್ಗಳಲ್ಲಿ 38131 ಚೆಂಡೆಸೆದಿರುವ ಜೇಮ್ಸ್ ಅ್ಯಂಡರ್ಸನ್ 685 ವಿಕೆಟ್ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಜೇಮ್ಸ್ ಅ್ಯಂಡರ್ಸನ್ ತಮ್ಮದಾಗಿಸಿಕೊಂಡಿದ್ದಾರೆ.