4.3 C
Munich
Tuesday, March 7, 2023

Jamkhandi: Unable to bear the debt, the owner of the salon committed suicide | ಜಮಖಂಡಿ: ಸಾಲಬಾಧೆ ತಾಳಲಾರದೆ ಸಲೂನ್ ಮಾಲೀಕ ಆತ್ಮಹತ್ಯೆ

ಓದಲೇಬೇಕು

ಸಾಲಬಾಧೆ ತಾಳಲಾರದೇ ಸಲೂನ್ ಮಾಲೀಕ ಆತಹತ್ಯೆ ಮಾಡಿಕೊಂಡ ಘಟನೆ ಜಮಖಂಡಿ ನಗರದ ಕೃಷ್ಣಪುರ ಗಲ್ಲಿಯಲ್ಲಿ ನಡೆದಿದೆ. ಮಾ.6ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಸಾಲಬಾಧೆ ತಾಳಲಾರದೆ ಸಲೂನ್ ಮಾಲೀಕ ಆತ್ಮಹತ್ಯೆ

ಬಾಗಲಕೋಟೆ: ಸಾಲಬಾಧೆ ತಾಳಲಾರದೇ ಸಲೂನ್ ಮಾಲೀಕ ಆತಹತ್ಯೆ ಮಾಡಿಕೊಂಡ ಘಟನೆ ಜಮಖಂಡಿ ನಗರದ ಕೃಷ್ಣಪುರ ಗಲ್ಲಿಯಲ್ಲಿ ನಡೆದಿದೆ. ಆನಂದ ಮಹಾದೇವ ಹೊನ್ನಿ(35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಾರ್ಚ 6 ರ ಸಂಜೆ ವಿಷ ಸೇವಿಸಿದ್ದ ಆನಂದನನ್ನ ನಗರದ ತಾಲೂಕಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಇಂದು(ಮಾ.7) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಕುರಿತುವ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಗ್ಗದಿಂದ ಕತ್ತು ಬಿಗಿದು ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ

ರಾಮನಗರ: ಹಗ್ಗದಿಂದ ಕತ್ತು ಬಿಗಿದು ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ತಿಮ್ಮಸಂದ್ರ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಸುಮಾರು 35 ರಿಂದ 40 ವರ್ಷದ ವ್ಯಕ್ತಿಯನ್ನ ಬೇರೆಡೆ ಕೊಲೆಗೈದು ಮೃತದೇಹ ತಂದು ಹಾಕಿರುವ ದುಷ್ಕರ್ಮಿಗಳು. ಈ ಕುರಿತು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ವೈದ್ಯನನ್ನು ಅಪಹರಿಸಿ ಕೊಲೆಗೈದಿದ್ದ ಹಂತಕರನ್ನ ಒಂದು ತಿಂಗಳ ಬಳಿಕ ಬಂಧಿಸಿದ ಪೊಲೀಸರು

ಅರಣ್ಯಕ್ಕೆ ಬೆಂಕಿ ಹಾಕಿದ ಓರ್ವನ ಬಂಧನ, ಇಬ್ಬರು ನಾಪತ್ತೆ

ಚಿಕ್ಕಮಗಳೂರು: ಅರಣ್ಯಕ್ಕೆ ಬೆಂಕಿ ಹಾಕಿ ಹತ್ತಾರು ಎಕರೆ ಅರಣ್ಯ ನಾಶಕ್ಕೆ ಕಾರಣವಾಗಿದ್ದ ಓರ್ವನನ್ನ ಬಂಧಿಸಲಾಗಿದ್ದು, ಮತ್ತಿಬ್ಬರ ಪತ್ತೆಗಾಗಿ ಹುಡುಕಾಟ ನಡೆದಿದೆ. ಕಳೆದ ಭಾನುವಾರ ರಾತ್ರಿ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಮೀಸಲು ಅರಣ್ಯಕ್ಕೆ ಪ್ರದೇಶಕ್ಕೆ ಬೆಂಕಿ ಬಿದ್ದು ಹತ್ತಾರು ಎಕರೆ ಅರಣ್ಯ ನಾಶವಾಗಿತ್ತು. ಈ ಕೃತ್ಯಕ್ಕೆ ಕಾರಣರಾದ ರಘು ಎಂಬಾತನನ್ನ ಇದೀಗ ಬಾಳೆಹೊನ್ನೂರು ಅರಣ್ಯಾಧಿಕಾರಿಗಳು ಬಂಧಿಸಲಾಗಿದ್ದು, ಮತ್ತಿಬ್ಬರಾದ ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾಗಿದ್ದಾರೆ.

ಕಾಡ್ಗಿಚ್ಚಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಬೈಕ್ ಭಸ್ಮ

ಇನ್ನು ಈ ಬೆಂಕಿಯ ಜ್ವಾಲೆಗೆ ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಆವರಿಸಿದ್ದು, ನೂರಾರು ಎಕರೆ ಅರಣ್ಯ , ತೋಟ ಬೆಂಕಿಗಾಹುತಿಯಾಗಿದೆ. ಇದರ ಜೊತೆಗೆ ಬೆಂಕಿ ನಂದಿಸಲು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್​ಗಳು ಭಸ್ಮವಾಗಿದ್ದು, ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ. ಗಾಳಿಯಲ್ಲಿ ಬಂದ ಬೆಂಕಿಯ ಕಿಡಿಯಿಂದ ಬೈಕ್​ ಹೊತ್ತಿ ಉರಿದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಮೂರು ಬೈಕ್​ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!