1.7 C
Munich
Wednesday, March 8, 2023

Jammu Kashmir News 2 terrorist associates of LeT arrested in Baramulla | ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಎಲ್​​ಇಟಿ ಉಗ್ರರ ಬಂಧನ; ಎಕೆ-47 ಮ್ಯಾಗಜೀನ್​ಗಳು, ಮದ್ದು ಗುಂಡು ವಶ

ಓದಲೇಬೇಕು

ಖುರ್ಷಿದ್ ಅಹ್ಮದ್ ಖಾನ್ ಮತ್ತು ರೆಯಾಜ್ ಅಹ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ. 15 ಸುತ್ತುಗಳ ಎರಡು ಎಕೆ-47 ಮ್ಯಾಗಜೀನ್‌ಗಳು, ನಿಷೇಧಿತ ಸಜ್ಜು ಎಲ್‌ಟಿ/ಟಿಆರ್‌ಎಫ್‌ನ 20 ಖಾಲಿ ಪೋಸ್ಟರ್‌ಗಳು ಮತ್ತು ಇತರ ವಸ್ತುಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಖುರ್ಷಿದ್ ಅಹ್ಮದ್ ಖಾನ್, ರಿಯಾಜ್ ಅಹ್ಮದ್ ಖಾನ್ ಬಂಧಿತ ಉಗ್ರರು. ಬಂಧಿತರಿಂದ ಎಕೆ-47 ಮ್ಯಾಗಜೀನ್​ಗಳು, ಮದ್ದು ಗುಂಡು ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಪ್ರಕಾರ, ಭಯೋತ್ಪಾದಕರು ಅಡಗಿರುವ ಬಗ್ಗೆ ಸಿಕ್ಕ ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸರು 176 bn ಸಿಆರ್‌ಪಿಎಫ್ ಜೊತೆಗೆ ಮೊಂಚ್‌ಖುದ್ ಕುಂಜರ್‌ನಲ್ಲಿ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಭೋಪಾಲ್ – ಉಜ್ಜೈನ್ ರೈಲು ಸ್ಫೋಟ, 7 ಅಪರಾಧಿಗಳಿಗೆ ಮರಣದಂಡನೆ; ಮೋದಿ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದ ಉಗ್ರರು

“ಶೋಧ ಕಾರ್ಯಾಚರಣೆಯ ವೇಳೆ, ಝಂಡ್ಪಾಲ್ ಕುಂಜರ್ ನಿವಾಸಿಗಳಾದ ಖುರ್ಷಿದ್ ಅಹ್ಮದ್ ಖಾನ್ ಮತ್ತು ರೆಯಾಜ್ ಅಹ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ. 15 ಸುತ್ತುಗಳ ಎರಡು ಎಕೆ-47 ಮ್ಯಾಗಜೀನ್‌ಗಳು, ನಿಷೇಧಿತ ಸಜ್ಜು ಎಲ್‌ಟಿ/ಟಿಆರ್‌ಎಫ್‌ನ 20 ಖಾಲಿ ಪೋಸ್ಟರ್‌ಗಳು ಮತ್ತು ಇತರ ವಸ್ತುಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ಬಂಧಿತ ಉಗ್ರೆಉ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್‌ಇಟಿ (ಲಷ್ಕರ್-ಎ-ತೊಯ್ಬಾ) ಜೊತೆ ಸಹಚರರಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರು ಕುಂಜರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಅಕ್ರಮ ಮದ್ದುಗುಂಡುಗಳನ್ನು ತಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!