1.1 C
Munich
Saturday, March 4, 2023

JNU New Rules: Rs 20,000 Fine For Dharna, Admission Cancellation For Violence | JNU New Rules: ವಿದ್ಯಾರ್ಥಿಗಳು ಧರಣಿ ಮಾಡಿದ್ರೆ 20 ಸಾವಿರ ರೂ, ದಂಡ, ಹಿಂಸಾಚಾರ ಮಾಡಿದ್ರೆ ಪ್ರವೇಶ ರದ್ದು

ಓದಲೇಬೇಕು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಕಾಲೇಜಿನ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಯು ಧರಣಿ ಮಾಡಿದರೆ 20 ಸಾವಿರ ರೂ. ಅಥವಾ 30 ಸಾವಿರ ರೂ. ದಂಡ ತೆರಬೇಕಾಗುತ್ತದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಕಾಲೇಜಿನ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಯು ಧರಣಿ ಮಾಡಿದರೆ 20 ಸಾವಿರ ರೂ. ಅಥವಾ 30 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಹಿಂಸಾಚಾರದಲ್ಲಿ ಪಾಲ್ಗೊಂಡರೆ ಪ್ರವೇಶ ರದ್ದುಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಜೆಎನ್‌ಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸರಿಯಾದ ನಡವಳಿಕೆಯ 10-ಪುಟದ ನಿಯಮಗಳು ಪ್ರತಿಭಟನೆ ಮತ್ತು ಫೋರ್ಜರಿಯಂತಹ ವಿವಿಧ ಕೃತ್ಯಗಳಿಗೆ ಶಿಕ್ಷೆಯನ್ನು ಸೂಚಿಸುತ್ತವೆ.

ಈ ನಿಯಮಗಳು ಫೆಬ್ರವರಿ 3 ರಿಂದ ಜಾರಿಗೆ ಬಂದಿವೆ, ಶಿಸ್ತು ಮತ್ತು ನಡವಳಿಕೆಯ ನಿಯಮಗಳು ಎಂದು ಕರೆಯಲಾಗಿದೆ. ಈ ನಿಯಮಗಳು ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. 10 ಪುಟಗಳ ನಿಯಮದಲ್ಲಿ 17 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಮತ್ತಷ್ಟು ಓದಿ: ಜೆಎನ್​ಯುನಲ್ಲಿ ಪೆರಿಯಾರ್, ಕಾರ್ಲ್​ ಮಾರ್ಕ್ಸ್​ ಭಾವಚಿತ್ರಗಳ ಧ್ವಂಸ: ವಿದ್ಯಾರ್ಥಿಗಳ ಈ ನಡೆಗೆ ಸ್ಟಾಲಿನ್ ಪ್ರತಿಕ್ರಿಯೆ

ಜೂಜು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಳ್ಳುವುದು, ನಿಂದನೀಯ ಭಾಷೆಗಳ ಬಳಕೆ, ಫೋರ್ಜರಿ ಪ್ರಕರಣಗಳು ಕೂಡ ಸೇರಿವೆ.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರನ್ನೂ ಒಳಗೊಂಡಿರುವ ವಿಷಯಗಳನ್ನು ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗೆ ತಿಳಿಸಬಹುದು.

ಲೈಂಗಿಕ ಕಿರುಕುಳ, ರಾಗಿಂಗ್ ಹಾಗೂ ಕೋಮುಸೌಹಾರ್ದತೆಗೆ ಧಕ್ಕೆ ತರುವ ವಿಚಾರಗಳು ಪ್ರಾಕ್ಟರ್ ಕಚೇರಿಯ ವ್ಯಾಪ್ತಿಗೆ ಬರಲಿವೆ. ವಾಸ್ತವವಾಗಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ಹಲವು ಪ್ರತಿಭಟನೆಗಳು ನಡೆದವು. ಈ ಕಾರಣಗಳಿಂದಾಗಿ ಹೊಸ ನಿಯಮಗಳನ್ನು ಜಾರಿಗೆ ತರುವುದು ವಿಶ್ವವಿದ್ಯಾಲಯಕ್ಕೆ ಅನಿವಾರ್ಯವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!