9.2 C
Munich
Thursday, March 23, 2023

Jr NTR 30 movie muhurtha will take place on 23rd March | NTR 30: ಮಾರ್ಚ್​ 23ರಂದು ಜೂನಿಯರ್​ ಎನ್​ಟಿಆರ್​ ಹೊಸ ಸಿನಿಮಾಗೆ ಅದ್ದೂರಿ ಮುಹೂರ್ತ

ಓದಲೇಬೇಕು

Jr NTR | Janhvi Kapoor: ಮುಹೂರ್ತದ ಸುದ್ದಿ ತಿಳಿಸಲು ‘ಎನ್​ಟಿಆರ್​ 30’ ಚಿತ್ರತಂಡ ಹೊಸ ಪೋಸ್ಟರ್​ ಹಂಚಿಕೊಂಡಿದೆ. ಜೂನಿಯರ್​ ಎನ್​ಟಿಆರ್​ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ಸಾಕಷ್ಟು ಕೌತುಕ ಮೂಡಿಸಿದೆ.

ಜೂನಿಯರ್​ ಎನ್​ಟಿಆರ್​

ನಟ ಜೂನಿಯರ್​ ಎನ್​ಟಿಆರ್​ (Jr NTR) ಅವರಿಗೆ ಇರುವ ಡಿಮ್ಯಾಂಡ್​ ಹೆಚ್ಚಾಗಿದೆ. ‘ಆರ್​ಆರ್​ಆರ್​’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇನ್ನು, ಅವರ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕವಂತೂ ಜಾಗತಿಕವಾಗಿ ಕೀರ್ತಿ ಹೆಚ್ಚಿದೆ. ಇಷ್ಟೆಲ್ಲ ಫೇಮಸ್​ ಆಗಿರುವ ಜೂನಿಯರ್​ ಎನ್​ಟಿಆರ್​ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎನ್​ಟಿಆರ್​ 30’ (NTR 30) ಎಂದು ಕರೆಯಲಾಗುತ್ತಿದ್ದು, ಇದರ ಮುಹೂರ್ತಕ್ಕೆ ದಿನಾಂಕ ಫಿಕ್ಸ್​ ಆಗಿದೆ. ಈ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದೆ. ಮಾರ್ಚ್​ 23ರಂದು ಜೂನಿಯರ್​ ಎನ್​ಟಿಆರ್​ ಅಭಿನಯದ 30ನೇ ಸಿನಿಮಾಗೆ ಅದ್ದೂರಿಯಾಗಿ ಮುಹೂರ್ತ (NTR 30 Muhurtha) ಮಾಡಲಾಗುವುದು.

ಈ ಸುದ್ದಿಯನ್ನು ತಿಳಿಸಲು ‘ಎನ್​ಟಿಆರ್​ 30’ ಚಿತ್ರತಂಡ ಹೊಸ ಪೋಸ್ಟರ್​ ಹಂಚಿಕೊಂಡಿದೆ. ಈ ಪೋಸ್ಟರ್​ ಸಾಕಷ್ಟು ಕೌತುಕ ಮೂಡಿಸುವಂತಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ನಾಯಕಿಯಾಗಿ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್​ ಆಯ್ಕೆ ಆಗಿದ್ದಾರೆ. ಚಿತ್ರದ ಶೀರ್ಷಿಕೆ ಏನೆಂದು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿಜಾನ್ವಿ ಕಪೂರ್​ಗೆ 4 ಕೋಟಿ ಸಂಭಾವನೆ?

‘ಎನ್​ಟಿಆರ್​ 30’ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್​ ಅವರಿಗೆ ಬರೋಬ್ಬರಿ 4 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿದೆ ಎಂಬ ಗಾಸಿಪ್​ ಕೇಳಿಬಂದಿದೆ. ಟಾಲಿವುಡ್​ನಲ್ಲಿ ಪ್ರಚಲಿತದಲ್ಲಿ ಇರುವ ಬಹುತೇಕ ನಟಿಯರು ಎರಡು ಅಥವಾ ಮೂರು ಕೋಟಿ ರೂಪಾಯಿ ಆಸುಪಾಸಿನಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಜಾನ್ವಿ ಕಪೂರ್​ ಅವರು ಏಕಾಏಕಿ 4 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೇ ಅವರು ಮೊದಲ ಬಾರಿಗೆ ತೆಲುಗು ಸಿನಿಮಾ ಒಪ್ಪಿಕೊಂಡಿರುವುದು ಕೂಡ ಅವರ ಸಂಭಾವನೆ ಹೆಚ್ಚಲು ಕಾರಣ.

ಇದನ್ನೂ ಓದಿ: NTR 30: ಜೂನಿಯರ್​ ಎನ್​ಟಿಆರ್​ 30ನೇ ಚಿತ್ರಕ್ಕೆ ಜಾನ್ವಿ ಕಪೂರ್​ ನಾಯಕಿ; ಇಲ್ಲಿದೆ ಫಸ್ಟ್​ ಲುಕ್​

ಜೂನಿಯರ್​ ಎನ್​ಟಿಆರ್​ಗೆ ಅಭಿಮಾನಿಗಳ ಮುತ್ತಿಗೆ:

ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಲು ಜೂನಿಯರ್​ ಎನ್​ಟಿಆರ್​ ಅಮೆರಿಕಕ್ಕೆ ತೆರಳಿದ್ದರು. ಆ ಕಾರ್ಯಕ್ರಮ ಮುಗಿಸಿ ಅವರು ಭಾರತಕ್ಕೆ ವಾಪಸ್​ ಬಂದಿದ್ದಾಗ ಹೈದರಾಬಾದ್​ನ ವಿಮಾನ ನಿಲ್ದಾಣದಲ್ಲಿ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಏರ್​ಪೋರ್ಟ್​ನಿಂದ ಹೊರಬರುತ್ತಿದ್ದಂತೆಯೇ ಅಭಿಮಾನಿಗಳು ಅವರ ಕಾರನ್ನು ಮುತ್ತಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್​ ಆಗಿತ್ತು. ‘ಎನ್​ಟಿಆರ್​ 30’ ಪೂರ್ಣಗೊಂಡ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ಪ್ರಶಾಂತ್​ ನೀಲ್​ ಜೊತೆ ಕೈ ಜೋಡಿಸಲಿದ್ದಾರೆ. ಆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!