10.3 C
Munich
Thursday, March 23, 2023

Kabzaa 2 movie poster with Pawan Kalyan photo go viral on social media | Pawan Kalyan: ‘ಕಬ್ಜ 2’ ಸಿನಿಮಾದಲ್ಲಿ ಪವನ್​ ಕಲ್ಯಾಣ್​? ವೈರಲ್​ ಆಗಿದೆ ಹೊಸ ಪೋಸ್ಟರ್​

ಓದಲೇಬೇಕು

R. Chandru | Kabzaa 2: ಆರ್​. ಚಂದ್ರು ಮತ್ತು ಪವನ್​ ಕಲ್ಯಾಣ್​ ಜೊತೆಗಿರುವ ಫೋಟೋ ಇತ್ತೀಚೆಗಷ್ಟೇ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ‘ಕಬ್ಜ 2’ ಪೋಸ್ಟರ್​ ಹರಿದಾಡುತ್ತಿದೆ.

ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ಉಪೇಂದ್ರ, ಆರ್​. ಚಂದ್ರು, ಪವನ್​ ಕಲ್ಯಾಣ್​

ಕನ್ನಡ ಚಿತ್ರರಂಗದ ಮಾರುಕಟ್ಟೆ ಹಿರಿದಾಗಿದೆ. ಉಪೇಂದ್ರ, ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಬೀಗುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್​ ನೋಡಿದ ಪ್ರೇಕ್ಷಕರಿಗೆ ಅಚ್ಚರಿ ಕಾದಿತ್ತು. ‘ಕಬ್ಜ 2’ ಚಿತ್ರ (Kabzaa 2 Movie) ಬರಲಿದೆ ಎಂಬುದು ಈಗ ಬಹಿರಂಗ ಆಗಿದೆ. ಸೀಕ್ವೆಲ್​ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಆರ್​. ಚಂದ್ರು ಅವರು ‘ಕಬ್ಜ 2’ ಸಿನಿಮಾಗೆ ಬೇರೆ ಭಾಷೆಯ ಚಿತ್ರರಂಗದ ಕಲಾವಿದರನ್ನು ಕರೆತರಲಿದ್ದಾರೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ಅಚ್ಚರಿ ಎಂದರೆ, ‘ಕಬ್ಜ’ ಸೀಕ್ವೆಲ್​ನಲ್ಲಿ ಟಾಲಿವುಡ್​ನ ‘ಪವರ್​ ಸ್ಟಾರ್​’ ಪವನ್​ ಕಲ್ಯಾಣ್​ (Pawan Kalyan) ಅವರು ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಅದಕ್ಕೆ ಪೂರಕ ಆಗುವಂತೆ ಒಂದು ಪೋಸ್ಟರ್ ಕೂಡ ವೈರಲ್​ ಆಗಿದೆ.

‘ಕಬ್ಜ’ ಪೋಸ್ಟರ್​ಗಳಲ್ಲಿ ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ಉಪೇಂದ್ರ ಅವರ ಫೋಟೋ ರಾರಾಜಿಸಿತ್ತು. ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ‘ಕಬ್ಜ 2’ ಪೋಸ್ಟರ್​ನಲ್ಲಿ ಪವನ್​ ಕಲ್ಯಾಣ್​ ಕೂಡ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ. ಒಟ್ಟಿನಲ್ಲಿ ಈ ಪೋಸ್ಟರ್​ ನೋಡಿದ ಬಳಿಕ ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಾಗಿದೆ.

ಇದನ್ನೂ ಓದಿಇದನ್ನೂ ಓದಿ: Kabzaa Collection: 100 ಕೋಟಿ ರೂಪಾಯಿ ಬಾಚಿದ ‘ಕಬ್ಜ’; 2ನೇ ದಿನಕ್ಕೆ ಕಮಾಲ್​ ಮಾಡಿದ ಉಪ್ಪಿ-ಆರ್​. ಚಂದ್ರು ಸಿನಿಮಾ

ಸೂಪರ್​ ಹಿಟ್​ ಆದ ಸಿನಿಮಾಗೆ ಸೀಕ್ವೆಲ್​ ಮಾಡುವಾಗ ಪಾತ್ರವರ್ಗ ಹಿರಿದಾಗುವುದು ಸಹಜ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರವೇ ಅದಕ್ಕೆ ಸಾಕ್ಷಿ. ಈಗ ‘ಕಬ್ಜ 2’ ಕೂಡ ಅದೇ ಮಾರ್ಗದಲ್ಲಿ ಸಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ನಿರ್ದೇಶಕ ಆರ್​. ಚಂದ್ರು ಅವರು ಪವನ್​ ಕಲ್ಯಾಣ್​ ಜೊತೆ ಇರುವ ಫೋಟೋ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ಈ ಸುದ್ದಿ ಹಬ್ಬಿರುವುದರಿಂದ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: Upendra: ‘ಕಬ್ಜ 2’ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಆರ್​. ಚಂದ್ರು ಎದುರು ನಟರ ಲಿಸ್ಟ್​ ನೀಡಿದ ಉಪೇಂದ್ರ

ಇಂದು (ಮಾರ್ಚ್​ 17) ಸಂಜೆ 4.30ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ‘ಕಬ್ಜ’ ಸಿನಿಮಾದ ಸಕ್ಸಸ್​ ಮೀಟ್​ ನಡೆಯಲಿದೆ. ಆ ವೇಳೆ ಹಲವು ವಿಚಾರಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ. ‘ಕಬ್ಜ 2’ ಸಿನಿಮಾದಲ್ಲಿ ಪವನ್​ ಕಲ್ಯಾಣ್​ ನಟಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ನಿರ್ದೇಶಕ ಆರ್​. ಚಂದ್ರು ಉತ್ತರಿಸುವ ಸಾಧ್ಯತೆ ಇದೆ.

ಮೂರನೇ ದಿನ ಕೂಡ ಎಲ್ಲ ಕಡೆಗಳಲ್ಲಿ ‘ಕಬ್ಜ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರಿಂದ ಚಿತ್ರತಂಡಕ್ಕೆ ಭರ್ಜರಿ ಲಾಭ ಆಗಿದೆ. ಉಪೇಂದ್ರ ಅವರು ವೃತ್ತಿಜೀವನದ ಬಹುದೊಡ್ಡ ಸಿನಿಮಾವಾಗಿ ಚಿತ್ರ ಹೊರಹೊಮ್ಮಿದೆ. ಪರಭಾಷೆಯ ಸೆಲೆಬ್ರಿಟಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!