Kabzaa Pre-release Event: ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಚಂದನವನದ ಅನೇಕ ಸ್ಟಾರ್ ಕಲಾವಿದರು ಹಾಜರಿ ಹಾಕಿದ್ದಾರೆ. ಎಲ್ಲರೂ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಮಾರ್ಚ್ 17ರಂದು ‘ಕಬ್ಜ’ ಸಿನಿಮಾ (Kabzaa Movie) ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ವಿಶ್ವಾದ್ಯಂತ 4 ಸಾವಿರ ಪರದೆಗಳು ಮುಡಿಪಾಗಿವೆ. ಉಪೇಂದ್ರ (Upendra), ಶ್ರೀಯಾ ಶರಣ್, ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಮುಂತಾದವರು ನಟಿಸಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇಂದು (ಮಾರ್ಚ್ 14) ಬೆಂಗಳೂರಿನಲ್ಲಿ ‘ಕಬ್ಜ’ ಪ್ರೀ-ರಿಲೀಸ್ ಇವೆಂಟ್ (Kabzaa Movie Pre-release Event) ನಡೆಯುತ್ತಿದೆ. ಚಂದನವನದ ಅನೇಕ ಸ್ಟಾರ್ ಕಲಾವಿದರು ಇದರಲ್ಲಿ ಭಾಗಿ ಆಗಿದ್ದಾರೆ. ಸಿನಿಮಾದ ವಿಶೇಷತೆಗಳ ಬಗ್ಗೆ, ನಿರ್ದೇಶಕ ಆರ್. ಚಂದ್ರು ಅವರ ಕೆಲಸದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಕಾರ್ಯಕ್ರಮದ ಲೈವ್ ವಿಡಿಯೋ ಇಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.