Kabzaa Movie: ಉಪೇಂದ್ರ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಕಬ್ಜ’ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವರಾಜ್ಕುಮಾರ್ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇಂದು ರಿಲೀಸ್ ಆಗುತ್ತಿದ್ದು ಆ ಬಗ್ಗೆ ಅಪ್ಡೇಟ್ ಈ ಲೈವ್ ಬ್ಲಾಗ್ನಲ್ಲಿ.

ಉಪೇಂದ್ರ
LIVE NEWS & UPDATES
-
17 Mar 2023 06:35 AM (IST)
‘ಕಬ್ಜ’ ರಿಲೀಸ್ಗೆ ಕ್ಷಣಗಣನೆ
ಆರ್. ಚಂದ್ರು ಅವರ ಕನಸಿನ ಪ್ರಾಜೆಕ್ಟ್ ‘ಕಬ್ಜ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ಅಬ್ಬರದ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಪರಭಾಷೆಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಸಿನಿಮಾಗೆ ಹೆಚ್ಚಿನ ಶೋಗಳು ಸಿಕ್ಕಿವೆ.
ಆರ್. ಚಂದ್ರು (R Chandru) ನಿರ್ದೇಶನದ ‘ಕಬ್ಜ’ ಸಿನಿಮಾ ರಿಲೀಸ್ಗೆ ಕ್ಷಣಗಣೆ ಆರಂಭ ಆಗಿದೆ. ಮುಂಜಾನೆ 9 ಗಂಟೆಯಿಂದ ಸಿನಿಮಾ ಶೋ ಆರಂಭಗೊಳ್ಳಲಿದೆ. ಮುಂಜಾನೆ 6 ಗಂಟೆಯಿಂದ ಯಾವುದೇ ಶೋ ಇಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಉಪೇಂದ್ರ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ (Sudeep) ಹಾಗೂ ಶಿವರಾಜ್ಕುಮಾರ್ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಯಾ ಶರಣ್ ಚಿತ್ರದ ನಾಯಕಿ. ತಾನ್ಯಾ ಹೋಪ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರದ ಬಗ್ಗೆ ಅಪ್ಡೇಟ್ ಈ ಲೈವ್ ಬ್ಲಾಗ್ನಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – Mar 17,2023 6:33 AM