13.1 C
Munich
Thursday, March 9, 2023

Kailasa Irrelevant: The UN gave a shock to Nithyananda Swami, rejected the application submitted for the Kailasa country World News in kannada | Kailasa Irrelevant: ನಿತ್ಯಾನಂದ ಸ್ವಾಮಿಗೆ ಶಾಕ್ ನೀಡಿದ ಯುಎನ್, ಕೈಲಾಸ ದೇಶಕ್ಕಾಗಿ ಸಲ್ಲಿಸಿದ ಅರ್ಜಿ ವಜಾ

ಓದಲೇಬೇಕು

ಕಳೆದ ವಾರ ಜಿನೀವಾದಲ್ಲಿ ನಡೆದ ತನ್ನ ಸಾರ್ವಜನಿಕ ಸಭೆಗಳಲ್ಲಿ ನಿತ್ಯಾನಂದ ಸ್ವಾಮಿ ಸ್ಥಾಪಿಸಿದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ)” ದ ಪ್ರತಿನಿಧಿಗಳು ಸಲ್ಲಿಸಿದ ಅರ್ಜಿಗಳು “ಅಪ್ರಸ್ತುತ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಗುರುವಾರ ಹೇಳಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ)” ದ ಪ್ರತಿನಿಧಿಗಳು

ಜಿನೀವಾ: ಕಳೆದ ವಾರ ಜಿನೀವಾದಲ್ಲಿ ನಡೆದ  ಸಾರ್ವಜನಿಕ ಸಭೆಗಳಲ್ಲಿ ನಿತ್ಯಾನಂದ ಸ್ವಾಮಿ ಸ್ಥಾಪಿಸಿದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ)” ದ ಪ್ರತಿನಿಧಿಗಳು ಸಲ್ಲಿಸಿದ ಅರ್ಜಿಗಳು “ಅಪ್ರಸ್ತುತ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಗುರುವಾರ ಹೇಳಿದೆ. USK (United States of Kailash) ಪ್ರತಿನಿಧಿಗಳು ಎಂದು ಕರೆಯಲ್ಪಡುವ ಅದರ ಎರಡು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವಿಕೆಯನ್ನು ದೃಢೀಕರಿಸಿದೆ, ಈ ಸಭೆಯಲ್ಲಿ ನೋಂದಣಿಗೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಕಚೇರಿಯು ಪ್ರಚಾರ ವಿಚಾರಗಳನ್ನು ವಿತರಿಸುವುದನ್ನು ತಡೆಯಲಾಗಿದೆ ಎಂದು ಹೇಳಿದರು. ನಮಗೆ ಭಾಷಣದಲ್ಲಿ ಆ ದೇಶದ ಅಥವಾ ಭೂಪ್ರದೇಶದ ಬಗ್ಗೆ ಸರಿಯಾಗಿ ತಿಳಿಸಿಲ್ಲ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಕಾಲ್ಪನಿಕ ರಾಜ್ಯದ ಪರವಾಗಿ USK ಪ್ರತಿನಿಧಿಯೊಬ್ಬರು ಮಾತನಾಡುತ್ತಿರುವ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ OHCHR ವಕ್ತಾರರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಎರಡು ಕಾರ್ಯಕ್ರಮಗಳು ಫೆಬ್ರವರಿ 22 ಮತ್ತು 24 ರಂದು ನಡೆದಿತ್ತು.

ಅಂತಹ ಸಾರ್ವಜನಿಕ ಕಾರ್ಯಕ್ರಮಗಳಿಗೆ ನೋಂದಣಿ ಎನ್‌ಜಿಒಗಳು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ. ಯಾರಾದರೂ ಒಪ್ಪಂದದ ಸಂಸ್ಥೆಗಳಿಗೆ ಮಾಹಿತಿಯನ್ನು ಸಲ್ಲಿಸಬಹುದು, ಸ್ವೀಕರಿಸಿದ ಅರ್ಜಿಗಳ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಮತ್ತು ತಮ್ಮ ಅಭಿಪ್ರಾಯವನ್ನು ತಿಳಿಸಲು ಅವಕಾಶವನ್ನು ನೀಡುತ್ತದೆ ಎಂದು OHCHR ವಕ್ತಾರರು ಹೇಳಿದರು.

ಫೆಬ್ರವರಿ 24 ರಂದು, CESCR ನ ಸಾಮಾನ್ಯ ಚರ್ಚೆಯಲ್ಲಿ, ಕೈಲಾಸ ದೇಶವನ್ನು ಎಂದು ಮಾಡುವ ಬಗ್ಗೆ USK ಪ್ರತಿನಿಧಿಯೊಬ್ಬರು ಸಂಕ್ಷಿಪ್ತವಾಗಿ ಮಾತನಾಡಿದರು. ಈ ಬಗ್ಗೆ ಹೆಚ್ಚಿನ ಪ್ರಚಾರ ಪಡೆಯಲು ಸಾಧ್ಯವಿಲ್ಲ ಹಾಗೂ ಈ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಈ ಅರ್ಜಿಯನ್ನು ಸಮಿತಿಯು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಜಿನೀವಾದಲ್ಲಿ ಭಾರತದ ಖಾಯಂ ಸಭೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. UNನಲ್ಲಿ ಭಾರತದ ಮಾಜಿ ಖಾಯಂ ಪ್ರತಿನಿಧಿ TS ತಿರುಮೂರ್ತಿ, ಇದು UN ಕಾರ್ಯವಿಧಾನಗಳ ಸಂಪೂರ್ಣ ದುರ್ಬಳಕೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Vijayapriya: ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸದಿಂದ ಸ್ವಾಮಿ ನಿತ್ಯಾನಂದನ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ಯಾರು?

ಕಾನೂನಿಂದ ಪಲಾಯನಗೈದವರಿಂದ ನಡೆಸಲ್ಪಡುವ ಸಂಸ್ಥೆಯ ಪ್ರತಿನಿಧಿಗಳು UN ಅನ್ನು NGOಗಳು ಅಥವಾ ಇನ್ಯಾವುದೇ ರೀತಿಯಲ್ಲಿ ಸಂಬೋಧಿಸುವುದು UN ಕಾರ್ಯವಿಧಾನಗಳ ಸಂಪೂರ್ಣ ದುರುಪಯೋಗವಾಗಿದೆ. ಭಾರತವು ವಿಶ್ವಾಸಾರ್ಹವಾದ NGOಗಳು ಮಾತ್ರ ಮಾನ್ಯತೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ದೃಢವಾದ ಪ್ರಕ್ರಿಯೆಗೆ ಕರೆ ನೀಡುವುದರಲ್ಲಿ ಸ್ಥಿರವಾಗಿದೆ. ಇದು ನಮ್ಮ ಕರೆಗೆ ಕಿವಿಗೊಟ್ಟಿಲ್ಲ ಎಂದು ಹೇಳಿದರು.

ಎನ್‌ಜಿಒಗಳು ಜಾಗತಿಕ ಸಮಸ್ಯೆಗಳ ವ್ಯಾಪ್ತಿಯಲ್ಲಿ ಪ್ರಮುಖವಾದ ಮಾತುಗಳನ್ನು ಮಾಡುತ್ತಿರುವಾಗ, ನಾವು ಸದಸ್ಯ ರಾಷ್ಟ್ರ ಚಾಲಿತ ಸಂಘಟನೆಯಾದ ಯುಎನ್‌ನ ಸಮಗ್ರತೆಯನ್ನು ಕಾಪಾಡಬೇಕಾಗಿದೆ ಎಂದು ಮಾಜಿ ರಾಜತಾಂತ್ರಿಕ TS ತಿರುಮೂರ್ತಿ ಹೇಳಿದರು.

ಕೈಲಾಸ ಸಂಯುಕ್ತ ಸಂಸ್ಥಾನದ (ಕರೆಯಲ್ಪಡುವ) ಖಾಯಂ ರಾಯಭಾರಿ ಎಂದು ಹೇಳಿಕೊಂಡ ವಿಜಯಪ್ರಿಯಾ ನಿತ್ಯಾನಂದ, ಸಾಮಾನ್ಯ ಸಭೆಯಲ್ಲಿ ಭಾಗವಹಿಸಿರುವುದನ್ನು ಕಾಣಬಹುದು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಮತ್ತು ಇತರ ಮಾನವ ಹಕ್ಕುಗಳ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಾಗಿದ್ದರು. ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಭಾರತದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳನ್ನು ಹೊತ್ತಿದ್ದು, ಈ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಅವರು 2019 ರಲ್ಲಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (USK)” ಅನ್ನು ಸ್ಥಾಪಿಸಿದ್ದಾರೆ ಎಂದು ಹೇಳಿಕೊಂಡಿದರು. ಕೈಲಾಸ ವೆಬ್‌ಸೈಟ್ ಪ್ರಕಾರ, ಎರಡು ಶತಕೋಟಿ ಹಿಂದೂಗಳನ್ನು ಆ ದೇಶ ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!