0.3 C
Munich
Tuesday, February 28, 2023

Kangana Ranaut Take a dig at Aamir Khan After He forgot to Take her name | ಕಂಗನಾ ಬಿಟ್ಟು ದೀಪಿಕಾ, ಆಲಿಯಾ ಹೊಗಳಿದ ಆಮಿರ್ ಖಾನ್; ಸರಿಯಾಗಿ ತಿರುಗೇಟು ಕೊಟ್ಟ ರಣಾವತ್

ಓದಲೇಬೇಕು

ಖ್ಯಾತ ಬರಹಗಾರ್ತಿ ಶೋಭಾ ಡೇ ಅವರ ಪುಸ್ತಕ ರಿಲೀಸ್ ಕಾರ್ಯಕ್ರಮಕ್ಕೆ ಆಮಿರ್ ಖಾನ್ ಬಂದಿದ್ದರು. ಈ ವೇಳೆ ಶೋಭಾ ಅವರ ಬಯೋಪಿಕ್ ಬಗ್ಗೆ ಚರ್ಚೆ ಆಗಿದೆ.

ಕಂಗನಾ-ಆಮಿರ್ ಖಾನ್

ಕಂಗನಾ ರಣಾವತ್​ಗೆ (Kangana Ranaut) ಬಾಲಿವುಡ್​ನ ಬಹುತೇಕರನ್ನು ಕಂಡರೆ ಆಗೋದಿಲ್ಲ. ಒಬ್ಬಲ್ಲಾ ಒಬ್ಬರ ಬಗ್ಗೆ ಅವರು ಟೀಕೆ ಮಾಡುತ್ತಲೇ ಇರುತ್ತಾರೆ. ಯಾರಿಗೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ. ಸ್ಟಾರ್​ ನಟರಿಂದ ಹಿಡಿದು ಎಲ್ಲರಿಗೂ ಅವರು ತಿರುಗೇಟು ಕೊಡುತ್ತಲೇ ಇರುತ್ತಾರೆ. ಈಗ ಕಂಗನಾ ಅವರು ಆಮಿರ್ ಖಾನ್ (Aamir Khan) ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಹೆಸರನ್ನು ಹೇಳಲು ಮರೆತ ಆಮಿರ್ ಖಾನ್​ಗೆ ಕಂಗನಾ ಟಾಂಗ್ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಖ್ಯಾತ ಬರಹಗಾರ್ತಿ ಶೋಭಾ ಡೇ ಅವರ ಪುಸ್ತಕ ರಿಲೀಸ್ ಕಾರ್ಯಕ್ರಮಕ್ಕೆ ಆಮಿರ್ ಖಾನ್ ಬಂದಿದ್ದರು. ಈ ವೇಳೆ ಶೋಭಾ ಅವರ ಬಯೋಪಿಕ್ ಬಗ್ಗೆ ಚರ್ಚೆ ಆಗಿದೆ. ಅವರ ಬಯೋಪಿಕ್​ನಲ್ಲಿ ನಟಿಸೋಕೆ ಯಾರು ಸೂಕ್ತ ಎನ್ನುವ ಚರ್ಚೆ ಆಗಿದೆ. ಇದಕ್ಕೆ ಆಮಿರ್ ಖಾನ್ ಒಂದಷ್ಟು ಹೆಸರುಗಳನ್ನು ಹೇಳಿದ್ದಾರೆ.

‘ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಅವರು ಶೋಭಾ ಪಾತ್ರದಲ್ಲಿ ಉತ್ತಮವಾಗಿ ನಟಿಸಬಹುದು’ ಎಂದರು ಆಮಿರ್​ ಖಾನ್. ಆಗ ಶೋಭಾ ಅವರು ಕಂಗನಾ ಹೆಸರನ್ನು ಹೇಳಿದರು. ‘ಅವರು ಉತ್ತಮವಾಗಿ ನಟಿಸುತ್ತಾರೆ. ಅವರು ಅದ್ಭುತ ನಟಿ. ಸ್ಟ್ರಾಂಗ್ ನಟಿ’ ಎಂದು ಕಂಗನಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು ಆಮಿರ್ ಖಾನ್. ಆದರೆ, ಇದು ಕಂಗನಾಗೆ ಖುಷಿ ನೀಡಿಲ್ಲ. ಶೋಭಾ ಅವರು ಹೇಳಿದ ಬಳಿಕವೇ ಆಮಿರ್​​ಗೆ ತಮ್ಮ ಹೆಸರು ನೆನಪಾಗಿದೆ ಎಂಬುದನ್ನು ತಿಳಿದು ಅವರು ಅಸಮಾಧಾನಗೊಂಡಿದ್ದಾರೆ. ಹೊಗಳಿದ ಆಮಿರ್ ಖಾನ್​ಗೂ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

‘ನಾನು ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಎಂಬುದನ್ನು ತಿಳಿದಿಲ್ಲದವರಂತೆ ನಟಿಸಲು ಅವರು ಪ್ರಯತ್ನಿಸಿದರು. ಅವರು ಉಲ್ಲೇಖಿಸಿದ ನಟಿಯರು ಒಂದು ಪ್ರಶಸ್ತಿ ಕೂಡ ಪಡೆದಿಲ್ಲ’ ಎಂದು ಕಂಗನಾ ತಿರುಗೇಟು ನೀಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:Kangana Ranaut: ಕಂಗನಾ ರಣಾವತ್​ ವಾಟ್ಸಪ್​ ಮೆಸೇಜ್​ ಲೀಕ್​; ಸ್ಟಾರ್​ ದಂಪತಿ ಮೇಲೆ ಅನುಮಾನ

ಕಂಗನಾ ಅವರು ಸದ್ಯ ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜತೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!