ಕವನ – 1
ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ…
ಕವನ -2
ಪ್ರೀತಿ ಇಲ್ಲ ಎನ್ನುವುದಾದರೆ ….
ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ….
ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ …!!
ಕವನ – 3
ಹೃದಯವೆಂಬ “Hardware” ನಲ್ಲಿ ಮನಸೆಂಬ “Operating System” ಹರಿದಾದುತಿದೆ,
ಪ್ರೀತಿ ಎಂಬ “Software” install ಮಾಡಿದ್ದೆ ….
ಕೆಲವರು ಹೇಳ್ತಾರೆ “Happiness” ಅನ್ನೋ “Functionality” ಇದೆ ಅಂತ ,
ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ “Bug” ಇದೆ ಅಂತ …
ಕವನ – 4
ಪ್ರೀತಿಯಲ್ಲಿ ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು..
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು..
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನೀ ನನ್ನ ಪ್ರೀತಿಸು…
ಕವನ – 5
ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ,
ಬಾ ನನ್ನ ನಲ್ಲ ಎಲ್ಲಿರುವೆ ನೀ……………
ಓ ಮುದ್ದು ಮನಸೇ……….
Supper anna ❤