ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಲೇಖಾನುದಾನಕ್ಕೆ ಅನುಮೋದನೆ ದೊರಕಿದ್ದು, ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಮಂಡನೆಯಾಗಿದೆ. ಆದರೆ ಬಿಎಂಎಸ್ ವಿಶ್ವವಿದ್ಯಾಲಯದ ವಿಧೇಯಕ ಅಂಗೀಕಾರಕ್ಕೆ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿಧಾನಸಭೆ: ಇಂದು ಸದನದಲ್ಲಿ (Karnataka Legislative Assembly) ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸೇರಿದಂತೆ ವಿವಿಧ ವಿಧೇಯಕಗಳು ಅಂಗೀಕಾರ ಪಡೆದುಕೊಂಡಿದ್ದು, ಭಾರೀ ಪ್ರತಿಭಟನೆ ನಡೆಸಿದ್ದ ವಕೀಲಯ ಬೇಡಿಕೆಯಾಗಿದ್ದ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಮಂಡನೆಯಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ ಪಡೆದುಕೊಂಡಿದೆ. ಕನ್ನಡ ಭಾಷೆ ಕಡ್ಡಾಯವನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಕ್ರಮ ಕೈಗೊಳ್ಳುವ ಅಧಿಕಾರ ನೀಡುವ ವಿಧೇಯಕ ಇದಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಪರ್ಯಾಲೋಚನೆ ವೇಳೆ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ತಾಲೂಕು ಸಮಿತಿಗೆ ಅಧಿಕಾರಿಗಳ ಬದಲು ಶಾಸಕರನ್ನೇ ಅಧ್ಯಕ್ಷರನ್ನಾಗಿಸಿ, ಯಾಕೆ ಅಧಿಕಾರಿಗಳನ್ನು ಹಾಕುತ್ತೀರಿ? ಈಗ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ರೀತಿ ಸಾಲದಾ? ಅಧಿಕಾರಿಗಳನ್ನು ತೆಗೆದು ಶಾಸಕರನ್ನು ಹಾಕಿ ಎಂದು ಒತ್ತಾಯಿಸಿದರು.
ಬಿಎಂಎಸ್ ವಿಶ್ವವಿದ್ಯಾಲಯದ ವಿಧೇಯಕ ಪರ್ಯಾಲೋಚನೆ ವೇಳೆ ವಿಧೇಯಕ ಅಂಗೀಕಾರಕ್ಕೆ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಧೇಯಕ ತಡೆ ಹಿಡಿಯುವಂತೆ ಒತ್ತಾಯಿಸಿದರು. BMS ಟ್ರಸ್ಟ್ ವಿವಾದ ಇರುವಾಗ ವಿಧೇಯಕ ತರದಂತೆ ಜೆಡಿಎಸ್ ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಟ್ರಸ್ಟ್‌ಗೂ, ವಿಧೇಯಕಕ್ಕೂ ಸಂಬಂಧವಿಲ್ಲವೆಂದರು. ಈವೇಳೆ ವಿಧೇಯಕ ಅಂಗೀಕರಿಸದಂತೆ ಜೆಡಿಎಸ್ ಸದಸ್ಯರು ಜೋರಾಗಿ ಕೂಗಿದರು. ತೀವ್ರ ವಿರೋಧದ ನಡುವೆಯೇ ವಿಧೇಯಕ ಅಂಗೀಕಾರ ಪಡೆದುಕೊಂಡಿತು. ಇದನ್ನು ವಿರೋಧಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಕಿಷ್ಕಿಂದ, ಸಪ್ತಗಿರಿ ಸೇರಿ ಆರು ಖಾಸಗಿ ವಿವಿಗಳ ವಿಧೇಯಕ ಅಂಗೀಕಾರ
ಲೇಖಾನುದಾನಕ್ಕೆ ಅನುಮೋದನೆ ನೀಡಿದ ವಿಧಾನಸಭೆ
ಸದನದಲ್ಲಿ ಲೇಖಾನುದಾನಕ್ಕೆ ಅನುಮೋದನೆ ದೊರಕಿತು. ಜುಲೈ 31ಕ್ಕೆ ಕೊನೆಗೊಳ್ಳುವಂತೆ ಲೇಖಾನುದಾನಕ್ಕೆ ಅನುಮೋದನೆ ನೀಡಲಾಗಿದ್ದು, ವಿಪಕ್ಷ ಕಾಂಗ್ರೆಸ್ ವಿರೋಧ ಇಲ್ಲದೆ ಲೇಖಾನುದಾನಕ್ಕೆ ಒಪ್ಪಿಗೆ ದೊರಕಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಬರುತ್ತದೆ, ಬಜೆಟ್ ಮಂಡಿಸುತ್ತೇವೆ. ಲೇಖಾನುದಾನಕ್ಕೆ ಒಪ್ಪಿಗೆ ತೆಗೆದುಕೊಳ್ಳಿ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.
ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಮಂಡನೆ
ವಕೀಲರ ಮೇಲಿನ ಹಿಂಸಾಚಾರ ನಿಷೇಧಕ್ಕೆ ಕಾನೂನು ಜಾರಿ ಮಾಡುವಂತೆ ವಕೀಲರ ಸಂಘ ಭಾರೀ ಪ್ರತಿಭಟನೆ ನಡೆಸಿದ್ದರು. ಇದೀಗ ವಿಧಾನಸಭೆಯಲ್ಲಿ ವೃತ್ತಿಗಳ, ಕಸುಬುಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ (ತಿದ್ದುಪಡಿ) ವಿಧೇಯಕ ಮಂಡನೆಯಾಗಿದೆ. ಯಾವುದೇ ವ್ಯಕ್ತಿ ವಕೀಲರ ಮೇಲೆ ಹಲ್ಲೆ ನಡೆಸುವಂತಿಲ್ಲ. ಹಲ್ಲೆ ಮಾಡಿದರೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡಕ್ಕೆ ಅವಕಾಶ ನೀಡುವ ವಿಧೇಯಕ ಇದಾಗಿದೆ. ಅಪರಾಧ ಸಂಬಂಧ ವಕೀಲರನ್ನು ಪೊಲೀಸರು ಬಂಧಿಸಿದ್ದಲ್ಲಿ ಲಾಯರ್ ಅಸೋಸಿಯೇಷನ್‌ಗೆ ಪೊಲೀಸರು ಮಾಹಿತಿ ನೀಡಬೇಕು ಎಂಬುದು ಇದರಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ