24 Feb 2023 10:18 AM (IST)
Karnataka News Live: ಅಮಿತ್ ಶಾ ಭೇಟಿಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಭೇಟಿಗೆ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ ಆಗಮಿಸಿದ್ದಾರೆ. ಅಮಿತ್ ಶಾ ಕೆಲ ಹೊತ್ತಿನಲ್ಲೇ ದೆಹಲಿಗೆ ನಿರ್ಗಮಿಸಲಿದ್ದಾರೆ.
24 Feb 2023 10:15 AM (IST)
Karnataka News Live: ಬೆಂಗಳೂರಿನಿಂದ ನವದೆಹಲಿಗೆ ಹಿಂದಿರುಗಿದ ಅರುಣ್ ಸಿಂಗ್
ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್
ಸಹ ಉಸ್ತುವಾರಿಗಳಾದ ಮಾಂಡವೀಯ, ಅಣ್ಣಾಮಲೈ ಹಿಂತಿರುಗಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಜತೆ ಚುನಾವಣಾ ಉಸ್ತುವಾರಿಗಳು ಸಭೆ ನಡೆಸಿದ್ದರು.
24 Feb 2023 10:00 AM (IST)
Karnataka News Live: ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಭರದ ಸಿದ್ಧತೆ
ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಇಂದು ಪ್ರಗತಿ ರಥಕ್ಕೆ ಸಿಎಂ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಚಾಲನೆ ನೀಡಲಿದ್ದಾರೆ. ಬಿಜೆಪಿ ಎಲ್ಇಡಿ ಪ್ರಚಾರದ ವಾಹನಗಳು ಪ್ರಗತಿ ರಥದ ಹೆಸರಿನಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾವೆ. ಪ್ರತಿ ಕ್ಷೇತ್ರದಲ್ಲಿ 15 ದಿನಗಳ ಕಾಲ ಸಂಚರಿಸಲಿವೆ.
24 Feb 2023 09:57 AM (IST)
Karnataka News Live: ಇಂದು ಬಜೆಟ್ ಅಧಿವೇಶನದ ಕೊನೆಯ ದಿನ
ಮೇ 23ಕ್ಕೆ 15ನೇ ವಿಧಾನಸಭೆಯ ಅವಧಿ ಮುಕ್ತಾಯವಾಗಲಿದೆ. ಬಿಎಸ್ವೈ ಸೇರಿದಂತೆ ಕೆಲ ಹಿರಿಯ ಶಾಸಕರಿಗೆ ಕೊನೆಯ ಅಧಿವೇಶನ ಇದಾಗಿದ್ದು ಕೆಲ ಶಾಸಕರ ವಿದಾಯದ ಭಾಷಣ ರೀತಿಯಲ್ಲಿ ಕಲಾಪ ನಡೆಯುವ ನಿರೀಕ್ಷೆ ಇದೆ.
24 Feb 2023 09:45 AM (IST)
Karnataka News Live: ದೆಹಲಿ ಚಲೋಗೆ ನಿರ್ಧರಿಸಿದ ಬಾದಾಮಿ ಕ್ಷೇತ್ರದ ಅಭಿಮಾನಿಗಳು
ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಬೆಂಬಲಿಗರು ಒತ್ತಡ ಹೇರಿದ್ದು ದೆಹಲಿ ಚಲೋಗೆ ನಿರ್ಧರಿಸಿದ್ದಾರೆ. ಹೈಕಮಾಂಡ್ಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
24 Feb 2023 09:44 AM (IST)
Karnataka News Live: ತಮ್ಮ ನೆಚ್ಚಿನ ನಾಯಕ ಶಾಸಕ ಆಗಲೆಂದು ಅಭಿಮಾನಿಯ ವಿಶೇಷ ಪ್ರಾರ್ಥನೆ
ದೀಪಕ ಚಿಂಚೋರೆ ಭಾವಚಿತ್ರ ಹಿಡಿದು ಅಭಿಮಾನಿ ಶಿವಕುಮಾರ್ ಗೋಕಾವಿ ಎಂಬುವವರು ಅಂಬೆಗಾಲಿಡುತ್ತ ತಿರುಪತಿ ಬೆಟ್ಟ ಹತ್ತಿದ್ದಾರೆ. ದೀಪಕ ಚಿಂಚೋರೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಚಿಂಚೋರೆ ಶಾಸಕರಾಗಲಿ ಎಂದು ಅಭಿಮಾನಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ.
24 Feb 2023 09:43 AM (IST)
Karnataka News Live: ಕಲಬುರಗಿಯಲ್ಲಿ ಇಂದಿನಿಂದ 3 ದಿನ ಕಲ್ಯಾಣ ಕರ್ನಾಟಕ ಉತ್ಸವ
ಕಲಬುರಗಿ ನಗರದ ಗುಲ್ಬರ್ಗಾ ವಿವಿ ಆವರಣದಲ್ಲಿ ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ ಮಾಡಲಾಗಿದೆ. ಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
24 Feb 2023 09:43 AM (IST)
Karnataka News Live: ಶೃಂಗೇರಿ ಮಠಕ್ಕೆ ಜೆ.ಪಿ.ನಡ್ಡಾ ಭೇಟಿ ಬೆನ್ನಲ್ಲೇ ಹೆಚ್ಡಿಕೆ ಭೇಟಿ
ಶೃಂಗೇರಿ ಮಠಕ್ಕೆ ಇಂದು ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಉಭಯ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಇಂದು ರಾತ್ರಿ ಶ್ರೀಗಳ ಭೇಟಿಗೆ ಕುಮಾರಸ್ವಾಮಿ ಸಮಯ ಕೇಳಿದ್ದಾರೆ.