7.5 C
Munich
Tuesday, March 7, 2023

Karnataka Polls Amid rumours of joining Congress V Somanna inaugurates entrance along with Congress MP DK Suresh at Ramanagar news in kannada | ‘ಕೈ’ ಹಿಡಿಯುವ ವದಂತಿ ನಡುವೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಜೊತೆ ವೇದಿಕೆ ಹಂಚಿಕೊಂಡ ವಿ ಸೋಮಣ್ಣ

ಓದಲೇಬೇಕು

ಸಾಮಾನ್ಯವಾಗಿ ಸಚಿವರುಗಳ ಕಾರ್ಯಕ್ರಮದಲ್ಲಿ ಅವರದ್ದೇ ಪಕ್ಷದ ಶಾಸಕರು, ಸಂಸದರು, ಮುಖಂಡರು ಇರುತ್ತಾರೆ. ಆದರೆ ಸಚಿವ ವಿ ಸೋಮಣ್ಣ ಅವರು ಮಾತ್ರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಜೊತೆ ಸೇರಿ ಕುವೆಂಪು ಸಂಯುಕ್ತ ವಸತಿ ಬಡಾವಣೆಯ ಪ್ರವೇಶದ್ವಾರ ಉದ್ಘಾಟಿಸಿದ್ದು, ಭಾರೀ ಕುತೂಹಲ ಮೂಡಿಸಿದೆ.

ವಿ ಸೋಮಣ್ಣ (ಎಡಚಿತ್ರ) ಮತ್ತು ಡಿಕೆ ಸುರೇಶ್ ಮತ್ತು ವಿ ಸೋಮಣ್ಣ ಮಾತುಕತೆ (ಬಲ ಚಿತ್ರ)

ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಗಳು ಬಾಕಿ ಇರುವಂತೆ ರಾಜಕೀಯ ರಣಾಂಗಣದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದ್ದು, ಬಿಜೆಪಿಗೆ ರಾಜೀನಾಮೆ ನೀಡುವ ವದಂತಿ ನಡುವೆ ಸಚಿವ ವಿ. ಸೋಮಣ್ಣ (V Somanna) ಅವರು ಸಂಸದ ಡಿ.ಕೆ.ಸುರೇಶ್ (DK Suresh) ಜೊತೆ ಸೇರಿ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದ ಬಳಿ ನಿರ್ಮಿಸಲಾಗಿರುವ ಕುವೆಂಪು ಸಂಯುಕ್ತ ವಸತಿ ಬಡಾವಣೆಯ ಪ್ರವೇಶದ್ವಾರವನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ, ಡಿಕೆ ಸುರೇಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ವಿ ಸೋಮಣ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಬಳಿಕ ಇಬ್ಬರು ಪ್ರತ್ಯೇಕವಾಗಿ ನಿಂತು ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಎಂಎಲ್​ಸಿ ಎಸ್.ರವಿ ಜೊತೆ ವೇದಿಕೆ ಹಂಚಿಕೊಂಡ ಸೋಮಣ್ಣ ಅವರು ಡಿಕೆ ಸಹೋದರರನ್ನು ಹಾಡಿಹೊಗಳಿದರು.

ಪ್ರವೇಶದ್ವಾರ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ನಾನು ಕನಕಪುರ ತಾಲೂಕಿನವನು. ಅಚಾನಕ್ ಆಗಿ ಈ ಬಡಾವಣೆ ಆಗಿದೆ ಎಂದ ಅವರು ಕನಕಪುರ ಉಪನಗರವಾಗಿ ಕಾರ್ಯಾರಂಭ ಮಾಡಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಮಧ್ಯೆ ನಮ್ಮ 40 ಎಕರೆ ಜಾಗ ಬಂದಿತ್ತು. ಸಮಸ್ಯೆ ಉಂಟಾಗಿತ್ತು. ನಾನೇ ಸಮಸ್ಯೆ ಬಗೆಹರಿಸಿದ್ದೇನೆ. ಇದೀಗ ಉದ್ಘಾಟನೆ ಸಹಾ ಆಗಿದೆ. ರಾಜಕಾರಣ ಇರುತ್ತದೆ ಹೋಗುತ್ತದೆ. ಇದ್ದಾಗ ಕೆಲಸ ಮಾಡುಬೇಕು ಎಂದರು.

ಡಿಕೆ ಬ್ರದರ್ಸ್ ಹೊಗಳಿದ ವಿ ಸೋಮಣ್ಣ

ಕನಕಪುರ ಭಾಗದ ಜನ ಮುಗ್ಧರು. ಇಲ್ಲಿನ ಜನರಲ್ಲಿ ಮುಗ್ಧತೆ ಇದೆ ಎಂದು ಹೇಳಿದ ಸಚಿವ ಸೋಮಣ್ಣ, ಡಿಕೆ ಸಹೋದರರನ್ನು ಹೊಗಳಿದರು. ಕನಕಪುರ ‌ತಾಲೂಕಿನ ಅಭಿವೃದ್ಧಿಗೆ ಡಿಕೆ ಸಹೋದರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ನನ್ನದರು ಅಭಿವೃದ್ಧಿ ಪಾರ್ಟಿ. ಇನ್ನು ಹತ್ತು ವರ್ಷಕ್ಕೆ ಕನಕಪುರ ಇನ್ನೊಂದು ಬೆಂಗಳೂರು ಆಗಲಿದೆ. ಗೃಹಮಂಡಳಿ ಆದಾಯ ಮಾಡಲು ಇರುವುದಲ್ಲ. ಬಡವರಿಗೆ ತೊಂದರೆ ಆಗಬಾರದು, ಸೂರಿಲ್ಲದ್ದವರಿಗೆ ಸೂರೂ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಸಿಕ್ಕಾಗ ಬಳಸಿಕೊಳ್ಳಬೇಕು. ರಾಯಸಂದ್ರದ ಬಡಾವಣೆ ಡಿಕೆ ಸಹೋದರರು, ಎಮ್​ಎಲ್​ಸಿ ರವಿ ಸಹಕಾರದಿಂದ ಆಗಿದೆ. ಪೆಂಗಪೆಂಗನ ಹಾಗೆ ಇದ್ದರೆ ರಾಜಕಾರಣದಲ್ಲಿ ಯಾರು ನಂಬಲ್ಲ. ಕೆಲಸ ಮಾಡುವುದು ಒಂದೇ ನನ್ನ ದಾರಿ ಎಂದರು.

ಇದನ್ನೂ ಓದಿ: OBC Convention; ವಿ ಸೋಮಣ್ಣ ಮತ್ತು ಕೆಸಿ ನಾರಾಯಣಗೌಡರಿಗೆ ಅಸಮಾಧಾನವಿದ್ದರೆ ಪಕ್ಷದ ಹಿರಿಯರು ಬಗೆಹರಿಸುತ್ತಾರೆ: ಬಿವೈ ವಿಜಯೇಂದ್ರ

ಕಾಂಗ್ರೆಸ್‌ಗೆ ಯಾರೇ ಬಂದ್ರೂ ಸ್ವಾಗತ: ಡಿಕೆ ಸುರೇಶ್

ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ಕಾಂಗ್ರೆಸ್‌ಗೆ ಯಾರೇ ಬಂದ್ರೂ ಸ್ವಾಗತ ಎಂದರು. ವಿ.ಸೋಮಣ್ಣ ಕನಕಪುರ ತಾಲೂಕಿನ ಮಗ. ತಾಲೂಕಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ನಾವು ಅವರನ್ನ ನಮ್ಮ ಕುಟುಂಬದ ಸದಸ್ಯ ಅಂತ ತಿಳಿದುಕೊಂಡಿದ್ದೇವೆ. ನಾವೆಲ್ಲ ಒಂದೇ ಕುಟುಂಬದ, ಒಂದೇ ತಾಲೂಕಿನ ಮಕ್ಕಳು. ಸೋಮಣ್ಣ ಹಾಗೂ ನಾವು ಅಣ್ಣತಮ್ಮಂದಿರಿಗಿಂತ ಹೆಚ್ಚು ಎಂದರು.

ಮಾ.9ರಂದು ಮಿನಿ ಬಂದ್​ಗೆ ಕರೆ ನೀಡುರವ ಬಗ್ಗೆ ಮಾತನಾಡಿದ ಸಂಸದರು, ಬಿಜೆಪಿಯ 40% ಕಮಿಷನ್ ಹಾಗೂ ಮಾಡಾಳ್ ವಿರೋಪಾಕ್ಷಪ್ಪ ಪ್ರಕರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಂದ್​ಗೆ ಕರೆ ನೀಡಿದ್ದೇವೆ. ಭ್ರಷ್ಟಾಚಾರದ ನೇರ ಹೊಣೆಯನ್ನ ಸಿಎಂ ಬೊಮ್ಮಾಯಿ ಹೊರಬೇಕು. ನಷ್ಟದಲ್ಲಿರುವ ಸಂಸ್ಥೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಇದಕ್ಕೆ ಬೆಂಬಲವಾಗಿ ನಿಂತಿರುವುದು ಸಿಎಂ ಹಾಗೂ ಕೇಂದ್ರ ಬಿಜೆಪಿ ವರಿಷ್ಠರು. ಭ್ರಷ್ಟಾಚಾರದ ಬಗ್ಗೆ ಕೇಂದ್ರ ವರಿಷ್ಠರು ತುಟಿಬಿಚ್ಚುತ್ತಿಲ್ಲ ಎಂದರು.

ಹೆದ್ದಾರಿ ಉದ್ಘಾಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಡಿಕೆ ಸುರೇಶ್

ಮಾ.12ರಂದು ಪ್ರಧಾನಿ ಮೋದಿಯಿಂದ ದಶಪಥ ಹೆದ್ದಾರಿ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಡಿ.ಕೆ.ಸುರೇಶ್, ಹೆದ್ದಾರಿ ಉದ್ಘಾಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಧಿಕೃತ ಆಹ್ವಾನ ಇನ್ನೂ ಬಂದಿಲ್ಲ. ಇದೇನು ಬಿಜೆಪಿ ಕಾರ್ಯಕ್ರಮನಾ? ಬಿಜೆಪಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ. ಎಲ್ಲವನ್ನೂ ನಾವೇ ಮಾಡಿದ್ದು ಅನ್ನೊ ಭ್ರಮೆ. ರಸ್ತೆ ಎಲ್ಲರಿಂದಲೂ ಆಗಿದೆ. ನಾವು ಭೂ ಸ್ವಾಧೀನ ಕಾಯ್ದೆ ಜಾರಿ ಮಾಡಿಲ್ಲ ಅಂದಿದ್ದರೆ ಇವರು ರಸ್ತೆ ಮಾಡಲು ಆಗುತ್ತಿರಲಿಲ್ಲ. ಸಿದ್ದರಾಮಯ್ಯನವರ ಕಾಲದಲ್ಲಿ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಸಹಕಾರ ನೀಡಲಾಗಿದೆ. ಆದರೆ ಇನ್ನೂ ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ಅಲ್ಲಲ್ಲಿ ಸರ್ವೀಸ್ ರಸ್ತೆ, ಮೂಲಭೂತ ಸೌಕರ್ಯಗಳ ಕೊರತೆ ಇದೆ. ಸರಿಯಾದ ಪ್ರವೇಶ ನಿರ್ಗಮನ ಇಲ್ಲದೆ ಅಪಘಾತ ಆಗುತ್ತಿವೆ. ಚುನಾವಣೆಗಾಗಿ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದರು.

ವಿರೂಪಾಕ್ಷಪ್ಪರನ್ನು ಮೆರವಣಿಗೆ ಮಾಡಿ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ: ಡಿಕೆ ಸುರೇಶ್

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗೆ ಮಧ್ಯಾಂತರ ಜಾಮೀನು ಸಿಕ್ಕ ಹಿನ್ನಲೆ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಡಿಕೆ ಸುರೇಶ್, ಬಿಜೆಪಿಯ ಮುಖವಾಡ ಒಂದೊಂದಾಗಿ ಕಳಚುತ್ತಿದೆ. ಅವರ ನಡೆ ನುಡಿಗಳನ್ನ ರಾಜ್ಯದ ಜನರು ನೋಡುತ್ತಿದ್ದಾರೆ. ಪ್ರಧಾನಿ ಮೋದಿ ಯಾವುದನ್ನ ಹೆಮ್ಮೆಯಿಂದ ಹೇಳುತ್ತಿದ್ದರೋ ಅದು ಈಗ ಬಯಲಾಗಿದೆ. ಶೀಘ್ರದಲ್ಲೇ ಜನ ಇದನ್ನ ಬದಲಾವಣೆ ಮಾಡುತ್ತಾರೆ. ವಿರೂಪಾಕ್ಷಪ್ಪರನ್ನು ಮೆರವಣಿಗೆ ಮಾಡಿ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಭ್ರಷ್ಟಾಚಾರ ಬೆಂಬಲಿಸುವ ಬಿಜೆಪಿಯನ್ನ ಜನ ತಿರಸ್ಕಾರ ಮಾಡುತ್ತಾರೆ ಎಂದರು.

ಕಾಂಗ್ರೆಸ್​ನಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂಬ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಸಾರ್ವಜನಿಕರವಾಗಿ ಹಣ ಸಿಕ್ಕಿರುವುದು ಬಿಜೆಪಿಯಲ್ಲಿ ಎಂದರು. ನಮ್ಮ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳುಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ರಾಜಕೀಯವಾಗಿ ನಮ್ಮನ್ನು ಸದೆಬಡಿಯಲು ಮಾಡಿರುವ ಕೆಲಸವಾಗಿದೆ. ವಿರೋಧ ಪಕ್ಷವನ್ನ ಹತ್ತಿಕ್ಕಲು ಮಾಡುತ್ತಿರುವ ಕೆಲಸ ಇದಾಗಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!