Karnataka Rain: ಮುಂದಿನ 6 ದಿನಗಳಲ್ಲಿ ಕರ್ನಾಟಕ ಸೇರಿ 10ಕ್ಕೂ ಅಧಿಕ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೆ ಇಂದು ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ
ಮಡಿಕೇರಿ: ಮುಂದಿನ 6 ದಿನಗಳಲ್ಲಿ ಕರ್ನಾಟಕ ಸೇರಿ 10ಕ್ಕೂ ಅಧಿಕ ರಾಜ್ಯಗಳಲ್ಲಿ ಮಳೆಯಾಗಲಿದೆ (Karnataka Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೆ ಇಂದು ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ (Rain In Kodagu). ಮಡಿಕೇರಿ ತಾಲೂಕಿನ ನಾಪೋಕ್ಲು, ಮೂರ್ನಾಡು ಗ್ರಾಮ, ಮರಗೋಡು, ಕತ್ತಲೆಕಾಡು, ಹಾಕತ್ತೂರು ವ್ಯಾಪ್ತಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಕಾಫಿ ಹೂ ಅರಳಲು ಮಾರ್ಚ್ ಮಳೆ ತೀರಾ ಅಗತ್ಯವಾಗಿತ್ತು. ಸದ್ಯ ವರ್ಷದ ಮೊದಲ ಮಳೆ ಕೊಡಗಿನಲ್ಲಿ ಆಗಿದ್ದು, ಮಳೆ ಕಾಣದೆ ಕಂಗೆಟ್ಟಿದ್ದ ಕಾಫಿ ಬೆಳೆಗಾರರು ಹರ್ಷಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ