7.3 C
Munich
Saturday, April 1, 2023

Karthik Aaryan announced Bhool Bhulaiyaa 3 with Bhushan Kumar | ಅಕ್ಷಯ್ ಕುಮಾರ್ ಆಫರ್​ನ ಬಾಚಿಕೊಂಡ ಕಾರ್ತಿಕ್ ಆರ್ಯನ್​​ಗೆ ಮತ್ತೆ ಮಣೆ ಹಾಕಿದ ಬಾಲಿವುಡ್ ನಿರ್ಮಾಪಕ

ಓದಲೇಬೇಕು

Bhool Bhulaiyaa 3: ಕಾರ್ತಿಕ್ ಆರ್ಯನ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ‘ಭೂಲ್ ಭುಲಯ್ಯ 3’ರ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಕ್ಷಯ್-ಕಾರ್ತಿಕ್

ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರ ಬತ್ತಳಿಕೆಯಿಂದ ವರ್ಷಕ್ಕೆ ನಾಲ್ಕೈದು ಸಿನಿಮಾಗಳು ರಿಲೀಸ್ ಆಗೋದು ಪಕ್ಕಾ. ಅಷ್ಟು ವೇಗವಾಗಿ ಸಿನಿಮಾ ಕೆಲಸಗಳನ್ನು ಅಕ್ಷಯ್ ಮಾಡಿ ಮುಗಿಸುತ್ತಾರೆ. ಇತ್ತೀಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಅವರ ನಟನೆಯ ಸಾಲುಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿರುವುದರಿಂದ ಸಹಜವಾಗಿಯೇ ನಿರ್ಮಾಪಕರಲ್ಲಿ ಭಯ ಶುರುವಾಗಿದೆ. ಹೀಗಾಗಿ, ನಿರ್ಮಾಪಕರು ಬೇರೆ ಹೀರೋಗೆ ಮಣೆ ಹಾಕುತ್ತಿದ್ದಾರೆ. ‘ಭೂಲ್​ ಭುಲಯ್ಯ’ ಚಿತ್ರದಲ್ಲಿ ಅಕ್ಷಯ್ ನಟಿಸಿದ್ದರು. ಆದರೆ, ಎರಡನೇ ಪಾರ್ಟ್​ನಲ್ಲಿ ಕಾರ್ತಿಕ್ ಆರ್ಯನ್ (Kartik Aryan) ಬಣ್ಣ ಹಚ್ಚಿದರು. ಈ ಸಿನಿಮಾ ಯಶಸ್ಸು ಕಂಡಿತು. ಹೀಗಾಗಿ, ‘ಭೂಲ್​ ಭುಲಯ್ಯ 3’ ಚಿತ್ರದಲ್ಲಿ ಮತ್ತೆ ಅವರು ಬಣ್ಣ ಹಚ್ಚುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ‘ಭೂಲ್ ಭುಲಯ್ಯ 3’ರ ಬಗ್ಗೆ ಮಾಹಿತಿ ನೀಡಿದ್ದಾರೆ. 2024ರ ದೀಪಾವಳಿಗೆ ಈ ಸಿನಿಮಾ ರಿಲೀಸ್ ಆಗಲಿದೆ. ಭೂಷಣ್ ಕುಮಾರ್ ಅವರನ್ನು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ಅವರು ಪ್ರೇಕ್ಷಕರು ಒಪ್ಪಿಕೊಂಡಿರುವುದರಿಂದ ನಿರ್ಮಾಪಕರು ಧೈರ್ಯದಿಂದ ಹಣ ಹೂಡಿಕೆ ಮಾಡುತ್ತಿದ್ದಾರೆ.

‘ಭೂಲ್​ ಭುಲಯ್ಯ 2’ ಚಿತ್ರ ಹಾರರ್ ಹಾಗೂ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತ್ತು. ಮೂರನೇ ಪಾರ್ಟ್​ ಕೂಡ ಹೀಗೆ ಇರಲಿದೆ. ಬಾಲಿವುಡ್​ನಲ್ಲಿ ದೊಡ್ಡ ಸಿನಿಮಾಗಳು ಗೆಲ್ಲುತ್ತಿಲ್ಲ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್​ ನಟರ ಚಿತ್ರಗಳೇ ಬಾಕ್ಸ್ ಆಫೀಸ್​ನಲ್ಲಿ ಹಣ ಮಾಡಲಾಗದೆ ಒದ್ದಾಡುತ್ತಿವೆ. ಇಂತಹ ಸಂದರ್ಭದಲ್ಲಿ ತೆರೆಗೆ ಬಂದ ‘ಭೂಲ್​ ಭುಲಯ್ಯ 2’ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 180+ ಕೋಟಿ ರೂಪಾಯಿ ಬಾಚಿಕೊಂಡಿತ್ತು. ಹೀಗಾಗಿ, ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್​​ಲಾರೆನ್ (McLaren GT) ಕಾರನ್ನು ಭೂಷಣ್​ ಕುಮಾರ್ ಅವರು ಕಾರ್ತಿಕ್​ ಆರ್ಯನ್​ಗೆ ಉಡುಗೊರೆಯಾಗಿ ನೀಡಿದ್ದರು. ಕಾರಿನ ವಿಚಾರದಲ್ಲೂ ಟ್ರೋಲ್ ಮಾಡಲಾಗಿದೆ. ‘ಒಂದು ಕಾರಿನಿಂದ ನಿಮಗೆ ಖುಷಿ ಆಗಲಿಲ್ಲವೇ’ ಎಂದು ಕೆಲವರು ಕಾರ್ತಿಕ್​​ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ



ಇದನ್ನೂ ಓದಿ:  ಕಾರ್ತಿಕ್ ಆರ್ಯನ್​ಗೆ ಶಾಕ್; ‘ಶಹಜಾದ’ ಚಿತ್ರಕ್ಕೆ ಮುಳುವಾದ ‘ಅಲ ವೈಕುಂಠಪುರಮುಲೋ’

ಕಾರ್ತಿಕ್ ಆರ್ಯನ್ ನಟನೆಯ ‘ಶೆಹಜಾದ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರದ ರಿಮೇಕ್ ಆಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ಹೀಗಾಗಿ, ಕಾರ್ತಿಕ್ ಆರ್ಯನ್ ಸೋಲು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!