11.4 C
Munich
Thursday, March 30, 2023

Karwar Four members of family murder case: before murder clash Audio viral and children saved | Karwar Murder: ಕೊಲೆಗೂ ಮುನ್ನ ನಡೆದ ಗಲಾಟೆ ಆಡಿಯೋ ಬಹಿರಂಗ, ಮಕ್ಕಳು ಬದುಕುಳಿದ್ದು ಹೇಗೆ? ಇಲ್ಲಿದೆ ನೋಡಿ

ಓದಲೇಬೇಕು

ಒಂದೇ ಕುಟುಂಬದ ನಾಲ್ವಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ರಾಜು ಭಟ್ ಮತ್ತು ಕುಸುಮಾ ಭಟ್ ದಂಪತಿಗೆ ಶರಧಿ ಮತ್ತು ಶರ್ವ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಮಕ್ಕಳು ಕೊಲೆಯಿಂದ ಪಾರಾಗಿದ್ದು, ಅವರ ಜೀವಕ್ಕೂ ಅಪಾಯ ಇದ್ದು, ಸೂಕ್ತ ಪೊಲೀಸ್​ ಭದ್ರತೆ ನೀಡಿ ಕೊಲೆಯಾದ ಕುಸುಮಾ ಸಹೋದರಿ ಮನವಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಭಟ್ಕಳ ಪೊಲೀಸ್​ ಠಾಣೆ

ಕಾರವಾರ: ಒಂದೇ ಕುಟುಂಬದ ನಾಲ್ವಾರು ಕೊಲೆ ಪ್ರಕರಣಕ್ಕೆ (Murder Case) ಸಂಬಂಧಿಸಿದಂತೆ ಕೊಲೆಯಾದ ರಾಜು ಭಟ್ ಮತ್ತು ಕುಸುಮಾ ಭಟ್ ದಂಪತಿಗೆ ಶರಧಿ ಮತ್ತು ಶರ್ವ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಮಕ್ಕಳು ಕೊಲೆಯಿಂದ ಪಾರಾಗಿದ್ದು, ಅವರ ಜೀವಕ್ಕೂ ಅಪಾಯ ಇದ್ದು, ಸೂಕ್ತ ಪೊಲೀಸ್​ ಭದ್ರತೆ ನೀಡಿ ಕೊಲೆಯಾದ ಕುಸುಮಾ ಸಹೋದರಿ ಮನವಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಈ ಮಕ್ಕಳು ಕೊಲೆಯಿಂದ ಪಾರಾಗಿದ್ದೇ ರೋಚಕವಾಗಿದೆ.

ಕೊಲೆಯಿಂದ ಪಾರಾದ ಮಕ್ಕಳು

ಕೊಲೆ ನಡೆದ ದಿನ ಶರಧಿ ಶಾಲೆಗೆ ಹೋಗಿ ಮನೆ ಕಡೆ ಬರುತ್ತಿದ್ದಳು. ಇತ್ತ ಶರಧಿ ಮನೆಯಲ್ಲಿ ಗಲಾಟೆ ನಡೆಯುತ್ತಿರುವ ಹಿನ್ನೆಲೆ ಸ್ಥಳೀಯರು ಆಕೆಯನ್ನು ಕರೆದುಕೊಂಡು ಹೋಗಿ ಸಂಬಂಧಿಕರ ಮನೆಗೆ ಬಿಟ್ಟಿದ್ದಾರೆ. ಇನ್ನು ಶರ್ವನಿಗೆ ಕಾಲಿಗೆ ಗಾಯವಾದ ಹಿನ್ನೆಲೆ ಮನೆಯಲ್ಲಿ ಮಲಗಿದ್ದಾನೆ. ಗಲಾಟೆ ನಡೆದ ಪರಿವೇ ಇರಲಿಲ್ಲ. ಸಾಯಂಕಾಲ ಕೊಲೆಯಾದ ನಂತರ, ಎಚ್ಚರವಾಗಿ ಮನೆ ಹೊರಗೆ ಬಂದು ನೋಡಿದಾಗ ಅಪ್ಪ ಮತ್ತು ಅಮ್ಮ ಹೆಣವಾಗಿ ಬಿದ್ದಿದ್ದರು. ಇದನ್ನು ಕಂಡ ಶರ್ವ ಗಾಭರಿಗೊಂಡಿದ್ದು, ನಂತರ ಈತನನ್ನು ಕಂಡ ಸ್ಥಳೀಯರೊಬ್ಬರು ಕರೆದುಕೊಂಡು ಹೋಗಿ ಸಂಬಂಧಿಕರ ಮನೆಗೆ ಬಿಟ್ಟಿದ್ದಾರೆ‌ ಎಂದು ಕೊಲೆಯಾದ ಕುಸುಮಾ ಸಹೋದರಿ ಟಿವಿ9ಗೆ ಹೇಳಿದ್ದಾರೆ.

ಕೊಲೆಗೂ ಮುನ್ನ ಗಲಾಟೆಯ ಆಡಿಯೋ ಟಿವಿ9ಗೆ ಲಭ್ಯ

ಪ್ರಕರಣ ಆಡಿಯೋವೊಂದು ಟಿವಿ9ಗೆ ಲಭ್ಯವಾಗಿದೆ. ಆಡಿಯೋ ಪ್ರಕಾರ ಮೃತ ಶ್ರೀಧರ ಭಟ್​ನ ಪತ್ನಿ ವಿದ್ಯಾಭಟ್​ಗೆ ಜೀವನಾಂಶ ಕೊಡುವ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆ ವ್ಯಕ್ತವಾಗಿದೆ. ಜೀವನಾಂಶವಾಗಿ ವಿದ್ಯಾ ಭಟ್​​ಗೆ ಜಮೀನು ನೀಡಿ ಎಂದು ಗಂಡನ ಮನೆಯವರಿಗೆ, ವಿದ್ಯಾ ಪರ ವಕಾಲತ್ತು ವಹಸಿಕೊಂಡು ಇಬ್ಬರು ಅಪರಿಚಿತರು ಬಂದಿದ್ದಾರೆ. ವಕಾಲತ್ತು ವಹಿಸಿಕೊಂಡು ಬಂದವರು ವಿದ್ಯಾ ಭಟ್ ಮತ್ತು ಆಕೆಯ ಎರಡು ಮಕ್ಕಳು, ಜೀವನ ನಡೆಸಲು ಜಮೀನು ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಇದಕ್ಕೆ ವಿಧ್ಯಾ ಭಟ್​ ಮನೆಯವರು ನೀಡಲು ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಗಲಾಟೆ ಮಧ್ಯೆ ರಾಜೀವ್ ಭಟ್​ಗೆ ಪ್ರಾಣ ಬೆದರಿಕೆ ಒಡ್ಡಿವುದು ಕೂಡ ಸ್ಪಷ್ಟವಾಗಿದೆ. ಇಲ್ಲಿ ವಿದ್ಯಾ ಭಟ್​ ಪರ ವಕಾಲತ್ತು ವಹಿಸಿದವರು ಪ್ರಾಣ ತೆಗೆದು ಕಾರು ಡಿಕ್ಕಿ ತುಂಬಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!