ಸೋಮಣ್ಣ ಮತ್ತು ನಾರಾಯಣ ಗೌಡ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರುವ ಬಗ್ಗೆ ಹರಡಿರುವ ದಟ್ಟ ವದಂತಿಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೇ ನೀಡದ ಕಟೀಲ್, ಮಂಗಳವಾರದಂದು ಅವರಿಬ್ಬರೂ ಹೇಳಿಕೆಗಳನ್ನು ನೀಡಿದ್ದಾರೆ, ತಾನೇನೂ ಹೇಳುವ ಅವಶ್ಯಕತೆಯಿಲ್ಲ ಎಂದರು.
ಹಾಸನ: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಭಾಗವಾಗಿ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಸಚಿವರಾಗಿರುವ ವಿ ಸೋಮಣ್ಣ (V Somanna) ಮತ್ತು ಕೆಸಿ ನಾರಾಯಣ ಗೌಡ (KC Narayana Gowda) ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರುವ ಬಗ್ಗೆ ಹರಡಿರುವ ದಟ್ಟ ವದಂತಿಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೇ ನೀಡದೆ, ಮಂಗಳವಾರದಂದು ಅವರಿಬ್ಬರೂ ಹೇಳಿಕೆಗಳನ್ನು ನೀಡಿದ್ದಾರೆ, ತಾನೇನೂ ಹೇಳುವ ಅವಶ್ಯಕತೆಯಿಲ್ಲ ಎಂದರು. ಮಾಡಾಳ್ ವಿರೂಪಾಕ್ಷಪ್ಪ ಬಗ್ಗೆ ಮಾತಾಡಿದ ಕಟೀಲ್ ರಾಜ್ಯ ಸರ್ಕಾರ ಯಾರನ್ನೂ ರಕ್ಷಿಸುವ, ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ, ಎಲ್ಲ ಕಾನೂನು ಪ್ರಕಾರ ನಡೆಯತ್ತದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ