9.8 C
Munich
Friday, March 24, 2023

Kichcha Sudeep first reaction about his political entry speculations and DK Shivakumar meeting | Sudeep: ‘ರಾಜಕೀಯದ ಮಾತುಕತೆ ಆಗಿದ್ದು ನಿಜ, ನನ್ನ ಮೇಲೆ ಅವರಿಗೆ ನಂಬಿಕೆ ಬಂದಿದೆ’: ಮೌನ ಮುರಿದ ಸುದೀಪ್​

ಓದಲೇಬೇಕು

DK Shivakumar | Kichcha Sudeep: ‘ಒಳ್ಳೆಯದನ್ನು ಮಾಡೋಕೆ ಪವರ್​ ಬೇಕಂತಲೇ ಇಲ್ಲ. ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಸುದೀಪ್​ ಹೇಳಿದ್ದಾರೆ.

ಡಿಕೆ ಶಿವಕುಮಾರ್, ಸುದೀಪ್

ಕೆಲವೇ ದಿನಗಳ ಹಿಂದೆ ಕಿಚ್ಚ ಸುದೀಪ್ (Kichcha Sudeep) ಅವರನ್ನು ಕೆಲವು ರಾಜಕೀಯ ನಾಯಕರು ಭೇಟಿ ಆಗಿದ್ದರು. ಅದರ ಬೆನ್ನಲ್ಲೇ ಹಲವು ಬಗೆಯ ಸುದ್ದಿಗಳು ಪ್ರಕಟ ಆಗಿದ್ದವು. ಸುದೀಪ್​ ಅವರು ರಾಜಕೀಯಕ್ಕೆ ಎಂಟ್ರಿ ನೀಡಬಹುದು ಎಂದು ಅನೇಕರು ಊಹಿಸಿದರು. ಆ ಸಲುವಾಗಿಯೇ ಡಿಕೆ ಶಿವಕುಮಾರ್​ (DK Shivakumar) ಅವರು ಸುದೀಪ್​ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಆ ಕುರಿತಾಗಿ ಕಿಚ್ಚ ಈಗ ಮೌನ ಮುರಿದಿದ್ದಾರೆ. ಮೊದಲ ಬಾರಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ನಾಯಕರು ಮಾತುಕತೆಗೆ ಬಂದಿದ್ದು ನಿಜ ಎಂದು ಅವರು ಹೇಳಿದ್ದಾರೆ. ಆದರೆ ರಾಜಕೀಯಕ್ಕೆ (Karnataka Politics) ಎಂಟ್ರಿ ನೀಡಬೇಕೋ ಬೇಡವೋ ಎಂಬ ಬಗ್ಗೆ ತಾವು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸುದೀಪ್​ ಸ್ಪಷ್ಟಪಡಿಸಿದ್ದಾರೆ.

‘ನಾನೊಬ್ಬ ಕಲಾವಿದ. ಹಂಡ್ರೆಡ್​ ಪರ್ಸೆಂಟ್ ಮಾತುಕತೆಗೆ ಬಂದಿದ್ದರು. ಇಲ್ಲ ಅಂತ ತೇಲಿಸೋಕೆ ಹೋಗಲ್ಲ. ಇತ್ತೀಚೆಗೆ ಪೊಲಿಟಿಕಲ್ ನಾಯಕರಿಗೆ ನಂಬಿಕೆ ಬಂದಿದೆ. ಡಿಕೆ ಶಿವಕುಮಾರ್​, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ಅವರು ನನ್ನ ಸ್ನೇಹಿತರು. ನಾನು ಇನ್ನೂ ನಿರ್ಧಾರ ತಗೊಂಡಿಲ್ಲ. ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

‘ಎಮೋಶನ್ಸ್ ಇದೆ. ಅದರ ಜೊತೆ ನಮ್ಮ ನಿರ್ಧಾರವನ್ನು ಸೇರಿಸೋಕೆ ಹೋಗಲ್ಲ. ಸುದೀಪ್​ ಅವರು ರಾಜಕೀಯಕ್ಕೆ ಬರೋದು ಬೇಡ ಅಂತ ನಮ್ಮ ಜನರ ತಲೆಯಲ್ಲಿ ಇರಬಹುದು. ಒಳ್ಳೆಯದನ್ನು ಮಾಡೋಕೆ ಪವರ್​ ಬೇಕಂತಲೇ ಇಲ್ಲ. ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ



ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!