3.7 C
Munich
Wednesday, March 8, 2023

Know Why Foxconn Interested In Setting Up iPhone Manufacturing Unit In Bengaluru | Foxconn: ಬೆಂಗಳೂರು ಏರ್​ಪೋರ್ಟ್​ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?

ಓದಲೇಬೇಕು

Why Foxconn Interested In Bengaluru: ಐಫೋನ್ ಅಸೆಂಬ್ಲಿಂಗ್ ಕಂಪನಿ ಫಾಕ್ಸ್​ಕಾನ್ ತನ್ನ ಘಟಕ ಸ್ಥಾಪಿಸಲು ಬೆಂಗಳೂರನ್ನು ಪರಿಗಣಿಸಲು ಏನು ಕಾರಣ? ಇಲ್ಲಿಯ ಹವಾಮಾನವಾ, ಐಟಿ ತಂತ್ರಜ್ಞರ ಸಂಪನ್ಮೂಲವಾ, ಎಂಜಿನಿಯರುಗಳ ಲಭ್ಯತೆಯಾ? ತಪ್ಪದೇ ಈ ವರದಿ ಓದಿ…

ಫಾಕ್ಸ್​ಕಾನ್ ಸಿಇಒ ಜೊತೆ ಸಿಎಂ ಬೊಮ್ಮಾಯಿ ಹಾಗು ಸಚಿವರು, ಅಧಿಕಾರಿಗಳು

ಬೆಂಗಳೂರು: ಆ್ಯಪಲ್​ನ ಐಫೋನ್ ತಯಾರಕ ಕಂಪನಿಗಳಲ್ಲೊಂದಾದ ಫಾಕ್ಸ್​ಕಾನ್ ಸಂಸ್ಥೆ (Foxconn) ಎಲ್ಲಿ ತನ್ನ ಘಟಕ ಸ್ಥಾಪನೆ ಮಾಡುತ್ತದೆ ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಕರ್ನಾಟಕ ಮತ್ತು ತೆಲಂಗಾಣ ಎರಡೂ ಸರ್ಕಾರಗಳೊಂದಿಗೆ ಫಾಕ್ಸ್​ಕಾನ್ ಎಂಒಯು ಅಥವಾ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದು ಹೌದು. ಅಂತಿಮವಾಗಿ ಅವರ ರಾಜ್ಯದ ಸ್ಥಳವನ್ನು ಫಾಕ್ಸ್​ಕಾನ್ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕು. ಆದರೆ, ಐಫೋನ್ ಫ್ಯಾಕ್ಟರಿ ಸ್ಥಾಪನೆಗೆ ಫಾಕ್ಸ್​ಕಾನ್ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಗಣನೆಗೆ ತೆಗೆದುಕೊಂಡಿರುವುದಂತೂ ಹೌದು. ಕರ್ನಾಟಕ ಈಗಾಗಲೇ ಫಾಕ್ಸ್​ಕಾನ್​ಗಾಗಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲು ಸಿದ್ಧವಾಗಿದೆ. ಏರ್​ಪೋರ್ಟ್​ನ ಸಮೀಪ ಇರುವ ದೊಡ್ಡಬಳ್ಳಾಪುರದ ಐಟಿಐಆರ್ (ITIR- Information Technology Investment Region) ಇಂಡಸ್ಟ್ರಿಯಲ್ ಏರಿಯಾದಲ್ಲಿ ಫಾಕ್ಸ್​ಕಾನ್​ಗೆ 300 ಎಕರೆ ಭೂಮಿಯನ್ನೂ ಸರ್ಕಾರ ಗುರುತಿಸಿಟ್ಟಿದೆ. ಇನ್ನೇನಿದ್ದರೂ ಫಾಕ್ಸ್​ಕಾನ್ ಬಂದು ಐಫೋನ್ ಘಟಕ ಸ್ಥಾಪಿಸಬೇಕಷ್ಟೇ.

ಅಷ್ಟಕ್ಕೂ ಫಾಕ್ಸ್​ಕಾನ್ ತನ್ನ ಘಟಕ ಸ್ಥಾಪಿಸಲು ಬೆಂಗಳೂರನ್ನು ಪರಿಗಣಿಸಲು ಏನು ಕಾರಣ? ಇಲ್ಲಿಯ ಹವಾಮಾನವಾ, ಐಟಿ ತಂತ್ರಜ್ಞರ ಸಂಪನ್ಮೂಲವಾ, ಎಂಜಿನಿಯರುಗಳ ಲಭ್ಯತೆಯಾ? ಫಾಕ್ಸ್​ಕಾನ್ ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಎಂಒಯು ಗಮನಿಸಿದರೆ ಬೆಂಗಳೂರಿನಲ್ಲಿ ಅದು ಯಾಕೆ ಐಫೋನ್ ಘಟಕ ಸ್ಥಾಪಿಸುವ ಮನಸು ಮಾಡಿದೆ ಎಂಬುದಕ್ಕೆ ಕಾರಣ ಸಿಗುತ್ತದೆ.

ತೈವಾನ್ ಮೂಲದ ಫಾಕ್ಸ್​ಕಾನ್ (Hon Hai Technology Group) ಕಂಪನಿಯ ಹಿರಿಯ ಅಧಿಕಾರಿಗಳು ಮಾರ್ಚ್ 3ರಂದು ಬೆಂಗಳೂರಿಗೆ ಬಂದಿದ್ದರು. ಕಂಪನಿಯ ಸಿಇಒ ಕೂಡ ಈ ತಂಡದಲ್ಲಿದ್ದರು. ದೇವನಹಳ್ಳಿ ಏರ್​ಪೋರ್ಟ್​ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಎರಡನೇ ಟರ್ಮಿನಲ್ (T2) ನೋಡಿ ಫಾಕ್ಸ್​ಕಾನ್ ಅಧಿಕಾರಿಗಳು ಬೆರಗಾದರಂತೆ. ಇಲ್ಲಿರುವ ಕಾರ್ಗೊ ಅಥವಾ ಸರಕು ಸಾಗಣೆ ಸೌಕರ್ಯ ಮತ್ತು ಸೌಲಭ್ಯಗಳು ಇವರಿಗೆ ಬಹಳ ಹಿಡಿಸಿವೆ.

ಇದನ್ನೂ ಓದಿFoxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?

ಫಾಕ್ಸ್​ಕಾನ್​ಗೆ ಕಾರ್ಗೊ ಸೌಲಭ್ಯ ಬಹಳ ಮುಖ್ಯ. ಎಲೆಕ್ಟ್ರಾನಿಕ್ ವಸ್ತುಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಲು ಅಥವಾ ದೂರದ ಸ್ಥಳಕ್ಕೆ ಸಾಗಿಸಲು ಹಡಗು ಅಥವಾ ಟ್ರಕ್ ಬದಲು ವಿಮಾನದ ಬಳಕೆ ಆಗುತ್ತದೆ. ಹೀಗಾಗಿ, ಸರಕು ಸಾಗಣೆ ವಿಮಾನಗಳು ಬಂದು ಹೋಗಲು ಸೂಕ್ತವಾಗಿರುವ ಏರ್​ಪೋರ್ಟ್ ಇರುವುದು ಫಾಕ್ಸ್​ಕಾನ್​ಗೆ ಬಹಳ ಮುಖ್ಯ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್​ನಲ್ಲಿ ಕಾರ್ಗೊ ವಿಮಾನಗಳಿಗೆ ಅದ್ಭುತ ವ್ಯವಸ್ಥೆ ಇದೆ. ಯಾವುದೇ ಕಾರ್ಗೋ ವಿಮಾನ ಏರ್​ಪೋರ್ಟ್​ಗೆ ಬಂದು ಹೋಗಲು 2 ಗಂಟೆಯ ಟರ್ನರೌಂಡ್ ಟೈಮ್ ಆಗುತ್ತದೆ. ಇಷ್ಟು ಕ್ಷಿಪ್ರಗತಿಯಲ್ಲಿ ವ್ಯವಸ್ಥೆ ಇರುವುದು ಫಾಕ್ಸ್​ಕಾನ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫಾಕ್ಸ್​ಕಾನ್ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಬರೆದಿರುವ ಲೆಟರ್ ಆಫ್ ಇಂಟೆಂಟ್​ನಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದೆ.

ಇನ್​ಫ್ರಾಸ್ಟ್ರಕ್ಚರ್ ಮುಖ್ಯ ಎನ್ನುವುದು ಇದಕ್ಕೆಯೇ

ಸರ್ಕಾರ ಸರಿಯಾದ ಸೌಕರ್ಯವ್ಯವಸ್ಥೆ ಮಾಡಿದರೆ ಬಂಡವಾಳ ಸರಾಗವಾಗಿ ಹರಿದುಬರುತ್ತದೆ ಎನ್ನುವುದಕ್ಕೆ ಫಾಕ್ಸ್​ಕಾನ್ ಅತ್ಯುತ್ತಮ ನಿದರ್ಶನ ಎನ್ನುತ್ತಾರೆ ತಜ್ಞರು. ಒಂದು ವೇಳೆ ಫಾಕ್ಸ್​ಕಾನ್ ದೊಡ್ಡಬಳ್ಳಾಪುರದಲ್ಲಿ ಐಫೋನ್ ಅಸೆಂಬ್ಲಿಂಗ್ ಘಟಕ ಸ್ಥಾಪಿಸಿದಲ್ಲಿ ರಾಜ್ಯದಲ್ಲಿ 1 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ಐಫೋನ್ ಹಬ್ ಆಗಿಯೂ ಬೆಂಗಳೂರು ಬೆಳೆಯಬಹುದು.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!