-0.2 C
Munich
Monday, March 27, 2023

Lagaan movie actor Javed Khan Amrohi died due to lung failure | Javed Khan Amrohi: ‘ಲಗಾನ್​’ ಚಿತ್ರದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಜಾವೇದ್​ ಖಾನ್​ ಅಮ್ರೋಹಿ ನಿಧನ

ಓದಲೇಬೇಕು

Javed Khan Amrohi Death: ಜಾವೇದ್​ ಖಾನ್​ ಅಮ್ರೋಹಿ ಅವರಿಗೆ 60 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ವೈಫಲ್ಯದಿಂದ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಮುಂಬೈನಲ್ಲಿ ಅವರ ನಿಧನವಾಗಿದೆ.

ಜಾವೇದ್ ಖಾನ್ ಅಮ್ರೋಹಿ

ಬಾಲಿವುಡ್​ನ ಖ್ಯಾತ ನಟ ಜಾವೇದ್​ ಖಾನ್​ ಅಮ್ರೋಹಿ (Javed Khan Amrohi) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಫೆಬ್ರವರಿ 14) ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಂಬೈನಲ್ಲಿ ಕೊನೆಯುಸಿರು ಎಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಜಾವೇದ್​ ಖಾನ್​ ಅಮ್ರೋಹಿ ಅವರ ನಿಧನಕ್ಕೆ (Javed Khan Amrohi Death) ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ಆಪ್ತರು ಕಂಬನಿ ಮಿಡಿದಿದ್ದಾರೆ. ಚಿತ್ರರಂಗದಲ್ಲಿ ಅವರು ಅಪಾರ ಅನುಭವ ಹೊಂದಿದ್ದರು. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ‘ಲಗಾನ್​’ (Lagaan Movie) ಸಿನಿಮಾದಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದರು. ಓಶಿವರದಲ್ಲಿನ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.

ಜಾವೇದ್​ ಖಾನ್ ಅಮ್ರೋಹಿ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದೊಂದು ವರ್ಷದಿಂದ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅದರ ಪರಿಣಾಮವಾಗಿ ಅವರು ಹಾಸಿಗೆ ಹಿಡಿದಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಜಾವೇದ್​ ಖಾನ್​ ಅಮ್ರೋಹಿ ಕೊನೆಯುಸಿರು ಎಳೆದಿದ್ದಾರೆ.

ಇದನ್ನೂ ಓದಿ: ನಟಿ ಸುಮನ್​ ರಂಗನಾಥ್​ ತಾಯಿ ಜ್ಯೋತಿ ಇನ್ನಿಲ್ಲ; ಬಿಪಿ, ಉಸಿರಾಟದ ತೊಂದರೆಯಿಂದ ನಿಧನ

‘ಹಮ್​ ಹೈ ರಾಹೀ ಪ್ಯಾರ್​ ಕೇ’, ‘ಅಂದಾಜ್​ ಅಪ್ನಾ ಅಪ್ನಾ’, ‘ಇಷ್ಕ್​’, ‘ಲಗಾನ್​’, ‘ಚಕ್ದೇ ಇಂಡಿಯಾ’, ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಮುಂಬೈ’ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಜಾವೇದ್​ ಖಾನ್​ ಅಮ್ರೋಹಿ ನಟಿಸಿದ್ದರು. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಆಲಿಯಾ ಭಟ್​ ಅಭಿನಯದ ‘ಸಡಕ್​ 2’ ಸಿನಿಮಾದಲ್ಲಿ. ಆ ಚಿತ್ರ 2020ರಲ್ಲಿ ಬಿಡುಗಡೆ ಆಯಿತು. ಸಿನಿಮಾ ಮಾತ್ರವಲ್ಲದೇ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲೂ ಜಾವೇದ್​ ಖಾನ್​ ಅಮ್ರೋಹಿ ನಟಿಸಿದ್ದರು. ಆ ಮೂಲಕವೂ ಅವರು ಅಭಿಮಾನಿಗಳಿಗೆ ಹತ್ತಿರವಾಗಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರ ರಂಗದ ಹಿರಿಯ ನಟ ಮನ್​ದೀಪ್ ರಾಯ್ ನಿಧನ

ಜಾವೇದ್​ ಖಾನ್​ ಅಮ್ರೋಹಿ ಅವರಿಗೆ 60 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ವೈಫಲ್ಯದಿಂದ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಆರೋಗ್ಯ ಕೈ ಕೊಟ್ಟ ಬಳಿಕ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಜಾವೇದ್​ ಖಾನ್ ಅಮ್ರೋಹಿ ನಟಿಸಿದ್ದರು. ಮಾಡಿದ್ದೆಲ್ಲವೂ ಚಿಕ್ಕ ಪಾತ್ರಗಳೇ ಆದರೂ ಅವು ಮಹತ್ವಪೂರ್ಣವಾಗಿದ್ದವು.

‘ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾ’ದಿಂದ ಜಾವೇದ್​ ಖಾನ್​ ಅಮ್ರೋಹಿ ಅವರು ಪದವಿ ಪಡೆದಿದ್ದರು. ಬಳಿಕ ಅವರು ರಂಗಭೂಮಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಅವರಿಗೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಅವಕಾಶಗಳು ಸಿಕ್ಕವು. ಜಾವೇದ್​ ಖಾನ್​ ಅಮ್ರೋಹಿ ನಿಧನಕ್ಕೆ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!