ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸುವ ಯತ್ನವನ್ನು ಕೈ ಬಿಡುವಂತೆ ಲಾಹೋರ್ ನ್ಯಾಯಾಲಯ ಪಾಕಿಸ್ತಾನ ಪೊಲೀಸರಿಗೆ ಆದೇಶಿಸಿದೆ.
ಇಮ್ರಾನ್ ಖಾನ್
ಲಾಹೋರ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಬಂಧಿಸುವ ಯತ್ನವನ್ನು ಕೈ ಬಿಡುವಂತೆ ಲಾಹೋರ್ ನ್ಯಾಯಾಲಯ ಪಾಕಿಸ್ತಾನ ಪೊಲೀಸರಿಗೆ ಆದೇಶಿಸಿದೆ. ಅವರನ್ನು ಬಂಧಿಸಲು ಪೊಲೀಸರು ಇಮ್ರಾನ್ ಖಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದಾಗ ಅವರ ಬೆಂಬಲಿಗರು ಅವರ ನಿವಾಸದ ಬಳಿ ದೊಡ್ಡ ಹೈಡ್ರಾಮ ನಡೆಸಿದ್ದಾರೆ.
ಪೊಲೀಸರು ರಾತ್ರಿಯಿಡೀ ಇಮ್ರಾನ್ ಖಾನ್ ಅವರ ಬೆಂಬಲಿಗರೊಂದಿಗೆ ಹೋರಾಟ ನಡೆಸಿದ್ದಾರೆ, ಅಶ್ರುವಾಯು ಮತ್ತು ಕಲ್ಲು ತೂರಾಟವನ್ನು ನಡೆಸಿದ್ದಾರೆ ಎಂದು ಹೇಳಲಾಗಿತ್ತು.