9.1 C
Munich
Thursday, March 16, 2023

Land for jobs case Delhi high courtasks Tejashwi Yadav to appear before CBI on March 25 | ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಮಾರ್ಚ್ 25 ರಂದು ಸಿಬಿಐ ಮುಂದೆ ಹಾಜರಾಗುವಂತೆ ತೇಜಸ್ವಿ ಯಾದವ್​​ಗೆ ದೆಹಲಿ ಹೈಕೋರ್ಟ್ ಸೂಚನೆ

ಓದಲೇಬೇಕು

Land for jobs case: 2004 ಮತ್ತು 2009 ರ ನಡುವೆ ರೈಲ್ವೆ ಸಚಿವರಾಗಿದ್ದಾಗ ಲಾಲು ಪ್ರಸಾದ್ ಅವರ ಕುಟುಂಬಕ್ಕೆ ಉಡುಗೊರೆಯಾಗಿ ಅಥವಾ ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೆಯಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.

ತೇಜಸ್ವಿ ಯಾದವ್

ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ (Land for jobs case) ಸಂಬಂಧಿಸಿದಂತೆ ದೆಹಲಿಯಲ್ಲಿ ಮಾರ್ಚ್ 25 ರಂದು ಸಿಬಿಐ (CBI) ಮುಂದೆ ಹಾಜರಾಗುವಂತೆ ದೆಹಲಿ ಹೈಕೋರ್ಟ್(Delhi high court) ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರಿಗೆ ಸೂಚಿಸಿದೆ. ಸಿಬಿಐ ಪರ ವಕೀಲ ಡಿಪಿ ಸಿಂಗ್ ನ್ಯಾಯಾಲಯದ ಮುಂದೆ ಯಾದವ್ ಅವರು ಈ ತಿಂಗಳು ಖುದ್ದಾಗಿ ಹಾಜರಾಗಬಹುದು. ಸಿಬಿಐ ಅವರನ್ನು ಬಂಧಿಸಬಾರದು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್ 25 ರಂದು ಹಾಜರಾಗುವುದಾಗಿ ಬಿಹಾರ ಉಪ ಮುಖ್ಯಮಂತ್ರಿ ವಕೀಲರು ತಿಳಿಸಿದ್ದಾರೆ. ಬುಧವಾರ, ರಾಷ್ಟ್ರೀಯ ಜನತಾ ದಳದ ನಾಯಕ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಏಜೆನ್ಸಿಯ ಸಮನ್ಸ್ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ತನ್ನ ತಂದೆ ಲಾಲು ಪ್ರಸಾದ್ ಮತ್ತು ಇತರ ಅಧಿಕಾರಿಗಳ ವಿರುದ್ಧವಿರುವ ಆಪಾದಿತ ಅಪರಾಧಗಳು ಎಸಗಲಾಗಿದೆ ಎಂದು ಗೊತ್ತಾಗುವ ಹೊತ್ತಲ್ಲಿ ತಾನು ಅಪ್ರಾಪ್ತನಾಗಿದ್ದೆ ಎಂದು ಯಾದವ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 2007 ರಲ್ಲಿ ತೇಜಸ್ವಿ ಯಾದವ್​​ಗೆ 18 ವರ್ಷ ತುಂಬಿತ್ತು.

ಈ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ತನ್ನ ತಾಯಿ ರಾಬ್ರಿ ದೇವಿ, ತಂದೆ ಲಾಲು ಪ್ರಸಾದ್, ಸಹೋದರಿ ಮಿಸಾ ಭಾರತಿ ಮತ್ತು ಇತರರಿಗೆ ಜಾಮೀನು ನೀಡಿದ ದಿನವೇ ಬಿಹಾರ ಉಪ ಮುಖ್ಯಮಂತ್ರಿಯ ಅರ್ಜಿಯು ಹೈಕೋರ್ಟ್‌ಗೆ ಬಂದಿದೆ.

2004 ಮತ್ತು 2009 ರ ನಡುವೆ ರೈಲ್ವೆ ಸಚಿವರಾಗಿದ್ದಾಗ ಲಾಲು ಪ್ರಸಾದ್ ಅವರ ಕುಟುಂಬಕ್ಕೆ ಉಡುಗೊರೆಯಾಗಿ ಅಥವಾ ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೆಯಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.

ಇದನ್ನೂ ಓದಿ: Manish Sisodia: ಮನೀಶ್‌ ಸಿಸೋಡಿಯಾ 7 ದಿನ ಜಾರಿ ನಿರ್ದೇಶನಾಲಯದ ವಶಕ್ಕೆ

ಅಭ್ಯರ್ಥಿಗಳು ನೇರವಾಗಿ ಅಥವಾ ನಿಕಟ ಸಂಬಂಧಿಗಳು ಮತ್ತು ಕುಟುಂಬದ ಸದಸ್ಯರ ಮೂಲಕ ತಮ್ಮ ಭೂಮಿಯನ್ನು ಆಗಿನ ರೈಲ್ವೆ ಸಚಿವರ ಕುಟುಂಬ ಸದಸ್ಯರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ 10 ರಂದು 16 ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಅಪರಾಧಗಳಿಗಾಗಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

Hello world!

error: Content is protected !!