Launch of Shatkoti Hanuman Chalisa Campaign at premises of Akshardham Temple, Delhi ahead of upcoming consecration of Shri Ram Janmabhoomi Temple in Ayodhya | Ayodhya Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣ; ‘ಷಟ್ಕೋಟಿ ಹನುಮ ಚಾಲೀಸ ಪಠಣ ಅಭಿಯಾನ’ಕ್ಕೆ ದೆಹಲಿ ಅಕ್ಷರಧಾಮದಲ್ಲಿ ಚಾಲನೆ

Launch of Shatkoti Hanuman Chalisa Campaign at premises of Akshardham Temple, Delhi ahead of upcoming consecration of Shri Ram Janmabhoomi Temple in Ayodhya | Ayodhya Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣ; ‘ಷಟ್ಕೋಟಿ ಹನುಮ ಚಾಲೀಸ ಪಠಣ ಅಭಿಯಾನ’ಕ್ಕೆ ದೆಹಲಿ ಅಕ್ಷರಧಾಮದಲ್ಲಿ ಚಾಲನೆ

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ 2024ರ ಜನವರಿ 15 ರ ನಂತರ ಭಗವಾನ್ ಶ್ರೀರಾಮನ ಭವ್ಯವಾದ ದೇವಾಲಯವನ್ನು ಪ್ರತಿಷ್ಠಾಪಿಸುವ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ 300 ದಿನಗಳ ಭವ್ಯವಾದ ಭಕ್ತಿ ಅಭಿಯಾನಕ್ಕೆ ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದ ಆವರಣದಲ್ಲಿ ನಡೆದ ಸಮಾವೇಶದ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು.

300 ದಿನಗಳ ಭಕ್ತಿ ಅಭಿಯಾನ ಹಾಗೂ ‘ಷಟ್ಕೋಟಿ ಹನುಮ ಚಾಲೀಸ ಪಠಣ ಅಭಿಯಾನ’ಕ್ಕೆ ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Ayodhya Ram Janmabhoomi) 2024ರ ಜನವರಿ 15 ರ ನಂತರ ಭಗವಾನ್ ಶ್ರೀರಾಮನ ಭವ್ಯವಾದ ದೇವಾಲಯವನ್ನು ಪ್ರತಿಷ್ಠಾಪಿಸುವ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ 300 ದಿನಗಳ ಭವ್ಯವಾದ ಭಕ್ತಿ ಅಭಿಯಾನಕ್ಕೆ ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದ (Akshardham Temple) ಆವರಣದಲ್ಲಿ ನಡೆದ ಸಮಾವೇಶದ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು. ದೇಶದಾದ್ಯಂತ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರೊಂದಿಗೆ, ‘ಷಟ್ಕೋಟಿ ಹನುಮ ಚಾಲೀಸ ಪಠಣ ಅಭಿಯಾನ’ಕ್ಕೂ (Shatkoti Hanuman Chalisa Campaign) ಚಾಲನೆ ನೀಡಲಾಗಿದೆ. ಪತಂಜಲಿ ಯೋಗಪೀಠದ ಬಾಬಾ ರಾಮ್​ದೇವ್, ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ್​​ನ ಸ್ವಾಮಿ ಗೋವಿಂದ ದೇವ್ ಗಿರಿ ಜೀ, ನವದೆಹಲಿಯ ಸ್ವಾಮಿನಾರಾಯಣ ರಿಸರ್ಚ್ ಇನ್​ಸ್ಟಿಟ್ಯೂಟ್​ನ ಸ್ವಾಮಿ ಶ್ರೀ ಭದ್ರೇಶದಾಸ್ ಜೀ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಅನೇಕ ಸಂತರು, ಅಧ್ಯಾತ್ಮ ನಾಯಕರು ಹಾಗೂ ತತ್ವಜ್ಞಾನಿಗಳು ಭಾಗವಹಿಸಿದರು.

ಪರಸ್ಪರ ವಾತ್ಸಲ್ಯ, ಸೌಹಾರ್ದತೆ, ಒಗ್ಗಟ್ಟು, ದಯೆ, ಇಡೀ ರಾಷ್ಟ್ರದಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಂಕಲ್ಪವನ್ನು ಕೈಗೊಳ್ಳುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ, ಅವಧೇಶಾನಂದ ಗಿರಿ, ಮಹಾರಾಜ್ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಶ್ರೀ ಪುಣ್ಯಾನಂದ ಗಿರಿ, ಮಹಾರಾಜ್ ಸ್ವಾಮಿ ಶ್ರೀ ಪರಮಾತ್ಮಾನಂದ ಸರಸ್ವತಿ, ಮಹಾರಾಜ್ ವಿಶ್ವೇಶ್ವರಾನಂದ ಗಿರಿ, ಜೈನ ಆಚಾರ್ಯ ಶ್ರೀ ಲೋಕೇಶ್ ಮುನಿ ಜಿ ಮಹಾರಾಜ್, ಚಂಪಾತಿ ರಾಮ್, ನೃಪೇಂದ್ರ ಮಿಶ್ರಾ (ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ), ಶ್ರೀ ಅಲೋಕ್ ಕುಮಾರ್ (ವಿಶ್ವ ಹಿಂದೂ ಪರಿಷತ್) ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅಕ್ಷರಧಾಮ ವೇದಿಕೆಯಲ್ಲಿ ಸೇರಿದ ಎಲ್ಲ ಗಣ್ಯರು ‘ಷಟ್ಕೋಟಿ ಹನುಮಾನ್ ಚಾಲೀಸಾ ಪಥ’ದ ಭಕ್ತಿ ಪಠಣವನ್ನು ಅರ್ಪಿಸುವುದಾಗಿ ಪ್ರತಿಜ್ಞೆ ಮಾಡಿದರು. ಶ್ರೀರಾಮ ಮಂದಿರವನ್ನು ಸ್ಥಾಪಿಸುವ ಮೊದಲು ದೇವ ಹನುಮಾನ್​ನ ಭಕ್ತಿ ಭಾವವನ್ನು ಜನರಲ್ಲಿ ಜಾಗೃತಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ‘ಷಟ್ಕೋಟಿ ಹನುಮಾನ್ ಚಾಲೀಸಾ’ ಸಾಮೂಹಿಕ ಪಠಣದಂಥ ಕಾರ್ಯಕ್ರಮದಿಂದ ದೇಶಭಕ್ತಿ, ಲೋಕ ಕಲ್ಯಾಣ ಮತ್ತು ಸಹೋದರತ್ವದ ಮನೋಭಾವವನ್ನು ಬೆಳೆಸಲು ಅನುಕೂಲವಾಗಲಿದೆ. ಹೀಗಾಗಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ವರೆಗೂ ಈ ಆಚರಣೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Ayodhya: ಕಾರ್ಕಳದಿಂದ ಅಯೋಧ್ಯೆಗೆ ಹೊರಟಿದೆ 10 ಟನ್ ತೂಕದ ಕೃಷ್ಣ ಶಿಲೆ; ಶ್ರೀರಾಮ ಮೂರ್ತಿ ತಯಾರಿಗೆ ಬಳಕೆ

ಇದರ ಜೊತೆಗೆ ವಿವಿಧ ಆಧ್ಯಾತ್ಮಿಕ ಪ್ರವಚನಗಳು, ಪುಸ್ತಕ-ಪ್ರಬಂಧ ಬರವಣಿಗೆ, ಸುಂದರಕಾಂಡದ ಕುರಿತು ಪ್ರವಚನಗಳು, ಸಮ್ಮೇಳನಗಳು, ಆಧ್ಯಾತ್ಮಿಕ ಚರ್ಚೆಗಳು, ಸ್ಪರ್ಧೆಗಳು ಮತ್ತು ಇತರ ಭಕ್ತಿ ಚಟುವಟಿಕೆಗಳು ಇಡೀ ವರ್ಷ ನಡೆಯಲಿವೆ ಎಂದು ಅಕ್ಷರಧಾಮ ದೇವಾಲಯದ ಆವರಣದಲ್ಲಿ ನಡೆದ ಸಮಾವೇಶದ ಸಂದರ್ಭ ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಗವಾನ್ ರಾಮಚಂದ್ರನ ಪಾತ್ರ ಇಡೀ ಜಗತ್ತಿಗೆ ಸ್ಫೂರ್ತಿಯಾಗಿದೆ. ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೇವಾಲಯದ ಸ್ಥಾಪನೆಯ ದೃಷ್ಟಿಯಿಂದ ನಡೆಸಲಾದ ಈ ಭಕ್ತಿ ಸಮಾರಂಭವು ವಿಶ್ವದಾದ್ಯಂತ ಆಧ್ಯಾತ್ಮಿಕ ಮೌಲ್ಯಗಳನ್ನು ಹರಡಲಿದೆ. ನಮ್ಮ ಗುರು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಸನಾತನ ಧರ್ಮ ಮತ್ತು ಅದರ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರಸಾರ ಮಾಡಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು ಎಂದು ಅಕ್ಷರಧಾಮ ಸಂಘಟನೆಯ ಬ್ರಹ್ಮಸ್ವರೂಪ್ ಮಹಾಂತ್ ಸ್ವಾಮೀಜಿ ಹೇಳಿದರು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

LEAVE A REPLY

Please enter your comment!
Please enter your name here