7.3 C
Munich
Saturday, April 1, 2023

Let the opponent have a heart attack: Did the JDS leader want the death of the former MLA? | ಎದುರಾಳಿಗೆ ಹೃದಯಾಘಾತ ಆಗಲಿ: ಮಾಜಿ ಶಾಸಕರ ಸಾವು ಬಯಸಿದರಾ ಜೆಡಿಎಸ್ ಮುಖಂಡ?

ಓದಲೇಬೇಕು

ಇಂದು ಸೇರಿದ ಜನಸ್ತೋಮ ನೋಡಿ ವಿರೋಧ ಪಕ್ಷದವರಿಗೆ ಹೃದಯಾಘಾತ ಆಗಬೇಕು ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್ ರೋಷಾವೇಶದಿಂದ ಭಾಷಣ ಮಾಡಿದ್ದಾರೆ.

ಜೆಡಿಎಸ್‌ ಮುಖಂಡ ಹಿರೇಹಳ್ಳಿ ಮಹೇಶ್

ತುಮಕೂರು: ಇಂದು ಸೇರಿದ ಜನಸ್ತೋಮ ನೋಡಿ ವಿರೋಧ ಪಕ್ಷದವರಿಗೆ ಹೃದಯಾಘಾತ (heart attack) ಆಗಬೇಕು ಜೆಡಿಎಸ್ ಮುಖಂಡ (JDS leader) ಹಿರೇಹಳ್ಳಿ ಮಹೇಶ್ ರೋಷಾವೇಶದಿಂದ ಭಾಷಣ ಮಾಡಿದ್ದಾರೆ. ಜಿಲ್ಲೆಯ  ಬಳ್ಳಗೆರೆಯಲ್ಲಿ ನಡೆದ ಜೆಡಿಎಸ್ ಜನ ಜಾತ್ರೆಯಲ್ಲಿ ಮಾತನಾಡಿದ ಅವರು, ನಿಮ್ಮ ಜೈಕಾರ ಕೇಳಿ ಎದುರಾಳಿಗೆ  ಹೃದಯಾಘಾತ ಆಗಬೇಕು ಎಂದು ಹೇಳುವ ಮೂಲಕ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಾವು ಬಯಸಿದರಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಶಾಸಕ ಗೌರಿಶಂಕರ, ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಂ. ಇಬ್ರಾಹಿಂ, ನಿಖಿಲ್ ಕುಮಾರಸ್ವಾಮಿ ಇರುವ ವೇದಿಕೆಯಲ್ಲಿ ಹಿರೇಹಳ್ಳಿ ಮಹೇಶ್ ಅವರಿಂದ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ. ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್​​ಗೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಪ್ರಬಲ ಎದುರಾಳಿ ಆಗಿದ್ದಾರೆ.

ಇಲ್ಲಿ ಬಂದಿರುವ ಜನ ಪ್ರೀತಿಯಿಂದ ಬಂದಿದ್ದಾರೆ: ಸಿದ್ದುಗೆ ಟಾಂಗ್ ಕೊಟ್ಟ ಇಬ್ರಾಹಿಂ 

ಸಿಎಂ‌ ಇಬ್ರಾಹಿಂ ಮಾತನಾಡಿ, ಚೆನ್ನಿಗಪ್ಪನ ಹಾದಿಯಲ್ಲಿ ಗೌರಿಶಂಕರ್ ಸಾಗಿಸುತ್ತಿದ್ದರು. ಇಲ್ಲಿ ಬಂದಿರುವ ಜನ ಹಣ ಕೊಟ್ಟು ತಂದ ಜನ ಅಲ್ಲಾ. ಪ್ರೀತಿಯಿಂದ ಬಂದ ಜನ. ನಿನ್ನೆ ಬಿಜೆಪಿಯವರು ವಠಾರ ಕಟ್ಟಿಕೊಂಡು ಕಾರ್ಯಕ್ರಮ ಮಾಡಿದರು. ಸಿದ್ದಗಂಗಾ ಮಠದಲ್ಲಿ ಹೇಗೆ ಅನ್ನದಾಸೋಹ ನಡೆಯುತ್ತೋ ಅದೇ ರೀತಿ ಗೌರಿಶಂಕರ್ ಮನೆಯಲ್ಲಿ ಅನ್ನದಾಸೊಹ ನಡೆಯುತ್ತೆ. ಯಾರೋ ಹುಟ್ಟಿಸಿರೋ ಮಕ್ಕಳಿಗೆ ನಾನು ಹುಟ್ಟಿಸಿದೆ ಅಂತೀರಲ್ಲಾ ಸುರೇಶ್ ಗೌಡರೆ ಎಂದು ವಾದ್ಗಾಳಿ ಮಾಡಿದರು.

ಇದನ್ನೂ ಓದಿ: ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ: ಸಿಎಂ ಬಸವಾರಾಜ ಬೊಮ್ಮಾಯಿ

ಇವತ್ತು ಬಿಜೆಪಿ ಉಳಿಯಲ್ಲ. ಯಡಿಯೂರಪ್ಪ ಒಂದು ಕಡೆ, ಬೊಮ್ಮಾಯಿ ಒಂದು ಕಡೆ ಆಗಿದ್ದಾರೆ. ಇಲ್ಲಿಗೆ ಮೊನ್ನೆ ಸುರೇಶ್ ಗೌಡ, ಸದಾನಂದ ಗೌಡರನ್ನ ಕರೆಸಿದ್ದರು. ಅವರದು ಸಿಡಿ ಇದೆ. ಕೋರ್ಟ್​ನಲ್ಲಿ ಸ್ಟೇ ತಂದಿದ್ದಾರೆ. ಮೇ 15ಕ್ಕೆ ಎಲೆಕ್ಷನ್ ಇದೆ‌. ಮೆ 20ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಗೌರಿಶಂಕರ್ ಸಚಿವರಾಗುತ್ತಾರೆ. ನನ್ನ ಮಾತು ಸುಳ್ಳಾಗಲ್ಲ. ಹತ್ತಕ್ಕೆ ಹತ್ತು ಸೀಟ್ ತುಮಕೂರಿನಲ್ಲಿ ಬರುತ್ತೆ. ಮುಂದೆ ಗೌರಿಶಂಕರ್ ಗೆದ್ದೇ ಗೆಲ್ಲುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ.

ಹೆಚ್‌.ಡಿ.ದೇವೇಗೌಡ ರೋಡ್‌ಶೋ ರದ್ದು

ಹಳೇ ಮೈಸೂರು ಭಾಗದಲ್ಲಿ ಹೆಚ್‌.ಡಿ.ದೇವೇಗೌಡ ರೋಡ್‌ಶೋ ರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ‌ಗೆ ಠಕ್ಕರ್ ನೀಡಲು ರೋಡ್‌ಶೋ ಆಯೋಜಿಸಲಾಗಿತ್ತು. ಆದರೆ ಹೆಚ್​.ಡಿ.ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ರದ್ದು ಪಡಿಸಿದ್ದು, ಮಾರ್ಚ್ 26ರಂದು ಕುಂಬಳಗೋಡಿನಿಂದ ಮೈಸೂರಿನವರೆಗೆ ರೋಡ್ ಶೋ ನಡೆಸಲು ಜೆಡಿಎಸ್ ಮುಂದಾಗಿತ್ತು. ರೋಡ್ ಶೋ ಕುರಿತು ಹೆಚ್.​​ಡಿ. ಕುಮಾರಸ್ವಾಮಿ ಸಿ.ಎಂ.ಇಬ್ರಾಹಿಂ ಇಂದು ಸಭೆ ನಡೆಸಿದ್ದರು.

ಇದನ್ನೂ ಓದಿ:  ಉರಿಗೌಡ, ನಂಜೇಗೌಡರ ಬಗ್ಗೆ ಸ್ವಪಕ್ಷದವರ ಹೇಳಿಕೆಯನ್ನೇ ಖಂಡಿಸಿರುವ ಮುರುಗೇಶ್‌ ನಿರಾಣಿ

ರೋಡ್ ಶೋ ರದ್ದು ಮಾಡುವ ಕುರಿತು ಸಭೆಯಲ್ಲಿ ಕುಮಾರಸ್ವಾಮಿ ಚರ್ಚೆ ಮಾಡಿದ್ದು, ವೈದ್ಯರ ಸಲಹೆ ಮೇರೆಗೆ ರದ್ದು ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯದ 85 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಂಡಿದೆ. ಮಾ. 26ರಂದು ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶ ಆಯೋಜಿಸಿದ್ದು, ಕನಿಷ್ಠ 10 ಲಕ್ಷ ಅಭಿಮಾನಿಗಳು, ಮತದಾರರು ಸೇರಿಸಲು ನಿರ್ಧಾರ ಮಾಡಲಾಗಿದೆ. ಅಭ್ಯರ್ಥಿಗಳು, ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಿದ್ದೇವೆ. ಯಾವ ರೀತಿ ಕೆಲಸ ಮಾಡಬೇಕೆಂದು ಪೂರ್ವಭಾವಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಮತದಾರರು ಜೆಡಿಎಸ್ ಪರ ಇದ್ದಾರೆ

ಕೋಲಾರದಲ್ಲಿ ಸಿದ್ದರಾಮಯ್ಯ ನಿಂತರು ನಮಗೆ ಸಮಸ್ಯೆ ಇಲ್ಲ. ಮತದಾರರು ಜೆಡಿಎಸ್ ಪರ ಇದ್ದಾರೆ. ಯಾರು ಅಭ್ಯರ್ಥಿ ನಿಲ್ಲುತ್ತಾರೆ ಮುಖ್ಯ ಅಲ್ಲ. ನಮ್ಮ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ಈಗಾಗಲೇ ಶ್ರೀನಾಥ್ ಕೆಲಸ ಆರಂಭಿಸಿದ್ದು, ಕಳೆದ ಏಳೆಂಟು ತಿಂಗಳಿನಿಂದ ಸಂಘಟನೆ ನಡೆಯುತ್ತಿದೆ. ಅಲ್ಲಿ ವಿಶೇಷವಾಗಿ ಯಾರು ಪ್ರಮುಖ ಅಭ್ಯರ್ಥಿ ಬರ್ತಾರೆ ಅಂತ ಲೆಕ್ಕಾಚಾರ ಹಾಕಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!