UP Warriorz vs Royal Challengers Bangalore Live score in Kannada: ಈ ಪಂದ್ಯಗಳು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಅಂದರೆ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಎಲಿಮಿನೇಟರ್ ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು.
UPW vs RCB Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಗಳು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಅಂದರೆ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಎಲಿಮಿನೇಟರ್ ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಅತ್ತ ಯುಪಿ ವಾರಿಯರ್ಸ್ ಗೆದ್ದರೆ ಮುಂದಿನ ಹಂತಕ್ಕೇರುವ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಉಭಯ ತಂಡಗಳಿಂದ ಈ ಪಂದ್ಯದಲ್ಲಿ ಭರ್ಜರಿ ಪೈಫೋಟಿ ನಿರೀಕ್ಷಿಸಬಹುದಾಗಿದೆ.
ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್, ಗ್ರ್ಯಾಸಿನ್ ಹರ್ರಿಸ್ ಬಿ , ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್, ಎರಿನ್ ಬರ್ನ್ಸ್, ಕನಿಕಾ ಅಹುಜಾ, ಸಹನಾ ಪವಾರ್, ಡೇನ್ ವ್ಯಾನ್ ನೀಕೆರ್ಕ್, ಕೋಮಲ್ ಝಂಜಾದ್, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್.