7.3 C
Munich
Saturday, April 1, 2023

LLC 2023 Gautam Gambhir and Robin Uthappa attack on Asia Lions Pakistani Bowler in Legends League Cricket in Doha | 20 ಓವರ್‌ಗಳ ಪಂದ್ಯ 75 ಎಸೆತಗಳಲ್ಲಿ ಮುಕ್ತಾಯ! ಗಂಭೀರ್- ಉತ್ತಪ್ಪ ಅಬ್ಬರಕ್ಕೆ ಸುಸ್ತಾದ ಏಷ್ಯಾ ಲಯನ್ಸ್

ಓದಲೇಬೇಕು

Legends League Cricket: ಉತ್ತಪ್ಪ 39 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡಂತೆ 225 ಸ್ಟ್ರೈಕ್ ರೇಟ್‌ನಲ್ಲಿ 88 ರನ್ ಗಳಿಸಿದರೆ, ಗಂಭೀರ್ 36 ಎಸೆತಗಳಲ್ಲಿ 170 ರ ಸ್ಟ್ರೈಕ್ ರೇಟ್‌ನಲ್ಲಿ 12 ಬೌಂಡರಿಗಳೊಂದಿಗೆ 61 ರನ್ ಬಾರಿಸಿದರು.

ಗಂಭೀರ್-ಉತ್ತಪ್ಪ

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರಬಹುದು. ಆದರೆ ಟೀಂ ಇಂಡಿಯಾದ (Team India) ಈ ಮಾಜಿ ಕ್ರಿಕೆಟಿಗರ ಹಳೆಯ ಶೈಲಿಯ ಆಟ ಮಾತ್ರ ಕೊಂಚವು ಕಡಿಮೆಯಾಗಿಲ್ಲ. ದೋಹಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ (Legends League Cricket) ಅಬ್ಬರದ ಬ್ಯಾಟಿಂಗ್ ಮಾಡಿದ ಗೌತಮ್ ಗಂಭೀರ್ (Gautam Gambhir) ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಏಷ್ಯಾ ಲಯನ್ಸ್ ವಿರುದ್ಧ ಇಂಡಿಯಾ ಮಹಾರಾಜಸ್ (Asia Lions vs India Maharaja ) ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಗಂಭೀರ್ ಮತ್ತು ಉತ್ತಪ್ಪ ಅವರ ಅಬ್ಬರ ಹೇಗಿತ್ತಿದ್ದೆಂದರೆ ಈ ಇಬ್ಬರನ್ನು ಔಟ್ ಮಾಡಲು ಏಷ್ಯಾ ಲಯನ್ಸ್ ತಂಡ 7 ಬೌಲರ್‌ಗಳನ್ನು ಬಳಸಿತ್ತಾದರೂ ಯಶಸ್ವಿಯಾಗಲಿಲ್ಲ. ಪರಿಣಾಮವಾಗಿ, ಇಂಡಿಯಾ ಮಹಾರಾಜಸ್ ತಂಡ ಲೀಗ್​ನಲ್ಲಿ ಮೊದಲ ಜಯ ಸಾಧಿಸಿತು.

20 ಓವರ್‌ಗಳ ಪಂದ್ಯ 75 ಎಸೆತಗಳಲ್ಲಿ ಮುಕ್ತಾಯ!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏಷ್ಯಾ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 157 ರನ್ ಗಳಿಸಿತು. ಪ್ರತ್ಯುತ್ತರವಾಗಿ 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಹಾರಾಜಸ್ ತಂಡ ಕೇವಲ 75 ಎಸೆತಗಳಲ್ಲಿ ಅಂದರೆ 12.3 ಓವರ್‌ಗಳಲ್ಲಿ ಜಯದ ನಗೆ ಬೀರಿತು.

LLC 2023: ಗಂಭೀರ್ ಏಕಾಂಗಿ ಹೋರಾಟ ವ್ಯರ್ಥ; ಮಿಸ್ಬಾ ಅಬ್ಬರಕ್ಕೆ ತತ್ತರಿಸಿದ ಇಂಡಿಯಾ ಮಹಾರಾಜಸ್

ಗಂಭೀರ್-ಉತ್ತಪ್ಪ ಅಬ್ಬರ

ಇಂಡಿಯಾ ಮಹಾರಾಜಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗೌತಮ್ ಗಂಭೀರ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಆರಂಭದಿಂದಲೇ ಏಷ್ಯನ್ ಬೌಲರ್​ಗಳನ್ನು ದಂಡಿಸಲಾರಂಭಿಸಿದರು. ಈ ಇಬ್ಬರನ್ನು ಕಟ್ಟಿ ಹಾಕಲು 5 ಪಾಕಿಸ್ತಾನಿ ಬೌಲರ್​ಗಳು ಮತ್ತು ಇಬ್ಬರು ಶ್ರೀಲಂಕಾ ಬೌಲರ್​ಗಳು ಶತಪ್ರಯತ್ನ ಪಟ್ಟರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಇಂಡಿಯಾ ಮಹಾರಾಜಸ್ ತಂಡ 12.3 ಓವರ್‌ಗಳಲ್ಲಿ 158 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.

ಗಂಭೀರ್ ಮತ್ತು ಉತ್ತಪ್ಪ ಅಬ್ಬರ ಎಷ್ಟಿತ್ತೆಂದರೆ, ಎದುರಾಳಿ ತಂಡದ ಯಾವ ಬೌಲರ್​ಗೂ ರನ್​ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅದರಲ್ಲೂ ಈ ಇಬ್ಬರು ಸೇರಿ ಪಾಕಿಸ್ತಾನದ ಬೌಲರ್‌ಗಳನ್ನು ಹೇಗೆ ಕಾಡಿದರೆಂದರೆ, ಪಾಕ್ ತಂಡದ ಮಾಜಿ ಬೌಲರ್​ ಸೊಹೈಲ್ ತನ್ವಿರ್ 11 ರ ಎಕಾನಮಿಯೊಂದಿಗೆ ರನ್ ನೀಡಿದರೆ, ಮೊಹಮ್ಮದ್ ಅಮೀರ್ 9.66 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು. ಈ ಇಬ್ಬರನ್ನು ಹೊರತುಪಡಿಸಿ ಮೊಹಮ್ಮದ್ ಹಫೀಜ್ 16.50 ಎಕಾನಮಿಯೊಂದಿಗೆ ರನ್ ನೀಡಿದರೆ, ಅಬ್ದುರ್ ರಜಾಕ್ ಮತ್ತು ಶೋಯೆಬ್ ಅಖ್ತರ್ ತಲಾ 12 ರ ಎಕಾನಮಿಯೊಂದಿಗೆ ರನ್ ನೀಡಿದರು.

23 ಬೌಂಡರಿ, 5 ಸಿಕ್ಸರ್

ಮೈದಾನದಲ್ಲಿ ಬೌಂಡರಿ ಸಿಕ್ಸರ್​ಗಳ ಮಳೆಗರೆದ ಈ ಜೋಡಿ ಅಜೇಯ ಅರ್ಧಶತಕ ಬಾರಿಸಿ, ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು. ಇದರಲ್ಲಿ ಉತ್ತಪ್ಪ 39 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡಂತೆ 225 ಸ್ಟ್ರೈಕ್ ರೇಟ್‌ನಲ್ಲಿ 88 ರನ್ ಗಳಿಸಿದರೆ, ಗಂಭೀರ್ 36 ಎಸೆತಗಳಲ್ಲಿ 170 ರ ಸ್ಟ್ರೈಕ್ ರೇಟ್‌ನಲ್ಲಿ 12 ಬೌಂಡರಿಗಳೊಂದಿಗೆ 61 ರನ್ ಬಾರಿಸಿದರು. ಈ ಮೂಲಕ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ಪಂದ್ಯದಲ್ಲಿ 23 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟಿದಲ್ಲದೆ, ತಂಡವನ್ನು ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಂದುಕೂರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!