LLC 2023: ಉತ್ತಪ್ಪ, ಹಫೀಜ್ ವಿರುದ್ಧ 3 ಸಿಕ್ಸರ್ ಸಿಡಿಸಿದ್ದಲ್ಲದೆ, 3 ಬೌಂಡರಿಗಳನ್ನೂ ಬಾರಿಸಿದ್ದರು. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡ ಕೇವಲ 6 ಎಸೆತಗಳಲ್ಲಿ 30 ರನ್ ಗಳಿಸಿತು.
ರಾಬಿನ್ ಉತ್ತಪ್ಪ
ಐಪಿಎಲ್ಗೆ (IPL) ವಿದಾಯ ಹೇಳಿದ ಬಳಿಕ ಇದೀಗ ಲೆಜೆಂಡ್ಸ್ ಲೀಗ್ ((Legends League Cricket)) ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ ( Robin Uthappa) ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ಲೀಗ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಉತ್ತಪ್ಪ, ಇದೀಗ ಮೂರನೇ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ್ದಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಈ ಕ್ರಿಕೆಟ್ ಲೀಗ್‌ನಲ್ಲಿ ಮಾರ್ಚ್ 14 ರಂದು ಇಂಡಿಯಾ ಮಹಾರಾಜಸ್ ತಂಡ, ಏಷ್ಯಾ ಲಯನ್ಸ್ (Asia Lions vs India Maharaja ) ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏಷ್ಯಾ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಪ್ರತ್ಯುತ್ತರವಾಗಿ 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಹಾರಾಜಸ್ ತಂಡ ಕೇವಲ 75 ಎಸೆತಗಳಲ್ಲಿ ಅಂದರೆ 12.3 ಓವರ್‌ಗಳಲ್ಲಿ ಜಯದ ನಗೆ ಬೀರಿತು. ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡಿಗ ಉತ್ತಪ್ಪ ಎದುರಾಳಿ ಬೌಲರ್ಗಳನ್ನು ಸರಿಯಾಗಿ ಬೆಂಡೆತ್ತಿದರು.
ಉತ್ತಪ್ಪ ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್
ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ಉತ್ತಪ್ಪ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಅದರಲ್ಲೂ ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ಮುಹಮ್ಮದ್ ಹಫೀಜ್ ಅವರ ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳು ಹುಚ್ಚೆದು ಕುಣಿಯುವಂತೆ ಮಾಡಿದರು. ರಾಬಿನ್ ಅಬ್ಬರಕ್ಕೆ ಸುಸ್ತಾದ ಹಫೀಜ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 2 ಓವರ್ ಮಾತ್ರ ಬೌಲ್ ಮಾಡಿದರು. ಇದರಲ್ಲಿ 16.50 ರ ಎಕನಾಮಿಯಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ 33 ರನ್ ನೀಡಿದರು. ಇದರಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಸಿಡಿಸಿದ ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್ಗಳ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
.@robbieuthappa Unleashes Sky Bombs!@visitqatar#LegendsLeagueCricket #SkyexchnetLLCMasters #LLCT20 #YahanSabBossHain #ALvsIM pic.twitter.com/1LNIq5HBR1
— Legends League Cricket (@llct20) March 14, 2023
6 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ, 30 ರನ್!
ಉತ್ತಪ್ಪ, ಹಫೀಜ್ ವಿರುದ್ಧ 3 ಸಿಕ್ಸರ್ ಸಿಡಿಸಿದ್ದಲ್ಲದೆ, 3 ಬೌಂಡರಿಗಳನ್ನೂ ಬಾರಿಸಿದ್ದರು. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡ ಕೇವಲ 6 ಎಸೆತಗಳಲ್ಲಿ 30 ರನ್ ಗಳಿಸಿತು. ಈ ಪಂದ್ಯದಲ್ಲಿ ಉತ್ತಪ್ಪ ಒಟ್ಟು 5 ಸಿಕ್ಸರ್‌ಗಳನ್ನು ಸಿಡಿಸಿ 39 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು.
20 ಓವರ್‌ಗಳ ಪಂದ್ಯ 75 ಎಸೆತಗಳಲ್ಲಿ ಮುಕ್ತಾಯ! ಗಂಭೀರ್- ಉತ್ತಪ್ಪ ಅಬ್ಬರಕ್ಕೆ ಸುಸ್ತಾದ ಏಷ್ಯಾ ಲಯನ್ಸ್
ಗಂಭೀರ್-ಉತ್ತಪ್ಪ ಅಬ್ಬರ
ಇಂಡಿಯಾ ಮಹಾರಾಜಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗೌತಮ್ ಗಂಭೀರ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಆರಂಭದಿಂದಲೇ ಏಷ್ಯನ್ ಬೌಲರ್ಗಳನ್ನು ದಂಡಿಸಲಾರಂಭಿಸಿದರು. ಈ ಇಬ್ಬರನ್ನು ಕಟ್ಟಿ ಹಾಕಲು 5 ಪಾಕಿಸ್ತಾನಿ ಬೌಲರ್ಗಳು ಮತ್ತು ಇಬ್ಬರು ಶ್ರೀಲಂಕಾ ಬೌಲರ್ಗಳು ಶತಪ್ರಯತ್ನ ಪಟ್ಟರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಇಂಡಿಯಾ ಮಹಾರಾಜಸ್ ತಂಡ 12.3 ಓವರ್‌ಗಳಲ್ಲಿ 158 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ