♥️ಒಂಟಿತನದ ಪ್ರೇಮ ದಿನ♥️
ಮತ್ತೆ ಮತ್ತೆ ಮರಳಿ ಬರುತಿದೆ ನಿನ್ನ ಪ್ರೀತಿಯ ನೆನೆಯೋ ದಿನ
ಹಿಂದೊಂದು ಈ ದಿನ ನನ್ನ ಬಳಿಬಂದು ಹೇಳಿದ ಆ ಪದಗಳು
ಇಂದಿಗೂ ನನ್ನ ಕಿವಿಯಲಿ ಗುನುಗುತಿದೆ ನಿನ್ನ ಹೆಸರ
ಹೇ ಗೆಳತಿ ಮತ್ತೊಮ್ಮೆ ಹೇಳು ಬಾ ನನ್ನ ಬಿಗಿದಪ್ಪಿ ಅದೇ ಪದವನು
ನೀ ಮೊದಲು ಕೊಟ್ಟ ನೆನಪಿನ ಕಾಣಿಕೆ ನಿನ್ನ ಮುತ್ತನು ಕಾಡುತಿದೆ
ಹೇಳಲಾಗದ ನೊವಲ್ಲಿರುವಾಗ ನಿನ್ನ ಅಪ್ಪುಗೆಯ ಕೊಡಲು ನೀನೆ ಇಲ್ಲಾ
ನಾನು ನೀನು ಕೂತು ನಲಿವಲಿ ನಕ್ಕ ಆ ಪಾರ್ಕಿನಲ್ಲಿ ಕೂತು ಓಡಾಡಿದ ಜಾಗ
ನಮ್ಮ ಮಾತುಗಳನು ಕೇಳುತ್ತಿದ್ದ ಗಿಡಮರಗಳು ಕಾಯುತಿವೆ ನಿನ್ನ ನೊಡಲು
ಪ್ರೇಮಿಗಳೆಲ್ಲರೂ ಇಂದು ಸಂತೋಷದ ಸಂಭ್ರಮದಲಿ ತೇಲಾಡುತಿರುವರು
ಈ ದಿನ ನನ್ನ ಜೊತೆ ಗೆಳತಿ ಇಂದು ನೀ ಇಲ್ಲದೇ ನಾ ಆನಾಥನಾಗಿರುವೆ
ಎಲ್ಲಿದ್ದರೂ ಬಾ ಒಮ್ಮೆ ನಾ ಇರುವಲ್ಲಿಗೆ ನೊಡುವಾಸೆಯಾಗಿದೆ
ನಿನಗೆ ನಾ ಯಾರೆಂದಾರು ನೆನಪಿದೇಯಾ ನಿನ್ನ ಮನದಲಿ
ನೆನಪಿದ್ದರೇ ಇಷ್ಟು ದಿನಗಳಾದರು ನೀ ಯಾಕಿನ್ನು ಬಂದಿಲ್ಲಾ ನೋಡಲು
ನಿನ್ನ ಪ್ರೀತಿಯೇ ಸುಳ್ಳಾಯಿತೆ
ನನಗೆ ನಂಬಿಕೆ ಇದೆ ನಿನ್ನ ಪ್ರೀತಿಯಲಿ
ಏನಾಯಿತೇ ಗೆಳತಿ ನನ್ನ ಪ್ರೀತಿಯಿಂದ ಏನಾದರು ನಿನಗೆ ನೊವಾಯಿತೇ
ಹಾಗೇನಾದರು ನನ್ನಿಂದ ತಿಳಿದು ತಿಳಿಯದೇ ನೊವಾಗಿದ್ದರೆ ಕ್ಷಮಿಸಿಬಿಡು
ಮರಳಿ ಬಾ ಚೆಲುವೆ ಕಾಯುವೆ ನಾ ಜೀವದ ಕೊನೆ ಉಸಿರವರೆಗೂ.,
~I £ØVÊ ~~~~? ¥ÕÛ & A££..,
ಒಂಟಿತನದ ಪ್ರೇಮ ದಿನ : ವಾರದ ಕವಿತೆ ಪ್ರಜಾ ನ್ಯೂಸ್ ಜೊತೆ