ಚುನಾವಣೆಯಲ್ಲಿ ಗೆದ್ದು ಹೋದವರು 5 ವರ್ಷಗಳ ನಂತರ ನಮ್ಮಲ್ಲಿಗೆ ಬಂದಿದ್ದೀರಿ ಅಂತ ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಶಾಸಕ ಅಲ್ಲಿಂದ ಕಾಲ್ಕಿತ್ತಿದರು!
ತುಮಕೂರು: ಎಲ್ಲಾ ಕ್ಷೇತ್ರಗಳ ಮತದಾರರು ಹೀಗೆ ತಮ್ಮ ಶಾಸಕ, ಸಂಸದರನ್ನು ರಸ್ತೆಯಲ್ಲಿ ನಿಲ್ಲಿಸಿ ನಮ್ಮ ಕ್ಷೇತ್ರಕ್ಕೆ ನೀವು ಮಾಡಿದ್ದೇನು ಅಂತ ಕೇಳುವಂತಾದರೆ ಪ್ರಜಾಪ್ರಭುತ್ವ (democracy) ವ್ಯವಸ್ಥೆ ಗಟ್ಟಿಯಾಗುವುದರಲ್ಲಿ ಮತ್ತು ಕ್ಷೇತ್ರಗಳು ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಮಧುಗಿರಿಯ ಜೆಡಿಎಸ್ ಶಾಸಕ ವೀರಭದ್ರಯ್ಯ (MV Veerabhadraiah) ತಮ್ಮ ಕ್ಷೇತ್ರದ ನೀರಕಲ್ಲು ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಜನ ಒಂದೇ ಸಮ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ಒಂದು ಸೂಕ್ತವಾವ ಕಟ್ಟಡವಿಲ್ಲ, ಮಳೆ ಬಂದಾಗ ಮಕ್ಕಳು ನೀರಲ್ಲಿ ನೆನೆಯುತ್ತಾ ಪಾಠ ಕೇಳಬೇಕಿದೆ, ಊರಲ್ಲಿ ಚರಂಡಿ ವ್ಯವಸ್ಥೆ ಮತ್ತು ಯಾವುದೇ ಮೂಲಭೂತ ಸೌಕರ್ಯವಿಲ್ಲ (basic amenity), ಚುನಾವಣೆಯಲ್ಲಿ ಗೆದ್ದು ಹೋದವರು 5 ವರ್ಷಗಳ ನಂತರ ನಮ್ಮಲ್ಲಿಗೆ ಬಂದಿದ್ದೀರಿ ಅಂತ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಶಾಸಕ ಅಲ್ಲಿಂದ ಕಾಲ್ಕಿತ್ತಿದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ