13.5 C
Munich
Thursday, March 9, 2023

Mahati Vaishnavi Bhat And Aravind Iyer join Meghana Raj starrer Tatsama Tadbhava Team | ಹಿರಿದಾಗುತ್ತಿದೆ ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಟೀಂ; ಮಹತಿ ವೈಷ್ಣವಿ ಭಟ್, ಅರವಿಂದ್ ಅಯ್ಯರ್ ಸೇರ್ಪಡೆ

ಓದಲೇಬೇಕು

Meghana Raj: ದಿನ ಕಳೆದಂತೆ ಸಿನಿಮಾ ತಂಡ ಹಿರಿದಾಗುತ್ತಿದೆ. ಅನೇಕ ಕಲಾವಿದರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಅರವಿಂದ್ ಅಯ್ಯರ್ ಹಾಗೂ ಮಹತಿ ವೈಷ್ಣವಿ ಭಟ್ ಅವರು ಈ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ರಿವೀಲ್ ಆಗಿದೆ.

ಅರವಿಂದ್​-ಮೇಘನಾ-ಮಹತಿ

ನಟಿ ಮೇಘನಾ ರಾಜ್ (Meghana Raj) ಅವರು ‘ತತ್ಸಮ ತದ್ಭವ’ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹಾಗೂ ಸೆಲೆಬ್ರಿಟಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡಿತ್ತು. ಅನೇಕ ಸೆಲೆಬ್ರಿಟಿಗಳು ಮೇಘನಾಗೆ ಶುಭಕೋರಿದ್ದರು. ದಿನ ಕಳೆದಂತೆ ಸಿನಿಮಾ ತಂಡ ಹಿರಿದಾಗುತ್ತಿದೆ. ಅನೇಕ ಕಲಾವಿದರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಅರವಿಂದ್ ಅಯ್ಯರ್ ಹಾಗೂ ಮಹತಿ ವೈಷ್ಣವಿ ಭಟ್ (Mahati Vaishnavi Bhat) ಅವರು ಈ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ರಿವೀಲ್ ಆಗಿದೆ.

ಅರವಿಂದ್ ಅಯ್ಯರ್

ಅರವಿಂದ್ ಅಯ್ಯರ್ ಅವರು ಸ್ಯಾಂಡಲ್​ವುಡ್​ನಲ್ಲಿ ಒಳ್ಳೊಳ್ಳೆಯ ಪಾತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ, ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಅರವಿಂದ್ ಅಯ್ಯರ್ ಮಾಡಿದ್ದ ಪಾತ್ರ ಗಮನ ಸೆಳೆದಿತ್ತು. ‘ಭೀಮಸೇನ ನಳಮಹಾರಾಜ’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿ ಗಮನ ಸೆಳೆದರು. ಈಗ ಅವರು ‘ತತ್ಸಮ ತದ್ಭವ’ ತಂಡ ಸೇರಿಕೊಂಡಿದ್ದಾರೆ. ಮ್ಯಾಥ್ಯೂ ಹೆಸರಿನ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅವರ ಮೊದಲ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ.

ಮಹತಿ ವೈಷ್ಣವಿ ಭಟ್

ನಟಿ ಮಹತಿ ವೈಷ್ಣವಿ ಭಟ್ ಕೂಡ ‘ತತ್ಸಮ ತದ್ಭವ’ ತಂಡ ಸೇರಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ 2016ರಲ್ಲಿ ಪ್ರಸಾರವಾದ ‘ಡ್ರಾಮಾ ಜ್ಯೂನಿಯರ್ಸ್’ ಮೊದಲ ಸೀಸನ್‌ನಲ್ಲಿ ಮಹತಿ ವೈಷ್ಣವಿ ಭಟ್ ಸ್ಪರ್ಧಿಸಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಅಮೂಲ್ಯಳ ಕಿರಿಯ ಸಹೋದರಿ ಅಂಜಲಿ ಪಾತ್ರದಲ್ಲಿ ಮಹತಿ ನಟಿಸುತ್ತಿದ್ದಾರೆ. ಇದರ ಜೊತೆ ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರು ಮೇಘನಾ ರಾಜ್ ಸಿನಿಮಾದಲ್ಲಿ ನಿಧಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನನ್ನದು ಪ್ರತಿ ಹದಿಹರೆಯದವರಿಗೂ ಅನ್ವಯಿಸುವ ಪಾತ್ರ. ಮುಗ್ಧತೆ ಮತ್ತು ಭಾವನೆಗಳ ಮಿಶ್ರಣವನ್ನು ಈ ಪಾತ್ರ ಹೊಂದಿದೆ. ಈ ಪಾತ್ರ ನಿರ್ವಹಿಸಿದ ಸವಾಲು ತುಂಬಾ ಇಷ್ಟವಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ



 ‘ತತ್ಸಮ ತದ್ಭವ’ ಚಿತ್ರದ ಬಗ್ಗೆ

ಮೇಘನಾ ರಾಜ್ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡರು. ಪತಿ ಚಿರಂಜೀವಿ ನಿಧನದ ನಂತರದಲ್ಲಿ ಕಣ್ಣೀರಲ್ಲಿ ಕೈತೊಳೆಯುವಂತಾಯಿತು. ನಂತರ ರಾಯನ್ ಜನಿಸಿದೆ. ಆ ಬಳಿಕ ಮಗನ ಆರೈಕೆಯಲ್ಲಿ ಅವರು ಬ್ಯುಸಿ ಆದರು. ಈಗ ‘ತತ್ಸಮ ತದ್ಭವ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪನ್ನಗ ಭರಣ ಬಂಡವಾಳ ಹೂಡುತ್ತಿದ್ದಾರೆ. ವಿಶಾಲ್​ ಆತ್ರೇಯಾ ಅವರು ನಿರ್ದೇಶನ ಮಾಡಲಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!