7.6 C
Munich
Friday, March 3, 2023

Mahesh Babu Doing workout for SS Rajamouli Movie Not For Trivikram Srinivas Film | ಮಹೇಶ್ ಬಾಬು ಜಿಮ್​ನಲ್ಲಿ ವರ್ಕೌಟ್ ಮಾಡ್ತಿರೋ ಫೋಟೋ ಹಿಂದಿದೆ ದೊಡ್ಡ ಹಿಂಟ್

ಓದಲೇಬೇಕು

ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿ ಸಿಂಪಲ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಬಾಡಿ ಬೆಳೆಸಿಕೊಂಡು ಸಿನಿಮಾ ಮಾಡಿದ್ದು ಕಡಿಮೆ. ಆದರೆ, ಈಗ ಮಹೇಶ್ ಬಾಬು ಅವರು ಜಿಮ್​ನಲ್ಲಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ.

ಮಹೇಶ್ ಬಾಬು

‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata) ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದಿದೆ. ಆದಾಗ್ಯೂ ಅವರ ಹೊಸ ಸಿನಿಮಾದ ಕೆಲಸಗಳು ಪೂರ್ಣಪ್ರಮಾಣದಲ್ಲಿ ಶುರುವಾಗಿಲ್ಲ. ಮಹೇಶ್ ಬಾಬು (Mahesh Babu) ಅವರ 28ನೇ ಸಿನಿಮಾ ಇದಾಗಿದ್ದು, ತ್ರಿವಿಕ್ರಂ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮಧ್ಯೆ ಮಹೇಶ್ ಬಾಬು ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಬೇರೆಯದೇ ಊಹಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿ ಸಿಂಪಲ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದ ಸ್ಟಾರ್ಸ್​​ಗಳಂತೆ ಅವರು ಬಾಡಿ ಬೆಳೆಸಿಕೊಂಡು ಸಿನಿಮಾ ಮಾಡಿದ್ದು ಕಡಿಮೆ. ಆದರೆ, ಈಗ ಮಹೇಶ್ ಬಾಬು ಅವರು ಜಿಮ್​ನಲ್ಲಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಇದು ರಾಜಮೌಳಿ ಚಿತ್ರಕ್ಕೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಫ್ಯಾನ್ಸ್ ಈ ರೀತಿ ಆಲೋಚನೆ ಮಾಡುವುದಕ್ಕೂ ಒಂದು ಕಾರಣ ಇದೆ.

ಹೀರೋ ಪಾತ್ರಗಳ ವಿಚಾರದಲ್ಲಿ ರಾಜಮೌಳಿ ಅವರು ಒಂದು ಪ್ಯಾಟರ್ನ್ ಫಾಲೋ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೀರೋಗೆ ಸಖತ್ ಬಾಡಿ ಇರುತ್ತದೆ. ‘ಬಾಹುಬಲಿ’, ‘ಆರ್​ಆರ್​ಆರ್​’ ಚಿತ್ರದಲ್ಲಿ ಇದೇ ಪ್ಯಾಟರ್ನ್​ ಕಂಡು ಬಂದಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ರಾಮ್ ಚರಣ್, ಜೂ.ಎನ್​ಟಿಆರ್ ಅವರು ಬಾಡಿ ಬಿಲ್ಡ್ ಮಾಡಿಕೊಂಡು ರಾಜಮೌಳಿ ಸಿನಿಮಾದಲ್ಲಿ ಗಮನ ಸೆಳೆದಿದ್ದರು. ಮಹೇಶ್ ಬಾಬು ಕೂಡ ರಾಜಮೌಳಿ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಕಾರಣಕ್ಕೆ ಅವರು ಜಿಮ್​ನಲ್ಲಿ ಭರ್ಜರಿ ವರ್ಕೌಟ್ ಶುರು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: SS Rajamouli: ‘ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡ್ತಾರೆ’ ಎಂದವರಿಗೆ ರಾಜಮೌಳಿ ಕೊಟ್ರು ತಿರುಗೇಟು

ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಮಾಡುತ್ತಾರೆ ಅನ್ನೋದು ಗೊತ್ತಿರುವ ವಿಚಾರ. ತ್ರಿವಿಕ್ರಂ ಶ್ರೀನಿವಾಸ್ ಜೊತೆಗಿನ ಸಿನಿಮಾ ಮುಗಿದ ಬಳಿಕವೇ ಈ ಚಿತ್ರ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸಿನಿಮಾದ ಕೆಲಸಗಳು ಇನ್ನೂ ಆರಂಭ ಆಗದ ಕಾರಣ ಈ ಬಗ್ಗೆ ಅನುಮಾನ ಮೂಡಿದೆ. ರಾಜಮೌಳಿ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ಮಾರ್ಚ್​ 12ರಂದು ನಡೆಯುವ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮುಗಿದ ಬಳಿಕ ಅವರು ಭಾರತಕ್ಕೆ ಬರಲಿದ್ದಾರೆ. ಆ ಬಳಿಕವಷ್ಟೇ ಈ ಬಗ್ಗೆ ಅವರಿಗೆ ಸ್ಪಷ್ಟತೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!