ಕಾಯಕ ಹಾಗೂ ಕೃಷಿಯನ್ನೇ ನಂಬಿಕೊಂಡು ಬದುಕುವ ಹೂಗಾರ ಸಮಾಜಕ್ಕೆ ಹೂಗಾರ್ ಅಭಿವೃದ್ಧಿ ನಿಗಮ ಮಾಡಿದ್ದು ತುಂಬಾ ಸಂತೋಷವಾಗಿದೆ ರಾಜ್ಯ ಸರ್ಕಾರಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಯಡ್ರಾಮಿ ತಾಲೂಕಿನ ಹೂಗಾರ ಸಮುದಾಯದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಹೂಗಾರ್ ಬಿಳವಾರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ ಇಲ್ಲಿಯವರೆಗೂ ಎಲ್ಲಾ ಸಮುದಾಯದ ವರ್ಗದವರಿಗೆ ಅವರವರ ಅನುಕೂಲಕ್ಕೆ ತಕ್ಕಂತೆ ನಿಗಮಗಳನ್ನು ಸ್ಥಾಪನೆ ಮಾಡಲಾಗಿತ್ತು ಹೂಗಾರ ಸಮುದಾಯಕ್ಕೆ ಯಾವುದೇ ಅಭಿವೃದ್ಧಿ ನಿಗಮ ಇರಲಿಲ್ಲ ಹಲವಾರು ಬಾರಿ ಈ ವಿಷಯದ ಕುರಿತು ಹೂಗಾರ್ ಸಮುದಾಯದ ಮುಖಂಡರು ಹೋರಾಟ ಮಾಡುತ್ತಲೇ ಬಂದಿದ್ದರು ಅದರ ಪ್ರತಿಫಲವಾಗಿ ಇಂದು ಹೂಗಾರ ಸಮುದಾಯದ ಪರವಾಗಿ ನೂರಾರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹೂಗಾರ್ ಅಭಿವೃದ್ಧಿ ನಿಗಮ ಮುಂದೆ ನಮ್ಮ ಎಲ್ಲ ಹೂಗಾರ ಸಮುದಾಯದವರಿಗೆ ಅನುಕೂಲಕರವಾಗಲಿದೆ. ಹಾಗೂ ಹೂಗಾರ ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹೂಗಾರ ಸಮುದಾಯದ ಪರವಾಗಿ ಯಡ್ರಾಮಿ ತಾಲೂಕಿನ ಹೂಗಾರ್ ಸಮುದಾಯದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಹೂಗಾರ್ ಬಿಳವಾರ ಅವರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ
ಹೂಗಾರ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಲ್ಲಿಕಾರ್ಜುನ ಹೂಗಾರ ಸಂತಸ….
