0.5 C
Munich
Thursday, March 2, 2023

Mangaluru: Man arrested after months of breaking into jewellery shop, killing staff | ಮಂಗಳೂರಿನ ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ: ತಿಂಗಳ ಬಳಿಕ ಆರೋಪಿ ಅರೆಸ್ಟ್​

ಓದಲೇಬೇಕು

ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡಿನಲ್ಲಿ ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಬಂಧಿತ ಆರೋಪಿ.

ಶಿಫಾಸ್(33) ಬಂಧಿತ ಆರೋಪಿ

ಮಂಗಳೂರು: ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ ಸಿಬ್ಬಂದಿ ಹತ್ಯೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡಿನಲ್ಲಿ ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಬಂಧಿತ ಆರೋಪಿ. ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡದಿಂದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿ ಶಿಫಾಸ್ ಮಂಗಳೂರು ಪೊಲೀಸರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಫೆ.3ರಂದು ಮಂಗಳೂರಿನ ಹಂಪನಕಟ್ಟೆಯ ಮಂಗಳೂರು ‌ಜ್ಯುವೆಲ್ಲರಿ ಹೆಸರಿನ ಶಾಪ್​ನಲ್ಲಿ ಕೊಲೆ ಮಾಡಿದ್ದು, ಜ್ಯುವೆಲ್ಲರಿ ಸಿಬ್ಬಂದಿ, ಅತ್ತಾವರ ನಿವಾಸಿ ರಾಘವೇಂದ್ರ(50) ಹತ್ಯೆ ಮಾಡಲಾಗಿತ್ತು. ಮಾಲೀಕ ಕೇಶವ ಆಚಾರ್ಯ ‌ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಕೊಲೆ ನಡೆದಿತ್ತು. ಬಂದರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನವೇ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್ ಆಗಿತ್ತು.

ನೆರೆಮನೆಯವರಿಗೆ ಕೋವಿ ತೋರಿಸಿ‌ ಬೆದರಿಕೆ ಒಡ್ಡಿ ಯುವಕನ ದಾಂಧಲೆ

ಮಂಗಳೂರು: ನೆರೆಮನೆಯವರಿಗೆ ಕೋವಿ ತೋರಿಸಿ‌ ಬೆದರಿಕೆ ಒಡ್ಡಿ ಯುವಕ ದಾಂಧಲೆ ಮಾಡಿರುವಂತಹ ಘಟನೆ ಹೊರವಲಯದ ಮೂಡುಶೆಡ್ಡೆ ವ್ಯಾಪ್ತಿಯ ಎದುರುಪದವಿನಲ್ಲಿ ನಡೆದಿದೆ. ಬಾಡಿಗೆ‌‌ ಮನೆಯಲ್ಲಿ ವಾಸವಿದ್ದ ರಾಜೇಶ್ ರೈ ದಂಪತಿಯಿಂದ ಕಿರಿಕ್ ಮಾಡಲಾಗಿದೆ. ಪಕ್ಕದ ಮನೆ ಯುವತಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಲಾಗಿದೆ. ಸ್ಥಳೀಯ ನಿವಾಸಿ ರಾಜೇಶ್ ರೈ ಮತ್ತು ಆತನ ಪತ್ನಿ ರಾಜೇಶ್ವರಿಯಿಂದ ಹಲ್ಲೆ ಆರೋಪ ಮಾಡಲಾಗಿದೆ. ಬಳಿಕ ಸ್ಥಳದಲ್ಲಿದ್ದವರಿಗೆ ಕೋವಿ ತೋರಿಸಿ ಬೆದರಿಕೆ ಒಡ್ಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಬಿಸಿ ನೀರು ಎರಚಿ ದಂಪತಿ ರಂಪಾಟ ಮಾಡಿದ್ದಾರೆ. ಸ್ಥಳಕ್ಕೆ ಕಾವೂರು ಪೊಲೀಸರ ಭೇಟಿ ನೀಡಿ ಕೋವಿ ಸಹಿತ ರಾಜೇಶ್ ರೈ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪೊಲೀಸರು ಅಲರ್ಟ್, ಬೈಕ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6.5 ಕೆ.ಜಿ ಚಿನ್ನ ವಶ

ಬೆಂಗಳೂರು: ಪತ್ನಿ, ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ

ಬೆಂಗಳೂರು: ಪತ್ನಿ, ಇಬ್ಬರು ಪುತ್ರಿಯರಿಗೆ ವಿಷವುಣಿಸಿ ಪತಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಕೋಣನಕುಂಟೆಯ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯ ಮನೆಯೊಂದರಲ್ಲಿ ನಡೆದಿದೆ. ಪತ್ನಿ ವಿಜಯಾ(28), ಪುತ್ರಿಯರಾದ ನಿಶಾ(7), ದೀಕ್ಷಾ(5) ಮೃತ ದುರ್ದೈವಿಗಳು. ಪತಿ ನಾಗೇಂದ್ರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದಲ್ಲಿ ವಿಷವುಣಿಸಿ ಹತ್ಯೆ ಶಂಕೆ ವ್ಯಕ್ತವಾಗಿದೆ. ಇನ್ನು ಪತಿ ನಾಗೇಂದ್ರ ಕ್ಯಾನ್ಸರ್​ನಿಂದ ಬಳತ್ತಿದ್ದು, ಬ್ಲೇಡ್​ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಬೆಂಗಳೂರಿನಲ್ಲಿ ಬಾರ್​​ ಕ್ಯಾಶಿಯರ್ ಹತ್ಯೆ, ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನ

2014ರಲ್ಲಿ ದಂಪತಿ ಮದುವೆಯಾಗಿದ್ದರು. ನಾಗೇಂದ್ರನಿಗೆ ವಿಪರೀತ ಕುಡಿದ ಚಟ ಇತ್ತು. ಪತ್ನಿ ವಿಜಯ ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದರು. ವಿಜಯ ಆರ್ಥಿಕವಾಗಿ ಕುಟುಂಬಕ್ಕೆ ಆಧಾರವಾಗಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕಿಮ್ಸ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!