ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಇಡೀ ಭಾರತದಾದ್ಯಂತ ನಡೆಯುತ್ತಿದ್ದು ಆಯಾ ರಾಜ್ಯಗಳ ಪ್ರತ್ಯೇಕ ಅಧಿಸೂಚನೆ ಪ್ರಕಟಿಸಿದೆ, ವಿದ್ಯಾರ್ಹತೆ ವಯೋಮಿತಿ,ವೇತನಶ್ರೇಣಿ, ಮುಂತಾದ ಮಾಹಿತಿ ಈ ಕೆಳಗೆ ಕೊಡಲಾಗಿದೆ, ಅಭ್ಯರ್ಥಿಗಳು ಒಮ್ಮೆ ಅಧಿಸೂಚನೆಯನ್ನು ಓದಿ ನಂತರ ಅರ್ಜಿ ಸಲ್ಲಿಸಿ
ESIC recruitment 2022 – Apply Online for 3293 Clerk (UDC), Steno & MTS Posts
ಹುದ್ದೆಗಳು: ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್, ಮಲ್ಟಿ ಟಾಸ್ಕಿಂ ಗ್ ಸ್ಟಾಫ್
ಉದ್ಯೋಗ ಸ್ಥಳ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಒಟ್ಟು ಹುದ್ದೆಗಳ ಸಂಖ್ಯೆ: 3293 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರಲ್ಲಿ ಕರ್ನಾಟಕದಲ್ಲಿ ಒಟ್ಟು 282 ಹುದ್ದೆಗಳು ಖಾಲಿ ಇದೆ.
ಅಪ್ಪರ್ ಡಿವಿಷನ್ ಕ್ಲರ್ಕ್
199 ಹುದ್ದೆಗಳು
ವಯೋಮಿತಿ: 18-27 ವರ್ಷ
ಸ್ಟೆನೋಗ್ರಾಫರ್
ಹುದ್ದೆಗಳು: 18
ವಯೋಮಿತಿ: 18-27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್
ಹುದ್ದೆಗಳು: 65
ವಯೋಮಿತಿ: 18-25 ವರ್ಷ
ವಯೋಮಿತಿ ಸಡಿಲಿಕೆ : ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ:
1 ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.
2 ಸ್ಟೆನೋಗ್ರಾಫರ್ ಹುದ್ದೆಗೆ ದ್ವಿತೀಯ ಪಿಯುಸಿ ಜೊತೆಗೆ ಟೈಪಿಂಗ್ ಜ್ಞಾನ ಹೊಂದಿರಬೇಕು.
3 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 10ನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವೇತನ ಶ್ರೇಣಿ: ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್ ಹುದ್ದೆಗೆ ಮಾಸಿಕ ರೂ. 25,500 ರಿಂದ 81,100 ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಮಾಸಿಕ ರೂ. 18,000 ರಿಂದ 56,900 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ : ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ, ಕಂಪ್ಯೂಟರ್ ಸ್ಕಿಲ್ ಟೆಸ್ಟ್ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
3000 ಸರ್ವೇಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು
ಅರ್ಜಿ ಶುಲ್ಕ:
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ, ಮಹಿಳಾ, ಮಾಜಿ ಅಭ್ಯರ್ಥಿಗಳು ರೂ. 250
• ಉಳಿದ ಅಭ್ಯರ್ಥಿಗಳು ರೂ. 500
ಶುಲ್ಕ ಪಾವತಿ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 15, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 15, 2022
Website
Download Notification PDF
Application Form
ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ 3293 ಹುದ್ದೆಗಳ ಬೃಹತ್ ನೇಮಕಾತಿ 2022 : ESIC Recruitment 2022