<~>~<~>♥️ ನೆನಪುಗಳು ♥️<~>~<~>
ಅಂದು ನೀ ಬಂದ ದಾರಿಯಲಿ ಮಂಕಾಗಿ ಕೂತಿವೆ ಹಕ್ಕಿಗಳು
ಹಸಿರಾಗಿ ಮೆರೆದ ಮರಗಿಡಗಳು ಬಾಡಿ ಒಣಗಿವೆ
ಜೊತೆಯಾಗಿ ಕೈ ಹಿಡಿದು ನೆಡೆದ ದಾರಿಯಲಿ ಹೆಜ್ಜೆ ಗುರುತಿವೆ
ಇಲ್ಲಿ ಒಬ್ಬೊಂಟಿಯಾಗಿ ಬಿಟ್ಟು ನೀ ಇಂದು ಎಲ್ಲಿರುವೆ
ನೀ ಕೊಟ್ಟ ಮೊದಲ ಚ್ಚುಂಬನವು ನನ್ನ ಜಗವ ಮರೆಸಿದೆ
ನೀ ನಿಟ್ಟ ಹಣೆಯ ತಿಲಕದ ಸ್ಪರ್ಶವು ನೆನೆಸುತ್ತಿದೆ
ನೀ ನೀಡಿದ ಉಡುಗೊರೆ ನನ್ನೆದುರು ಕಾಡುತಿದೆ
ನೀ ಕೂತ ಜಾಗವೂ ನನ್ನ ಸಾವಿನ ಬಾಗಿಲಿಗೆ ಕರೆದೋಗಿದೆ
ಕಣ್ಣು ಮುಚ್ಚಿದರು ಕನಸ ಕಂಡರು ನಾ ನಿನ್ನ ಕಾಣುವೆ
ಹಳೆಯ ನೆನಪೆಲ್ಲವೂ ಮರೆತರು ಕಣ್ಣ ಮುಂದೆ ಬಂದು ಕಾಡುತಿವೆ
ಬಿಸಿಲ ಬೇಗೆಯಲಿ ಅಲೆದರು ಬೆಂದರು ನೊಂದರು ನೀನೆ ನೆನಪಾಗುತಿರುವೆ
ಮೊಡವೆ ಇಲ್ಲದೆ ನನ್ನ ಹೃದಯದಲಿ ಮಳೆಯ ಹನಿಗಳು ಬೀಳುತಿವೆ
ತುಂಭಾ ದಿನಗಳ ನಂತರ ನನ್ನ ಬಳಿ ಬಂದಾಗ ಮಾತೆ ಮರೆತೋಗಿದೆ
ನಿನ್ನ ಕಂಡ ಮರು ಕ್ಷಣವೆ ಎದೆಯ ಬಡಿತ ಒಂದು ಕ್ಷಣ ನಿಂತೋಗಿದೆ
ನಿನ್ನ ಧ್ವನಿಯ ಕೇಳಿದಾಗ ಜಗತ್ತೇ ತಲೆಯ ಮೇಲೆ ಬಿದ್ದಾಗಾಗಿದೆ
ನಿನ್ನ ಆ ನೋಟ ಧಗ ಧಗನೆ ಉರಿವ ಬೆಂಕಿಯಂತೆ ಸುಡುತಿದೆ
ಕೋನೆಯ ಆಸೆ ಒಂದಿದೆ ನಿನ್ನ ತೊಳಲಿ ನಾ ಜೀವ ಬಿಡುವಾಸೆ ಗೆಳತಿ
♥️♥️♥️♥️♥️♥️♥️♥️