ಇಂದು ರಾಮಮಗರ ಜಿಲ್ಲೆಯ ರಾಯಸಂದ್ರ ಬಳಿ ನಿರ್ಮಿಸಲಾಗುತ್ತಿರುವ ರಾಷ್ಟ್ರಕವಿ ಸಂಯುಕ್ತ ಬಡಾವಣೆಯ ಪ್ರವೇಶ ದ್ವಾರವನ್ನು ಸಂಸದ ಡಿಕೆ ಸುರೇಶ್ ಜೊತೆಗೂಡಿ ಉದ್ಘಾಟಿಸಿದ ಸಚಿವ ವಿ ಸೋಮಣ್ಣ ಡಿಕೆ ಶಿವಕುಮಾರ್ ಕುಟುಂಬದ ಬಗ್ಗೆ ಬಹಳ ಅಭಿಮಾನದಿಂದ ಮಾತಾಡಿದರು.
ರಾಮನಗರ: ವಸತಿ ಇಲಾಖೆ ಸಚಿವ ವಿ ಸೋಮಣ್ಣ ಮತ್ತು ಡಿಕೆ ಶಿವಕುಮಾರ್ ನಡುವಿನ ಸ್ನೇಹ ದಿನದಿಂದ ಗಾಢವಾಗುತ್ತಾ ಸಾಗಿದೆ ಅದರೆ ಸಚಿವರು ಮಾತ್ರ ಕಾಂಗ್ರೆಸ್ ಪಕ್ಷ ಸೇರುವ ವದಂತಿಯ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಇಂದು ರಾಮಮಗರ ಜಿಲ್ಲೆಯ ರಾಯಸಂದ್ರ ಬಳಿ ನಿರ್ಮಿಸಲಾಗುತ್ತಿರುವ ರಾಷ್ಟ್ರಕವಿ ಸಂಯುಕ್ತ ಬಡಾವಣೆಯ ಪ್ರವೇಶ ದ್ವಾರವನ್ನು ಸಂಸದ ಡಿಕೆ ಸುರೇಶ್ ಜೊತೆಗೂಡಿ ಉದ್ಘಾಟಿಸಿದ ಸಚಿವರು ಶಿವಕುಮಾರ್ ಕುಟುಂಬದ ಬಗ್ಗೆ ಬಹಳ ಅಭಿಮಾನದಿಂದ ಮಾತಾಡಿದರು. ಅವರ ಉದ್ದೇಶ ಅರ್ಥಮಾಡಿಕೊಳ್ಳವುದು ಮಾತ್ರ ಮಾಧ್ಯಮಗಳಿಗೆ ಸಾಧ್ಯವಾಗುತ್ತಿಲ್ಲ. ನಿನ್ನೆ ಅವರು, ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಅಂತ ಯಾವತ್ತೂ ಹೇಳಿಲ್ಲ ಎಂದು ಹೇಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ