1.8 C
Munich
Thursday, March 2, 2023

More than 600 movies available on Book My Show Stream: New release titles announced | Book My Show Stream: ‘ಬುಕ್​ ಮೈ ಶೋ ಸ್ಟ್ರೀಂ’ ಮೂಲಕ ಲಭ್ಯವಾಗಿವೆ ನೂರಾರು ಸಿನಿಮಾ; ವೀಕ್ಷಿಸೋದು ಹೇಗೆ?

ಓದಲೇಬೇಕು

Book My Show | OTT: 600ಕ್ಕೂ ಅಧಿಕ ಸಿನಿಮಾಗಳು ‘ಬುಕ್​ ಮೈ ಶೋ ಸ್ಟ್ರೀಂ’ನಲ್ಲಿ ಲಭ್ಯವಾಗುತ್ತಿವೆ. ಹಾಲಿವುಡ್​, ಬಾಲಿವುಡ್​ ಸೇರಿದಂತೆ ಅನೇಕ ಭಾಷೆಯ ಚಿತ್ರರಂಗಗಳ ಹಲವು ನಿರ್ಮಾಣ ಸಂಸ್ಥೆಗಳ ಜೊತೆ ಕೈ ಜೋಡಿಸಲಾಗಿದೆ.

‘ಎ ಮ್ಯಾನ್​ ಕಾಲ್ಡ್​ ಒಟ್ಟೋ’ ಮತ್ತು ‘ವೈಯ್ಲೆಂಟ್​ ನೈಟ್​’ ಪೋಸ್ಟರ್​

ಯಾವುದೇ ಸಿನಿಮಾ, ನಾಟಕ ಅಥವಾ ಇನ್ನಿತರ ಕಾರ್ಯಕ್ರಮಗಳ ಟಿಕೆಟ್​ ಬುಕ್​ ಮಾಡಲು ‘ಬುಕ್​ ಮೈ ಶೋ’ (Book My Show) ಬಳಸಲಾಗುತ್ತದೆ. ಇದಕ್ಕಾಗಿ ಬೇರೆ ಆ್ಯಪ್​ಗಳು ಇವೆಯಾದರೂ ಹೆಚ್ಚು ಫೇಮಸ್​ ಆಗಿರುವುದು ‘ಬುಕ್​ ಮೈ ಶೋ’. ಇದರ ಮೂಲಕ ಬರೀ ಟಿಕೆಟ್​ ಬುಕ್​ ಮಾಡೋದು ಮಾತ್ರವಲ್ಲದೇ ಸಿನಿಮಾಗಳನ್ನೂ ನೋಡಬಹುದು. ಹಾಲಿವುಡ್​ನಿಂದ (Hollywood) ಪ್ರಾದೇಶಿಕ ಭಾಷೆಯ ಸಿನಿಮಾಗಳ ತನಕ ಹಲವು ಚಿತ್ರಗಳನ್ನು ಇದರಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇನ್ನೂ ಅನೇಕ ಹೊಸ ಹೊಸ ಸಿನಿಮಾಗಳು ‘ಬುಕ್​ ಮೈ ಶೋ ಸ್ಟ್ರೀಂ’ನಲ್ಲಿ (Book My Show Stream) ಬರಲಿವೆ. ಆದರೆ ಇವು ಸಂಪೂರ್ಣ ಉಚಿತವಲ್ಲ. 30 ದಿನಗಳ ತನಕ ಬಾಡಿಗೆಗೆ ಪಡೆಯಬಹುದು ಅಥವಾ 6 ತಿಂಗಳವರೆಗೆ ಖರೀದಿಸಬಹುದು.

‘ಬುಕ್​ ಮೈ ಶೋ ಸ್ಟ್ರೀಂ’ನಲ್ಲಿ ಲಭ್ಯವಿರುವ ಸಿನಿಮಾಗಳನ್ನು ಬಾಡಿಗೆಗೆ ಪಡೆಯಲು ವಿವಿಧ ದರಗಳನ್ನು ನಿಗದಿ ಮಾಡಲಾಗಿದೆ. ಆಯಾ ಸಿನಿಮಾಗಳಿಗೆ ಇರುವ ಬೇಡಿಕೆಯ ಆಧಾರದ ಮೇಲೆ 40 ರೂಪಾಯಿಯಿಂದ 600 ರೂಪಾಯಿಗಳವರೆಗೆ ದರ ನಿಗದಿ ಮಾಡಲಾಗಿದೆ. ಬಾಡಿಗೆಗೆ ಪಡೆದ ಸಿನಿಮಾವನ್ನು 48 ಗಂಟೆಗಳ ಒಳಗೆ ವೀಕ್ಷಿಸಬೇಕು. ಖರೀದಿಸಿದ ಸಿನಿಮಾಗಳ ವ್ಯಾಲಿಡಿಟಿ ಆರು ತಿಂಗಳು ಮತ್ತು ಅದಕ್ಕಿಂತಲೂ ಅಧಿಕವಾಗಿರುತ್ತದೆ.

ಇದನ್ನೂ ಓದಿ: Vedha: ಒಟಿಟಿಯಲ್ಲಿಯೂ ವೇದನದ್ದೇ ಅಬ್ಬರ, 125 ಮಿಲಿಯನ್ ನಿಮಿಷಗಳ ವೀಕ್ಷಣೆ

ಇದನ್ನೂ ಓದಿ



2021ರಲ್ಲಿ ‘ಬುಕ್​ ಮೈ ಶೋ ಸ್ಟ್ರೀಂ’ ಸೇವೆ ಆರಂಭ ಆಯಿತು. 600ಕ್ಕೂ ಅಧಿಕ ಸಿನಿಮಾಗಳು ಇದರಲ್ಲೀಗ ಲಭ್ಯವಾಗುತ್ತಿವೆ. ಹಾಲಿವುಡ್​, ಬಾಲಿವುಡ್​ ಸೇರಿದಂತೆ ಅನೇಕ ಭಾಷೆಯ ಚಿತ್ರರಂಗಗಳ ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಜೊತೆಗೆ ‘ಬುಕ್​ ಮೈ ಶೋ ಸ್ಟ್ರೀಂ’ ಸಹಯೋಗ ಹೊಂದಿದೆ. ಆ ಮೂಲಕ ಹೆಚ್ಚಿನ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: OTT Movies This Week: ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ

ಅಮೆರಿಕದ ಸೋನಿ ಪಿಕ್ಚರ್ಸ್​, ವಾರ್ನರ್​ ಬ್ರದರ್ಸ್​, ಯೂನಿವರ್ಸಲ್​ ಪಿಕ್ಚರ್ಸ್​ ಸೇರಿದಂತೆ ಹಲವು ಕಂಪನಿಗಳು ‘ಬುಕ್​ ಮೈ ಶೋ ಸ್ಟ್ರೀಂ’ ಜೊತೆ ಕೈ ಜೋಡಿಸಿವೆ. ಭಾರತದ ವಯಾಕಾಂ 18, ಶೆಮರೋ, ರಾಜ್​ಶ್ರೀ ಪ್ರೊಡಕ್ಷನ್ಸ್​ ಮುಂತಾದ ಪ್ರೊಡಕ್ಷನ್​ ಹೌಸ್​ ಜೊತೆ ಕೂಡ ಸಹಯೋಗ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Mute Movie: ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಹೊಸ ಸಿನಿಮಾ ಒಟಿಟಿಯಲ್ಲಿ

‘ಬುಕ್​ ಮೈ ಶೋ’ ಮೊಬೈಲ್​ ಆ್ಯಪ್​, ಆಪಲ್​ ಟಿವಿ, ಆಂಡ್ರಾಯ್ಡ್​ ಟಿವಿ, ‘ಬುಕ್​ ಮೈ ಶೋ’ ವೆಬ್​ಸೈಟ್​, ಫೈರ್​ಸ್ಟಿಕ್​, ಕ್ರೋಮ್​ಕಾಸ್ಟ್​ ಮುಂತಾದ ಕಡೆಗಳಲ್ಲಿ ‘ಬುಕ್​ ಮೈ ಶೋ ಸ್ಟ್ರೀಂ’ ಸರ್ವೀಸ್​ ಲಭ್ಯವಿದೆ. ‘ಎ ಮ್ಯಾನ್​ ಕಾಲ್ಡ್​ ಒಟ್ಟೊ’, ‘ದಿ ವುಮನ್​ ಕಿಲ್ಲರ್​’, ‘ವೈಯ್ಲೆಂಟ್​ ನೈಟ್​’ ಮುಂತಾದ ಚಿತ್ರಗಳು ಶೀಘ್ರದಲ್ಲೇ ವೀಕ್ಷಣೆಗೆ ಲಭ್ಯವಾಗಲಿವೆ. ಇವುಗಳ ಜೊತೆಗೆ ಒರಿಜಿನಲ್​​ ಸಿನಿಮಾಗಳ ನಿರ್ಮಾಣದಲ್ಲೂ ‘ಬುಕ್​ ಮೈ ಶೋ ಸ್ಟ್ರೀಂ’ ತೊಡಗಿಕೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!