ಸಂಜೆ 4.52 ರ ಸುಮಾರಿಗೆ ಆನಂದ್ ನಗರದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಮೊದಲ ಕರೆಯನ್ನು ಸ್ವೀಕರಿಸಿದರು, ಇದನ್ನು ಬೃಹನ್‌ಮುಂಬೈ ಮುನಿಪಿಕಲ್ ಕಾರ್ಪೊರೇಷನ್ (ಬಿಎಂಸಿ) ಹಂತ 1 ಎಂದು ಘೋಷಿಸಿತು.
ಮುಂಬೈನ ಮಲಾಡ್ ಪೂರ್ವದ (Malad East)ಕೊಳೆಗೇರಿ (Slum) ಪ್ರದೇಶದಲ್ಲಿ ಎರಡು ಪ್ರಮುಖ ಬೆಂಕಿ ಕಾಣಿಸಿಕೊಂಡಿದ್ದು, ಒಂದನ್ನು ಹಂತ-3 ಎಂದು ಘೋಷಿಸಲಾಗಿದೆ. ಮಲಾಡ್ ಪೂರ್ವದ ಆನಂದ್ ನಗರ ಮತ್ತು ಅಪ್ಪಾಪಾಡಾ ಪ್ರದೇಶಗಳಿಂದ ಹೊಗೆ ಬರುತ್ತಿರುವ ವಿಡಿಯೊಗಳನ್ನು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಸಂಜೆ 4.52 ರ ಸುಮಾರಿಗೆ ಆನಂದ್ ನಗರದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಮೊದಲ ಕರೆಯನ್ನು ಸ್ವೀಕರಿಸಿದರು, ಇದನ್ನು ಬೃಹನ್‌ಮುಂಬೈ ಮುನಿಪಿಕಲ್ ಕಾರ್ಪೊರೇಷನ್ (BMC) ಹಂತ 1 ಎಂದು ಘೋಷಿಸಿತ್ತು. ನಂತರ ಅದನ್ನು 2 ನೇ ಹಂತಕ್ಕೆ ಎಂದು ಹೇಳಿದೆ.
Major fire broke out at Malad East! 400097 and can hear some explosions as well! @MumbaiPolice @mumbaifireserve pic.twitter.com/16cifIXijV
— Junita Bhatia (@junitab) March 13, 2023
ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿ ಆಗಿಲ್ಲ.
ಇದಕ್ಕಿಂತ ಮುಂಚೆ ಜೋಗೇಶ್ವರಿ (ಪಶ್ಚಿಮ) ದ ರಿಲೀಫ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಎದುರು ಘಾಸ್ ಕಾಂಪೌಂಡ್‌ನಲ್ಲಿರುವ ಪೀಠೋಪಕರಣಗಳ ಗೋಡೌನ್‌ನಲ್ಲಿ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು.ಜೋಗೇಶ್ವರಿಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿವೆ.
ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, 3 ನೇ ಹಂತದ ಬೆಂಕಿ ಬೆಳಿಗ್ಗೆ 11.21 ಕ್ಕೆ ವರದಿಯಾಗಿದೆ.
“ಫರ್ನಿಚರ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ” ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ