~ ನನ್ನ ಸಂಗಾತಿ ~
ನನ್ನ ನಂಬಿ ಅಷ್ಟೋಂದು ದೂರದಿಂದ ಬಂದಿರುವ ನಿನಗೆ ನಾ ಋಣಿಯಾಗಿರುವೆ
ನಿನ್ನ ಸಾಗರದಷ್ಟು ಪ್ರೀತಿಯ ನಂಬಿಕೆಗೆ ನಾ ಕೊನೆವರೆಗೂ ಗುಲಾಮನಾಗಿರುವೆ
ನನ್ನ ಬಾಳ ದೀಪಾ ಬೆಳಗಲು ಬಂದ ಬಂಗಾರದ ಜ್ಯೋತಿ ನಿನಾಗಿರುವೆ
ಕನಸಲು ಕನವರಿಸುವಂತ ಮುದ್ದಾದ ಮನಸ್ಸು ಹೊತ್ತು ನನಗಾಗಿ ಬಂದಿರುವೆ
ನಿನ್ನ ಮಾತುಗಳು ಕಿವಿಯಲಿ ಹಕ್ಕಿಗಳ ಚಿಲಿ ಪಿಲಿ ಸದ್ದಿನಂತೆ ಕೇಳುತಿದೆ
ನೀ ಗೆಜ್ಜೆಯ ಸದ್ದಲಿ ನಡೆದು ಬಂದರೆ ನನ್ನ ಎದೆಯ ಬಡಿತ ಜೋರಾಗುತಿದೆ
ಬಳಿಬಂದಾಗ ನೀ ನಾಚಿ ತಿರುಗಿ ವಾರೆ ಕಣ್ಣೋಟ ನನ್ನ ಬಳಿ ಬರುವಂತೆ ಬಯಸುತಿದೆ
ಹೇಳಲಾಗುತ್ತಿಲ್ಲಾ ತೋರಿಕೊಳ್ಳಲಾಗುತ್ತಿಲ್ಲಾ ನನ್ನ ಮನದ ವೇದನೆಯ ಕಾಡುತಿದೆ
ಮಲೆನಾಡ ಅಚ್ಚ ಹಸಿರ ಸೀರಿಯ ಹುಟ್ಟು ಬಂದವಳೆ
ಹಣೆಗೆ ಕುಂಕುದ ಸಿಂದೂರವನ್ನಿಟ್ಟು ಕೆನ್ನೆಗೆ ಹರಿಶಿನವ ತೊಟ್ಟು ಕಂಡವಳೆ
ಕಣ್ಣಿಗೆ ಕಾಡಿಗೆಯನ್ನಿಟ್ಟು, ಮೂಗಿಗೆ ಮೂಗುತ್ತಿಯಿಟ್ಟವಳೆ
ಬೆಳ್ಳಿ ಕಾಲುಂಗುರ ತೊಟ್ಟು, ಪಾದದ ಅಂಚಲಿ ಮದರಂಗಿ ಇಟ್ಟವಳೆ
ನನ್ನ ನವ ಜೀವನದ ಪ್ರತಿ ಹೆಜ್ಜೆ ಹೆಜ್ಜೆಗೂ ಹೊಳೆಯೊ ನಕ್ಷತ್ರ ನೀ
ನನ್ನ ಉಸಿರಲಿ ಹೆಸರಾಗಿ ಬಾಳಬೆಳಗೊ ಭಾಗ್ಯ ದೇವತೆ ನೀ
ನನ್ನ ಕುಲದ ವಂಶವ ಬೆಳಗಲು ಬಂದಿರುವ ಕುಲ ದೇವತೆ ನೀ
ಜೊತೆ ಜೊತೆಯಲ್ಲೇ ಬಂದು ನೆರಳಾಗಿ ಬರುವ ಮನೆ ದೇವತೆ ನೀ ನನ್ನ ಸಂಗಾತಿ
~I £ÔVÊ~~~¥ÔÜ & A££..,
ನನ್ನ ಸಂಗಾತಿ : ವಾರದ ಕವಿತೆ ಪ್ರಜಾ ನ್ಯೂಸ್ ಜೊತೆ