2.2 C
Munich
Wednesday, March 15, 2023

Nani and Keerthy Suresh starrer Dasara movie trailer released: This Pan India film to hit the screen on 30th March | Dasara Movie: ‘ದಸರಾ’ ಟ್ರೇಲರ್​ನಲ್ಲಿ ರಕ್ತಸಿಕ್ತ ಕಹಾನಿಯ ಝಲಕ್​; ಮಾಸ್​ ಆಗಿ ಅಬ್ಬರಿಸಿದ ನಾನಿ

ಓದಲೇಬೇಕು

Nani | Dasara Movie Trailer: ‘ದಸರಾ’ ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಮಾರ್ಚ್​ 30ರಂದು ಈ ಸಿನಿಮಾ ತೆರೆಕಾಣಲಿದೆ. ನಾನಿ ಅಭಿಮಾನಿಗಳು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಟಾಲಿವುಡ್​ ನಟ ನಾನಿ (Nani) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಸರಾ’ ಬಿಡುಗಡೆಗೆ ಸಿದ್ಧವಾಗಿದೆ. ಇಂದು (ಮಾರ್ಚ್​ 14) ಈ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಈಗಾಗಲೇ ಟೀಸರ್​ ಮೂಲಕ ಗಮನ ಸೆಳೆದಿದ್ದ ಈ ಚಿತ್ರವು ಟ್ರೇಲರ್​ ಮೂಲಕ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ‘ದಸರಾ’ (Dasara Movie) ಚಿತ್ರವನ್ನು ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಮೂಲಕ ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬಂದಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ (Keerthy Suresh) ಅವರು ನಾನಿಗೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದಾರೆ. ‘ದಸರಾ’ ಸಿನಿಮಾದ ಮಾಸ್​ ಟ್ರೇಲರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ರಕ್ತಸಿಕ್ತವಾದ ಕಹಾನಿ ಇದೆ. ಟ್ರೇಲರ್​ನಲ್ಲಿ ಅದರ ಝಲಕ್​ ಕಾಣಿಸಿದೆ.

‘ದಸರಾ’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಕನ್ನಡದ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಸತ್ಯನ್ ಸೂರ್ಯನ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್​; ನಾನಿ ರಗಡ್​ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ

ಇದನ್ನೂ ಓದಿಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಕನ್ನಡ ಮುಂತಾದ ಭಾಷೆಯಲ್ಲಿ ‘ದಸರಾ’ ರಿಲೀಸ್​ ಆಗಲಿದೆ. ಎಲ್ಲ ಭಾಷೆಯಲ್ಲಿಯೂ ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಮಾರ್ಚ್​ 30ರಂದು ಅದ್ದೂರಿಯಾಗಿ ಈ ಸಿನಿಮಾ ತೆರೆಕಾಣಲಿದೆ. ನಾನಿ ಅಭಿಮಾನಿಗಳು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ‘ದಸರಾ’ ಟೀಸರ್​ ಝಲಕ್​ ತೋರಿಸ್ತಾರೆ ರಕ್ಷಿತ್​ ಶೆಟ್ಟಿ; ನಾನಿ ಚಿತ್ರಕ್ಕೆ ಸ್ಟಾರ್​ ನಟರ ಸಾಥ್​

‘ದಸರಾ’ ಚಿತ್ರದಲ್ಲಿ ನಾನಿ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ರಫ್​ ಆ್ಯಂಡ್​ ಟಫ್​ ಪಾತ್ರದಲ್ಲಿ ಕಮಾಲ್​ ಮಾಡಲು ಅವರು ಬರುತ್ತಿದ್ದಾರೆ. ಧರಣಿ ಎಂಬ ಆ ಪಾತ್ರ ಹೇಗಿರಲಿದೆ ಎಂಬುದು ಟ್ರೇಲರ್​ನಲ್ಲಿ ಈಗಾಗಲೇ ಗೊತ್ತಾಗಿದೆ. ಮೈ ನವಿರೇಳಿಸುವಂತಹ ಫೈಟಿಂಗ್​ ದೃಶ್ಯಗಳು ಈ ಸಿನಿಮಾದಲ್ಲಿವೆ. ಮಚ್ಚು, ಕೊಡಲಿ ಮುಂತಾದ ಆಯುಧಗಳು ಸದ್ದು ಮಾಡಲಿವೆ.

ತೆಲಂಗಾಣದಲ್ಲಿನ ಕಲ್ಲಿದ್ದಲು ಗಣಿಗೆ ಸಂಬಂಧಿಸಿದ ಕಥೆ ‘ದಸರಾ’ ಸಿನಿಮಾದಲ್ಲಿ ಇದೆ. ಕಲಿದ್ದಲು ಸಾಗಿಸುತ್ತಿರುವ ರೈಲಿನ ಮೇಲೆ ನಾನಿ ಹೊಡೆದಾಡುತ್ತಿರುವ ದೃಶ್ಯ ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಆ್ಯಕ್ಷನ್ ದೃಶ್ಯಗಳ ಝಲಕ್​ ನೋಡಿ ನಾನಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇನ್ನು, ನಟಿ ಕೀರ್ತಿ ಸುರೇಶ್​ ಪಾತ್ರದ ಲುಕ್​ ಕೂಡ ಸಾಕಷ್ಟು ಕೌತುಕ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!