3.9 C
Munich
Wednesday, March 29, 2023

Taj Divider by Blood actor Naseeruddin Shah talks about Mughals contribution to India | Naseeruddin Shah: ‘ಮೊಘಲರು ಲೂಟಿ ಮಾಡಲು ಬಂದವರಲ್ಲ, ಭಾರತಕ್ಕೆ ಅವರ ಕೊಡುಗೆಯೂ ಇದೆ’: ನಸೀರುದ್ದೀನ್​ ಷಾ

ಓದಲೇಬೇಕು

Taj Divider by Blood | Mughals: ‘ತಾಜ್​: ಡಿವೈಡೆಡ್​​ ಬೈ ಬ್ಲಡ್​’ ವೆಬ್​ ಸರಣಿಯಲ್ಲಿ ನಸೀರುದ್ದೀನ್​ ಷಾ ಅವರು ಅಕ್ಬರ್​ನ ಪಾತ್ರವನ್ನು ಮಾಡಿದ್ದಾರೆ. ‘ಜೀ5’ ಮೂಲಕ ಮಾರ್ಚ್​ 3ರಿಂದ ಈ ವೆಬ್​ ಸರಣಿ ವೀಕ್ಷಣೆಗೆ ಲಭ್ಯವಾಗಲಿದೆ.

ನಸೀರುದ್ದೀನ್ ಷಾ

ನಟ ನಸೀರುದ್ದೀನ್​ ಷಾ (Naseeruddin Shah) ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಲ್ಲಿ ಎಂದಿಗೂ ಹಿಂದೇಟು ಹಾಕಿಲ್ಲ. ಅವರ ಹೇಳಿಕೆಗಳಿಂದ ಕೆಲವೊಮ್ಮೆ ವಿವಾದ ಆಗಿದ್ದು ಕೂಡ ಉಂಟು. ಈಗ ಅವರು ಮೊಘಲರ (Mughals) ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಭಾರತದ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಮುಸ್ಲಿಂ ದೊರೆಗಳ ಬಗ್ಗೆ ಈ ದಿನಗಳಲ್ಲಿ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ನಸೀರುದ್ದೀನ್​ ಷಾ ಅವರು ಮಾತನಾಡಿದ್ದಾರೆ. ಜನರು ಇಂದು ಅಕ್ಬರ್​ ಮತ್ತು ಬೇರೆ ದಂಡುಕೋರರ ನಡುವಿನ ವ್ಯತ್ಯಾಸವನ್ನು ಗುರುತಿಸದಂತಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ‘ತಾಜ್​: ಡಿವೈಡೆಡ್​ ಬೈ ಬ್ಲಡ್​’ (Taj Divider by Blood) ವೆಬ್​ ಸಿರೀಸ್​ನಲ್ಲಿ ಅವರು ನಟಿಸಿದ್ದಾರೆ. ಈ ಕುರಿತು ಇಂಡಿಯನ್​ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ನಾದಿರ್​ ಷಾ, ತೈಮೂರ್​ ಮುಂತಾದವರು ಭಾರತವನ್ನು ಲೂಟಿ ಮಾಡಲು ಬಂದರು. ಆದರೆ ಮೊಘಲರು ಲೂಟಿ ಮಾಡಲು ಬರಲಿಲ್ಲ. ಈ ನೆಲವನ್ನು ತಮ್ಮ ಮನೆಯಾಗಿಸಿಕೊಳ್ಳಲು ಮೊಘಲರು ಬಂದರು. ಅದನ್ನೇ ಅವರು ಮಾಡಿದ್ದು. ಅವರ ಕೊಡುಗೆಯನ್ನು ಯಾರು ತೆಗೆದುಹಾಕಲು ಸಾಧ್ಯ?’ ಎಂದು ನಸೀರುದ್ದೀನ್​ ಷಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​

ಇದನ್ನೂ ಓದಿ



‘ಜನರು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ನಿಜ. ನಮ್ಮ ಸಂಪ್ರದಾಯಗಳ ಬದಲಿಗೆ ಮೊಘಲರನ್ನು ವೈಭವೀಕರಿಸಲಾಗಿದೆ. ಹಾಗಂತ ಅವರನ್ನು ಖಳರನ್ನಾಗಿ ಮಾಡುವ ಅಗತ್ಯವಿಲ್ಲ. ಅವರು ಮಾಡಿರುವುದೆಲ್ಲ ಭಯಾನಕವೇ ಆಗಿರುವುದಾದರೆ ತಾಜ್​ ಮಹಲ್​, ಕೆಂಪು ಕೋಟೆ, ಕುತುಬ್​ ಮಿನಾರ್​ ಒಡೆದುಹಾಕಿ. ಮೊಘಲರು ಕಟ್ಟಿದ ಕೆಂಪು ಕೋಟೆಯನ್ನು ನಾವು ಪವಿತ್ರ ಅಂತ ಯಾಕೆ ಪರಿಗಣಿಸುತ್ತೇವೆ? ಅವರನ್ನು ವೈಭವೀಕರಿಸುವುದು ಬೇಡ. ಹಾಗೆಯೇ ಖಳರನ್ನಾಗಿಸುವ ಅಗತ್ಯವೂ ಇಲ್ಲ’ ಎಂಬುದು ನಸೀರುದ್ದೀನ್ ಶಾ ಅವರ ಅಭಿಪ್ರಾಯ.

ಇದನ್ನೂ ಓದಿ: ನಾಸಿರುದ್ದೀನ್​ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ

‘ತಾಜ್​: ಡಿವೈಡೆಡ್​​ ಬೈ ಬ್ಲಡ್​’ ವೆಬ್​ ಸರಣಿಯಲ್ಲಿ ನಸೀರುದ್ದೀನ್​ ಷಾ ಅವರು ಅಕ್ಬರ್​ನ ಪಾತ್ರವನ್ನು ಮಾಡಿದ್ದಾರೆ. ‘ಜೀ5’ ಮೂಲಕ ಮಾರ್ಚ್​ 3ರಿಂದ ಈ ವೆಬ್​ ಸರಣಿ ವೀಕ್ಷಣೆಗೆ ಲಭ್ಯವಾಗಲಿದೆ. ಮೂವರು ಮಕ್ಕಳ ಪೈಕಿ ತನ್ನ ಬಳಿಕ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ತೀರ್ಮಾನಿಸುವ ಸಮಯ ಬರುತ್ತದೆ. ವಯಸ್ಸಿನಲ್ಲಿ ಯಾರು ಹಿರಿಯರು ಎಂಬುದರ ಬದಲಿಗೆ ಸಾಮರ್ಥ್ಯದ ಆಧಾರದಲ್ಲಿ ಉತ್ತಾಧಿಕಾರಿಯನ್ನು ​ಆಯ್ಕೆ ಮಾಡಲು ಅಕ್ಬರ್​ ಮುಂದಾಗುತ್ತಾನೆ. ಆ ಕಥೆ ‘ತಾಜ್​: ಡಿವೈಡೆಡ್​ ಬೈ ಬ್ಲಡ್​​’ ವೆಬ್​ ಸೀರಿಸ್​ನಲ್ಲಿದೆ.

ನಸೀರುದ್ದೀನ್​ ಷಾ ಜೊತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಲೀಂ ಪಾತ್ರದಲ್ಲಿ ಆಶಿಮ್​ ಗುಲಾಟಿ, ಮುರಾದ್​ ಪಾತ್ರದಲ್ಲಿ ತಹಾ ಷಾ, ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್​ ಹೈದರಿ, ಜೋಧಾ ಬಾಯ್​ ಆಗಿ ಸಂಧ್ಯಾ ಮೃದುಲ್​ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!