7.5 C
Munich
Sunday, March 26, 2023

Natural Star Nani look from Dasara movie compared to Allu Arjun’s Pushpa character | Nani: ‘ಪುಷ್ಪ’ ಸಿನಿಮಾ ಕಾಪಿ ಮಾಡಿದ್ರಾ ನಾನಿ? ಟ್ರೇಲರ್​ ರಿಲೀಸ್​ ಆದ ಬಳಿಕ ಎದುರಾಯ್ತು ಅನುಮಾನ

ಓದಲೇಬೇಕು

Natural Star Nani | Dasara Movie: ‘ದಸರಾ’ ಸಿನಿಮಾದಲ್ಲಿ ನಾನಿ ನಿಭಾಯಿಸಿರುವ ಪಾತ್ರದ ಲುಕ್​ ರಗಡ್​ ಆಗಿದೆ. ಅದನ್ನು ನೋಡಿದ ಎಲ್ಲರಿಗೂ ಪುಷ್ಪ ಸಿನಿಮಾದ ಹೀರೋ ಪಾತ್ರವೇ ಕಣ್ಮುಂದೆ ಬಂದಂತೆ ಆಗಿದೆ.

ಅಲ್ಲು ಅರ್ಜುನ್, ನಾನಿ

‘ನ್ಯಾಚುರಲ್​ ಸ್ಟಾರ್​’ ನಾನಿ (Nani) ಅವರು ಮಾಸ್​ ಲುಕ್​ನಲ್ಲಿ ಅಭಿಮಾನಿಗಳ ಎದುರು ಬರಲು ಸಜ್ಜಾಗಿದ್ದಾರೆ. ಅವರ ನಟನೆಯ ‘ದಸರಾ’ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಮಾರ್ಚ್​ 30ರಂದು ಈ ಚಿತ್ರ ಅದ್ದೂರಿಯಾಗಿ ತೆರೆ ಕಾಣಲಿದೆ. ಮಂಗಳವಾರ (ಮಾ.14) ‘ದಸರಾ’ ಸಿನಿಮಾದ ಟ್ರೇಲರ್​ (Dasara Movie Trailer) ಬಿಡುಗಡೆ ಆಗಿದೆ. ಇದನ್ನು ನೋಡಿದ ಎಲ್ಲರಿಗೂ ‘ಪುಷ್ಪ’ ಸಿನಿಮಾ (Pushpa Movie) ನೆನಪಾಗಿದೆ. ಅದಕ್ಕೆ ಕಾರಣ ನಾನಿ ಅವರ ಲುಕ್​. ಸಖತ್ ಮಾಸ್​ ಆಗಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಪುಷ್ಪರಾಜ್​ ಪಾತ್ರಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಆ ಬಗ್ಗೆ ಬಾಲಿವುಡ್​ ಮೀಡಿಯಾಗಳು ಪ್ರಶ್ನೆ ಎತ್ತಿವೆ. ಅದಕ್ಕೆ ನಾನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ದಸರಾ’ ಸಿನಿಮಾದಲ್ಲಿ ನಾನಿ ಅವರು ನಿಭಾಯಿಸಿರುವ ಪಾತ್ರದ ಲುಕ್​ ರಗಡ್​ ಆಗಿದೆ. ಕಪ್ಪು ಮೈಬಣ್ಣ, ಗಡ್ಡ, ಲುಂಗಿ, ಬನಿಯನ್ ನೋಡಿದ ಎಲ್ಲರಿಗೂ ಪುಷ್ಪ ಸಿನಿಮಾದ ಹೀರೋ ಪಾತ್ರವೇ ಕಣ್ಮುಂದೆ ಬಂದಂತೆ ಆಗಿದೆ. ಆದರೆ ಈ ‘ಪುಷ್ಪ’ ಚಿತ್ರಕ್ಕೂ ‘ದಸರಾ’ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ ಎಂದು ನಾನಿ ಹೇಳಿದ್ದಾರೆ.

ಇದನ್ನೂ ಓದಿ: Dasara Movie: ‘ದಸರಾ’ ಟ್ರೇಲರ್​ನಲ್ಲಿ ರಕ್ತಸಿಕ್ತ ಕಹಾನಿಯ ಝಲಕ್​; ಮಾಸ್​ ಆಗಿ ಅಬ್ಬರಿಸಿದ ನಾನಿ

ಇದನ್ನೂ ಓದಿ‘ಹೇರ್​ ಸ್ಟೈಲ್​, ಲುಂಗಿ, ಬನಿಯನ್​ ಹೊರತುಪಡಿಸಿ ಬೇರೆ ಯಾವುದೇ ಅಂಶಗಳೂ ಪುಷ್ಪ ಚಿತ್ರಕ್ಕೆ ಹೋಲಿಕೆ ಆಗುವುದಿಲ್ಲ. ದಸರಾ ರಿಲೀಸ್​ ಆದ ಬಳಿಕ ಯಾರಾದರೂ ಇಂಥ ಹೇರ್​ ಸ್ಟೈಲ್​ ಮಾಡಿಕೊಂಡು ಲುಂಗಿ, ಬನಿಯನ್​ ಧರಿಸಿ ಕಾಣಿಸಿಕೊಂಡರೆ ನೀವು ಅದನ್ನು ದಸರಾ ಗೆಟಪ್​ ಎನ್ನುತ್ತೀರಿ’ ಎಂದು ನಾನಿ ಹೇಳಿದ್ದಾರೆ. ಈ ಸಿನಿಮಾ ಮೇಲೆ ಅವರಿಗೆ ಸಖತ್​ ಭರವಸೆ ಇದೆ.

ಇದನ್ನೂ ಓದಿ: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್​; ನಾನಿ ರಗಡ್​ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ

‘ದಸರಾ’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಕನ್ನಡದ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಸತ್ಯನ್ ಸೂರ್ಯನ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಕನ್ನಡ ಮುಂತಾದ ಭಾಷೆಯಲ್ಲಿ ‘ದಸರಾ’ ರಿಲೀಸ್​ ಆಗಲಿದೆ. ಎಲ್ಲ ಭಾಷೆಯಲ್ಲಿಯೂ ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ತೆಲಂಗಾಣದಲ್ಲಿನ ಕಲ್ಲಿದ್ದಲು ಗಣಿಗೆ ಸಂಬಂಧಿಸಿದ ಕಥೆ ‘ದಸರಾ’ ಸಿನಿಮಾದಲ್ಲಿ ಇದೆ. ಕಲಿದ್ದಲು ಸಾಗಿಸುತ್ತಿರುವ ರೈಲಿನ ಮೇಲೆ ನಾನಿ ಹೊಡೆದಾಡುತ್ತಿರುವ ದೃಶ್ಯ ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಆ್ಯಕ್ಷನ್ ದೃಶ್ಯಗಳ ಝಲಕ್​ ನೋಡಿ ನಾನಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!