7.4 C
Munich
Thursday, March 9, 2023

Nawazuddin Siddiqui wife Aaliya says actor’s manager hugged her daughter inappropriately | Nawazuddin Siddiqui: ‘ನನ್ನ ಅಪ್ರಾಪ್ತ ಮಗಳನ್ನು ನಿಮ್ಮ ಮ್ಯಾನೇಜರ್​ ಕೆಟ್ಟದಾಗಿ ತಬ್ಬಿಕೊಂಡ’: ಸ್ಟಾರ್​ ನಟನ ವಿರುದ್ಧ ಪತ್ನಿ ಗರಂ

ಓದಲೇಬೇಕು

Aaliya Siddiqui | Bollywood News: ಬಾಲಿವುಡ್​ನ ಸ್ಟಾರ್​ ಕಲಾವಿದ ನವಾಜುದ್ದೀನ್​ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ನಡುವೆ ಬಿರುಕು ಮೂಡಿದೆ. ಈ ಕುರಿತಾಗಿ ಆಲಿಯಾ ಅವರು ಬಹಿರಂಗ ಪತ್ರ ಬರೆದಿದ್ದಾರೆ.

ನವಾಜುದ್ದೀನ್ ಸಿದ್ದಿಕಿ

ನಟ ನವಾಜುದ್ದೀನ್​ ಸಿದ್ದಿಕಿ (Nawazuddin Siddiqui) ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಅವರ ಪತ್ನಿ ಆಲಿಯಾ ವಿಚ್ಛೇದನಕ್ಕಾಗಿ (Divorce) ಪಟ್ಟು ಹಿಡಿದಿದ್ದಾರೆ. ಮಕ್ಕಳು ಯಾರ ಜೊತೆ ಇರಬೇಕು ಎಂಬ ವಿಚಾರದಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಅಷ್ಟೇ ಅಲ್ಲದೇ ಪರಸ್ಪರ ಇವರಿಬ್ಬರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಮಗಳ ಹೆಸರು ಕೂಡ ಪ್ರಸ್ತಾಪ ಆಗಿದೆ. ‘ನನ್ನ ಅಪ್ರಾಪ್ತ ಮಗಳ ಜೊತೆ ನಿಮ್ಮ ಮ್ಯಾನೇಜರ್​ ಕೆಟ್ಟದಾಗಿ ನಡೆದುಕೊಂಡ’ ಎಂದು ಆಲಿಯಾ (Aaliya Siddiqui) ಅವರು ಬಹಿರಂಗ ಪತ್ರದಲ್ಲಿ ನವಾಜುದ್ದೀನ್​ ಸಿದ್ದಿಕಿಗೆ ತಿವಿದಿದ್ದಾರೆ. ಕೆಲವು ಶಾಕಿಂಗ್​ ವಿಚಾರಗಳನ್ನು ಅವರು ಈ ಪತ್ರದಲ್ಲಿ ವಿವರಿಸಿದ್ದಾರೆ. ‘ನೀವೊಬ್ಬ ಅಪಾಯಕಾರಿ, ಬೇಜವಾಬ್ದಾರಿಯುತ ತಂದೆ’ ಎಂದು ಅವರು ಆರೋಪಿಸಿದ್ದಾರೆ. ಇವುಗಳಿಗೆ ನವಾಜುದ್ದೀನ್ ಸಿದ್ದಿಕಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.

ಆಲಿಯಾ ಸಿದ್ದಿಕಿ ಬಹಿರಂಗ ಪತ್ರದಲ್ಲಿ ಏನಿದೆ?

‘ನನಗೆ ಗೊತ್ತಿಲ್ಲದಂತೆ ನನ್ನ ಅಪ್ರಾಪ್ತ ಮಗಳನ್ನು ನಿಮ್ಮ ಮ್ಯಾನೇಜರ್​ ಜೊತೆ ಬೇರೆ ದೇಶಕ್ಕೆ ಕಳಿಸಿದ್ರಿ. ಅವರಿಬ್ಬರು ಒಂದೇ ಕಡೆ ಉಳಿದುಕೊಳ್ಳುವಂತೆ ಮಾಡಿದ್ರಿ. ಆ ಸಮಯದಲ್ಲಿ ಆತ ನನ್ನ ಮಗಳನ್ನು ಅನುಚಿತವಾಗಿ ತಬ್ಬಿಕೊಂಡಿದ್ದ. ಮಗಳ ವಿರೋಧದ ನಡುವೆಯೂ ಇದೆಲ್ಲ ನಡೆದಿತ್ತು. ನಾವಿಬ್ಬರೂ ಆಕೆಯ ಜೊತೆಯಲ್ಲಿ ಇಲ್ಲದಿದ್ದಾಗ ನಿಮ್ಮ ಮ್ಯಾನೇಜರ್​ ಇದನ್ನೆಲ್ಲ ಮಾಡಿದ ಎಂಬುದನ್ನು ನೀವು ನಿರಾಕರಿಸಲು ಸಾಧ್ಯವಿಲ್ಲ’ ಎಂದು ಆಲಿಯಾ ಸಿದ್ದಿಕಿ ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ನಟ ನವಾಜುದ್ದೀನ್ ಸಿದ್ದಿಕಿಯಿಂದ ಪತ್ನಿಗೆ ಚಿತ್ರಹಿಂಸೆ; ನ್ಯಾಯಾಲಯದಲ್ಲಿ ಕೇಸ್ ಮತ್ತಷ್ಟು ಸ್ಟ್ರಾಂಗ್  

ಇದನ್ನೂ ಓದಿ‘ಆ ಮ್ಯಾನೇಜರ್​ ಮೇಲೆ ನೀವು ಈಗಲೂ ನಂಬಿಕೆ ಇಟ್ಟುಕೊಂಡಿದ್ದೀರಿ. ಅದನ್ನೆಲ್ಲ ನಾನು ವಿರೋಧಿಸಿದಾಗ ನಿಮ್ಮ ಪ್ರಭಾವ ಬಳಸಿ ನನ್ನ ಮಕ್ಕಳನ್ನು ನಿಮ್ಮ ಸುಪರ್ದಿಗೆ ಪಡೆಯಲು ಪ್ರಯತ್ನಿಸುತ್ತಿದ್ದೀರಿ. ನಿಮ್ಮ ಪಿಆರ್​ ತಂಡದವರು ಸತ್ಯವನ್ನು ತಿರುಚುವ ಮುನ್ನವೇ ನಾನು ನಿಮಗೆ ಮತ್ತು ನಿಮ್ಮ ಮ್ಯಾನೇಜರ್​ಗೆ ಜನವರಿ ತಿಂಗಳಲ್ಲೇ ಲೀಗಲ್​ ನೋಟಿಸ್​ ಕಳಿಸಿದ್ದೇನೆ. ಎಲ್ಲದನ್ನೂ ಸಾಬೀತು ಮಾಡಲು ನನ್ನ ಬಳಿ ಸಾಕ್ಷಿಗಳಿವೆ. ನಿಮ್ಮನ್ನು ಒಬ್ಬ ಹೀರೋ ಅಥವಾ ಫ್ಯಾಮಿಲಿ ಮ್ಯಾನ್​ ರೀತಿ ಬಿಂಬಿಸಲು ಪ್ರಯತ್ನಿಸುತ್ತಿರುವ ಪಿಆರ್​ ಏಜೆನ್ಸಿಗಳಿಗೆ ಇದೆಲ್ಲ ತಿಳಿದಿರಲಿ’ ಎಂದು ಆಲಿಯಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿಯ ವಿರುದ್ಧವೇ ನವಾಜುದ್ದೀನ್​ ಸಿದ್ದಿಕಿ ಅವರು ಕೆಲವು ದೂರುಗಳನ್ನು ನೀಡಿದ್ದಾರೆ. ಆ ವಿಚಾರದಲ್ಲಿ ನಟನಿಗೆ ಸಪೋರ್ಟ್ ಮಾಡಲು ವರ್ಸೋವಾ ಪೊಲೀಸರು ಕಾನೂನನ್ನು ಗಾಳಿಗೆ ತೋರಿದ್ದಾರೆ ಎಂದು ಆಲಿಯಾ ಆರೋಪಿಸಿದ್ದಾರೆ. ‘ನೀವು ನೀಡಿದ ಆಧಾರರಹಿತ ಕ್ರಿಮಿನಲ್​ ದೂರಿನ ಅನ್ವಯ ಪೊಲೀಸರು ನನ್ನನ್ನು ರಾತ್ರಿ ವೇಳೆಯಲ್ಲಿ ಠಾಣೆಗೆ ಕರೆಸಿಕೊಂಡಿದ್ದಾರೆ. ಆದರೆ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಸೇರಿ ನಿಮ್ಮ ಹಾಗೂ ಇತರರ ವಿರುದ್ಧ ನಾನು ನೀಡಿದ 5 ದೂರಿನ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಲಿಯಾ ಆರೋಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!