4.6 C
Munich
Monday, March 27, 2023

Nukkad Serial Fame Actor Sameer Kakhar Passed Away | Sameer Khakhar: ಹಿರಿಯ ನಟ ಸಮೀರ್ ಖಕ್ಕಡ್ ನಿಧನ, ಗಣ್ಯರ ಅಶ್ರುತರ್ಪಣ

ಓದಲೇಬೇಕು

ಬಾಲಿವುಡ್ ಹಿರಿಯ ನಟ ಸಮೀರ್ ಕಕ್ಕಡ್ ಇಂದು ನಿಧನ ಹೊಂದಿದ್ದಾರೆ. ಅವರು ಮಾಡಿದ್ದ ಕುಡುಕನ ಪಾತ್ರಗಳು ಬಹಳ ಜನಪ್ರಿಯತೆ ಗಳಿಸಿದ್ದವು.

ಸಮೀರ್ ಕಕ್ಕಡ್

ಬಾಲಿವುಡ್ (Bollywood) ಹಿರಿಯ ನಟ ಸಮೀರ್ ಖಕ್ಕಡ್ (Sameer Kakhar) ಇಂದು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಸಮೀರ್ ಖಕ್ಕಡ್ ತಮ್ಮ ಭಿನ್ನ ರೀತಿಯ ನಟನೆಯಿಂದ ಬಹಳ ಜನಪ್ರಿಯತೆ ಗಳಿಸಿದ್ದರು. ಅದರಲ್ಲಿಯೂ ಅವರು ನಟಿಸಿದ್ದ ಕುಡುಕನ ಪಾತ್ರಗಳು ಅವರಿಗೆ ಬಹುದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ನುಕ್ಕಡ್ ಧಾರಾವಾಹಿಯ ಅವರ ಕುಡುಕನ ಪಾತ್ರದಲ್ಲಿ ಮರೆಯಲಾಗದ ನಟನೆ ಅವರದ್ದು.

80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಹಾಸ್ಯ ಧಾರಾವಾಹಿ ನುಕ್ಕಡ್​ನಲ್ಲಿ ಖೋಪ್ಡಿ ಹೆಸರಿನ ಕುಡುಕನ ಪಾತ್ರದಲ್ಲಿ ಸಮೀರ್ ಖಕ್ಕಡ್ ನಟಿಸಿದ್ದರು. ಆ ಧಾರಾವಾಹಿಯಲ್ಲಿ ನಟಿಸಿ ಆ ನಂತರ ಜನಪ್ರಿಯರಾದ ಹಲವು ಬಾಲಿವುಡ್ ನಟರಿದ್ದಾರೆ. ಅವರಲ್ಲಿ ಸಮೀರ್ ಖಕ್ಕಡ್ ಸಹ ಒಬ್ಬರು. ನುಕ್ಕಡ್ ಧಾರಾವಾಹಿ ಮಾತ್ರವೇ ಅಲ್ಲದೆ ಕಮಲ್ ಹಾಸನ್ ನಟಸಿರುವ ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಸಿನಿಮಾದಲ್ಲಿ ಶ್ರೀಮಂತ ಕುಡುಕನ ಪಾತ್ರದಲ್ಲಿ ಸಮೀರ್ ನಟಿಸಿದ್ದಾರೆ. ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಸಹ ಸಮೀರ್ ಬಹಳ ಗಮನ ಸೆಳೆದಿದ್ದರು.

ಸಮೀರ್ ಖಕ್ಕಡ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರನ್ನು ಮುಂಬೈ, ಬೋರಿವಲಿಯ ಎಂಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ನಿಧನ ಹೊಂದಿದರು. ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಸೇರಿದಂತೆ ಹಲವು ಬಾಲಿವುಡ್ ದಿಗ್ಗಜರು ಸಮೀರ್ ಖಕ್ಕಡ್ ನಿಧನಕ್ಕೆ ಕಂಬನಿ ಮಿಡಿದು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಸಮೀರ್ ಸಹೋದರ ಗಣೇಶ್ ಹೇಳಿರುವಂತೆ, ಸಮೀರ್ ಅವರಿಗೆ ಮಂಗಳವಾರ ಉಸಿರಾಟದ ಸಮಸ್ಯೆ ಉಂಟಾಯಿತು. ಕೂಡಲೇ ಅವರನ್ನು ಬೋರಿಯವಲಿಯ ಎಂಎಂ ಆಸ್ಪತ್ರೆಗೆ ದಾಖಲಿಸಲಾಯ್ತು. ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಬೆಳಿಗ್ಗೆ 4:30 ರ ವೇಳೆಗೆ ಅವರು ನಿಧನ ಹೊಂದಿದರು. ಬಹು ಅಂಗಾಂಗ ವೈಫಲ್ಯದಿಂದ ಅವರ ಸಾವು ಸಂಭಿಸಿರುವುದಾಗಿ ವೈದ್ಯರು ಹೇಳಿದ್ದಾರೆಂದು ಗಣೇಶ್ ಮಾಹಿತಿ ನೀಡಿದ್ದಾರೆ.

ಸಮೀರ್ ಕಕ್ಕಡ್, ದೂರದರ್ಶನ ಕಾಲದ ಹಿಂದಿ ಧಾರಾವಾಹಿಗಳ ಜನಪ್ರಿಯ ನಟರಾಗಿದ್ದರು. ನುಕ್ಕಡ್ ಧಾರಾವಾಹಿ ಮಾತ್ರವೇ ಅಲ್ಲದೆ ಶಾರುಖ್ ಖಾನ್ ನಟಿಸಿದ್ದ ಸರ್ಕಸ್ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಆ ಕಾಲದ ಹಿಟ್ ಧಾರಾವಾಹಿಯಾದ ಶ್ರೀಮಾನ್ ಶ್ರೀಮತಿ, ಫರಿಂದಾ, ಅದಾಲತ್ ಧಾರಾವಾಹಿಗಳಲ್ಲಿ ನಟಿಸಿದ್ದರು. ಮಾತ್ರವಲ್ಲದೆ ಸಲ್ಮಾನ್ ಖಾನ್ ನಟನೆಯ ಜೈ ಹೋ, ಪರಿಣಿತಿ ಚೋಪ್ರಾ ನಟನೆಯ ಹಸಿ ತೋ ಫಸಿ ಸಿನಿಮಾಗಳಲ್ಲಿಯೂ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ಫರ್ಜಿ ವೆಬ್ ಸರಣಿಯಲ್ಲಿಯೂ ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!