ಸುಜಾತಾ ಹಣೆಯ ಮೇಲೆ ಕುಂಕುಮ (ಬೊಟ್ಟು, ಬಿಂದಿ) ಇಲ್ಲದಿರುವುದನ್ನು ಗಮನಿಸಿದ ಸಂಸದರು ಬೊಟ್ಟು ಯಾಕಿಟ್ಟುಕೊಂಡಿಲ್ಲ, ಗಂಡ ಬದುಕಿದ್ದಾನೆ ತಾನೇ ಅಂತೆಲ್ಲ ಗದರಲಾರಂಭಿಸಿದರು.
ಕೋಲಾರ: ಅಂತರರಾಷ್ಟ್ರೀಯ ಮಹಿಳಾ ದಿನಾನಚರಣೆಯಂದೇ (International Women’s Day) ನಗರದಲ್ಲಿ ಮಹಿಳೆಯೊಬ್ಬರು ಸಂಸದ ಎಸ್ ಮುನಿಸ್ವಾಮಿ (S Muniswamy) ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಎಕ್ಸ್ಪೋ ಒಂದರಲ್ಲಿ ಸ್ಟಾಲ್ ಹಾಕಿದ್ದ ಮುಳುಬಾಗಿಲು ನಿವಾಸಿ ಸುಜಾತಾ (Sujata) ಎನ್ನುವವರು ಹಣೆಗೆ ಕುಂಕುಮವಿಟ್ಟಿರಲಿಲ್ಲ. ಅವರು ಮರೆತಿದ್ದರೋ ಅಥವಾ ಮುಖ ತೊಳೆದುಕೊಳ್ಳುವಾಗ ತೆಗೆದಿಟ್ಟು ಪುನಃ ಹಚ್ಚಿಕೊಳ್ಳುವದನ್ನು ಮರೆತಿದ್ದರೋ ನಮಗೆ ಗೊತ್ತಿಲ್ಲ. ಆದರೆ ಅವರ ಹಣೆಯ ಮೇಲೆ ಕುಂಕುಮ (Vermilion) (ಬೊಟ್ಟು, ಬಿಂದಿ) ಇಲ್ಲದಿರುವುದನ್ನು ಗಮನಿಸಿದ ಸಂಸದರು ಬೊಟ್ಟು ಯಾಕಿಟ್ಟುಕೊಂಡಿಲ್ಲ, ಗಂಡ ಬದುಕಿದ್ದಾನೆ ತಾನೇ ಅಂತೆಲ್ಲ ಗದರಲಾರಂಭಿಸಿದರು. ಅವರ ವಾಗ್ದಾಳಿಯಿಂದ ಅವಾಕ್ಕಾದ ಸುಜಾತಾ ತಡಬಡಾಯಿಸಿ ಹಣೆಗೆ ಬೊಟ್ಟು ಇಟ್ಟುಕೊಂಡರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ